ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (AAP) ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ, ನಿವೃತ್ತ ಕರ್ನಲ್ ಅಜಯ್ ಕೊಥಿಯಾಲ್ (Ajay Kothiyal) ಅವರು ಡೆಹ್ರಾಡೂನ್‌ನಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಸಮ್ಮುಖದಲ್ಲಿ ಬಿಜೆಪಿ (BJP) ಸೇರಿದ್ದಾರೆ. ಕಳೆದ ವಾರ ಕೊಥಿಯಾಲ್ ಆಮ್ ಆದ್ಮಿ ಪಕ್ಷ ತೊರೆದಿದ್ದರು. ಎಎಪಿ ತೊರೆಯುವುದಾಗಿ ಟ್ವಿಟರ್ ನಲ್ಲಿ ಘೋಷಿಸಿದ ಕೊಥಿಯಾಲ್ ಅಲ್ಲೇ ರಾಜೀನಾಮೆ ಪತ್ರವನ್ನೂ ಟ್ವೀಟ್ ಮಾಡಿದ್ದರು. ನಾನು ಏಪ್ರಿಲ್ 19, 2021 ರಿಂದ ಮೇ 18, 2022 ರವರೆಗೆ ಆಮ್ ಆದ್ಮಿ ಪಕ್ಷದ ಸದಸ್ಯನಾಗಿದ್ದೇನೆ. ಮಾಜಿ ಸೈನಿಕರು, ಮಾಜಿ ಅರೆ ಮಿಲಿಟರಿ ಸಿಬ್ಬಂದಿ, ಹಿರಿಯರು, ಮಹಿಳೆಯರು, ಯುವಕರು ಮತ್ತು ಬುದ್ಧಿಜೀವಿಗಳ ಭಾವನೆಗಳನ್ನು ಇಟ್ಟುಕೊಂಡು ನಾನು ನಿಮಗೆ ಮೇ 18 ರಂದು ನನ್ನ ರಾಜೀನಾಮೆ ಕಳುಹಿಸುತ್ತಿದ್ದೇನೆ ಎಂದು ಕೊಥಿಯಾಲ್ ಟ್ವೀಟ್ ಮಾಡಿದ್ದರು.
Uttarakhand | AAP’s CM candidate for recently concluded Assembly elections Ajay Kothiyal joins BJP in the presence of CM Pushkar Singh Dhami in Dehradun. pic.twitter.com/ZbooDyNLei
ಇದನ್ನೂ ಓದಿ— ANI UP/Uttarakhand (@ANINewsUP) May 24, 2022
ಈ ವರ್ಷದ ಮಾರ್ಚ್‌ನಲ್ಲಿ ಆಡಳಿತಾರೂಢ ಬಿಜೆಪಿ ಉತ್ತರಾಖಂಡದಲ್ಲಿ 47 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಮರಳಿತು. ಬಿಜೆಪಿ 70 ಸ್ಥಾನಗಳ ಅಸೆಂಬ್ಲಿಯಲ್ಲಿ ಅಗತ್ಯವಿರುವ ಬಹುಮತಕ್ಕಿಂತ 11 ಹೆಚ್ಚು ಸೀಟುಗಳನ್ನು ಗಳಿಸಿತ್ತು. ಎಎಪಿಗೆ ಯಾವುದೇ ಸೀಟು ಲಭಿಸಿಲ್ಲ. ಮತ್ತೊಮ್ಮೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ 19 ಸ್ಥಾನಗಳನ್ನು ಗೆದ್ದಿದ್ದು, ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಎರಡು ಕ್ಷೇತ್ರಗಳನ್ನು ಗೆದ್ದಿತ್ತು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 6:34 pm, Tue, 24 May 22