ಲಂಚ ಪಡೆದಿದ್ದಕ್ಕೆ ಆರೋಗ್ಯ ಸಚಿವರನ್ನೇ ವಜಾಗೊಳಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್
10 ದಿನಗಳ ಹಿಂದಷ್ಟೇ ಪಂಜಾಬ್ನ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಸಚಿವ ಸಿಂಗ್ಲಾ ಅವರನ್ನು ವಜಾಗೊಳಿಸಿದ್ದಾರೆ.
ಚಂಡೀಗಢ: ತಮ್ಮ ಸಂಪುಟದ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ (Vijay Singla) ಲಂಚ ಪಡೆದಿದ್ದಾರೆ ಎಂದು ಅವರ ವಿರುದ್ಧ ದೃಢವಾದ ಸಾಕ್ಷ್ಯಾಧಾರಗಳು ದೊರೆತ ಹಿನ್ನೆಲೆಯಲ್ಲಿ ಅವರನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Punjab CM Bhagwant Mann) ವಜಾಗೊಳಿಸಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಇಂದು ಭಗವಂತ್ ಮಾನ್ ಸಿಂಗ್ಲಾ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದಾರೆ. ವಿಜಯ್ ಸಿಂಗ್ಲಾ ಅವರು ಟೆಂಡರ್‌ಗಳಲ್ಲಿ 1 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆಯಿಡುತ್ತಿದ್ದರು ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಗೊಳಿಸಿದ ಕೂಡಲೇ ಪಂಜಾಬ್ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳ ಸಿಂಗ್ಲಾ ಅವರನ್ನು ಬಂಧಿಸಿದೆ.
10 ದಿನಗಳ ಹಿಂದಷ್ಟೇ ಸಚಿವ ಸಿಂಗ್ಲಾ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಈ ಕ್ರಮ ಕೈಗೊಂಡಿದ್ದಾರೆ. ಮುಖ್ಯಮಂತ್ರಿಯೊಬ್ಬರು ತಮ್ಮದೇ ಸಂಪುಟ ಸಹೋದ್ಯೋಗಿಯ ವಿರುದ್ಧ ಈ ರೀತಿಯ ಕಠಿಣ ಕ್ರಮ ಕೈಗೊಂಡಿರುವುದು ದೇಶದ ಇತಿಹಾಸದಲ್ಲಿ ಇದು ಎರಡನೇ ಬಾರಿ. ಇದಕ್ಕೂ ಮೊದಲು, ಆಮ್ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2015ರಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ತಮ್ಮ ಸಚಿವರಲ್ಲಿ ಒಬ್ಬರನ್ನು ವಜಾಗೊಳಿಸಿದ್ದರು.
आम आदमी पार्टी का जन्म ईमानदार सिस्टम कायम करने के लिए हुआ है…@ArvindKejriwal जी ने हमेशा कहा है कि भ्रष्टाचार को बर्दाश्त नहीं करेंगे चाहे कोई अपना हो या बेगाना
स्वास्थ्य मंत्री के खिलाफ भ्रष्टाचार के सबूत मिलते ही तुरंत बर्खास्त किया…साथ ही FIR के आदेश दिए pic.twitter.com/0g9nqGteHb
— Bhagwant Mann (@BhagwantMann) May 24, 2022
ವಿಜಯ್ ಸಿಂಗ್ಲಾ ಅವರ ಭ್ರಷ್ಟಾಚಾರದ ಬಗ್ಗೆ ಸರ್ಕಾರಿ ಅಧಿಕಾರಿಯೊಬ್ಬರು 10 ದಿನಗಳ ಹಿಂದೆ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ್ದರು. ಮುಖ್ಯಮಂತ್ರಿಗಳು ಖುದ್ದಾಗಿ ಅಧಿಕಾರಿಗೆ ಭರವಸೆ ನೀಡಿದ್ದು, ನಾನು ಅವರೊಂದಿಗೆ ನಿಲ್ಲುತ್ತೇನೆ ಮತ್ತು ಯಾವುದೇ ಸಚಿವರಿಗೆ ಭಯಪಡುವ ಅಗತ್ಯವಿಲ್ಲ. ನಂತರ ಅಧಿಕಾರಿಯ ಸಹಾಯದಿಂದ ಕಾರ್ಯಾಚರಣೆಯನ್ನು ನಡೆಸಲಾಯಿತು. ಇದರಲ್ಲಿ ಸಚಿವರು ಮತ್ತು ಅವರ ಆಪ್ತರು ಒಂದು ಪರ್ಸೆಂಟ್ ಕಮಿಷನ್‌ಗೆ ಒತ್ತಾಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಯಿತು. ಸಿಂಗ್ಲಾ ಅವರ ಫೋನ್ ರೆಕಾರ್ಡಿಂಗ್ ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ಭಗವಂತ್ ಮಾನ್ ಕ್ರಮ ಕೈಗೊಂಡರು. ತಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ನಮಗೆ ಒಂದು ಅವಕಾಶ ಕೊಡಿ, ಈ ಅವಕಾಶದಲ್ಲಿ ಶಾಲೆಗಳನ್ನು ಸುಧಾರಿಸದಿದ್ದರೆ ನನ್ನನ್ನು ಹೊರಹಾಕಿ: ಗುಜರಾತಿನಲ್ಲಿ ಕೇಜ್ರಿವಾಲ್
ನಮ್ಮ ಸರ್ಕಾರದಲ್ಲಿ 1 ಪರ್ಸೆಂಟ್ ಭ್ರಷ್ಟಾಚಾರವನ್ನು ಸಹ ನಾನು ಸಹಿಸುವುದಿಲ್ಲ. ಜನರು ಬಹಳಷ್ಟು ಭರವಸೆಯೊಂದಿಗೆ ಎಎಪಿ ಸರ್ಕಾರಕ್ಕೆ ಮತ ಹಾಕಿದ್ದಾರೆ. ನಾವು ಅದಕ್ಕೆ ತಕ್ಕಂತೆ ಬದುಕಬೇಕು. ಸಿಂಗ್ಲಾ ಅವರು ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಭ್ರಷ್ಟಾಚಾರ ವಿರೋಧಿ ಮಾದರಿಗೆ ಅನುಗುಣವಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
Proud of you Bhagwant. Ur action has brought tears to my eyes.
Whole nation today feels proud of AAP https://t.co/glg6LxXqgs
— Arvind Kejriwal (@ArvindKejriwal) May 24, 2022
ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೆಸೆಯುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸಿದ ಅರವಿಂದ್ ಕೇಜ್ರಿವಾಲ್ ಅವರ ಸೈನಿಕರು ನಾವು. ನಮ್ಮ ಸರ್ಕಾರದಲ್ಲಿ ಬಿಡಿಗಾಸು ಲಂಚ ಪಡೆಯಲು ಕೂಡ ಅವಕಾಶವಿಲ್ಲ ಎಂದು ಭಗವಂತ್ ಮಾನ್ ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ರಾಜಕಾರಣದತ್ತ ತೆಲಂಗಾಣ ಸಿಎಂ ಕೆಸಿಆರ್ ಕಣ್ಣು: ಅರವಿಂದ ಕೇಜ್ರಿವಾಜ್ ಜೊತೆಗೆ ಇಂದು ಪಂಜಾಬ್ ಯಾತ್ರೆ
ವಿಜಯ್ ಸಿಂಗ್ಲಾ ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಶೇ.1ರಷ್ಟು ಕಮಿಷನ್ ನೀಡುವಂತೆ ಒತ್ತಾಯಿಸುತ್ತಿದ್ದರು. ಅದರ ದೂರು ಸಿಎಂ ಭಗವಂತ್ ಮಾನ್ ಅವರಿಗೆ ತಲುಪಿತ್ತು. ಅವರು ಅದರ ಬಗ್ಗೆ ರಹಸ್ಯವಾಗಿ ತನಿಖೆಯನ್ನೂ ಮಾಡಿದ್ದರು. ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದ ಬಳಿಕ ಸಚಿವರನ್ನು ಕರೆಸಲಾಯಿತು. ಸಚಿವರು ತಪ್ಪನ್ನು ಒಪ್ಪಿಕೊಂಡ ಬೆನ್ನಲ್ಲೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ. ಅವರ ವಿರುದ್ಧ ಪೊಲೀಸ್ ಕೇಸ್ ಕೂಡ ದಾಖಲಾಗಿದೆ. ಸಚಿವರು ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.
Aam Aadmi Party is the only party that has the integrity, courage & uprightness to take action against their own on grounds of corruption.
We saw it in Delhi, now we are witnessing it in Punjab.
ZERO TOLERANCE FOR CORRUPTION.
Commendable decision by CM @BhagwantMann
— Raghav Chadha (@raghav_chadha) May 24, 2022
ಮುಂದಿನ ಬಾರಿ ಯಾರಾದರೂ ಲಂಚ ಕೇಳಿದರೆ ನಿರಾಕರಿಸಬೇಡಿ. ನಿಮ್ಮ ಫೋನ್ ತೆಗೆದುಕೊಂಡು ಅದನ್ನು ರೆಕಾರ್ಡ್ ಮಾಡಿ ಮತ್ತು ಅದನ್ನು ನಾವು ನೀಡುವ ಸಂಖ್ಯೆಯೊಂದಿಗೆ ಹಂಚಿಕೊಳ್ಳಿ. ನಾವು ಭಗವಂತ್ ಮಾನ್ ಅವರ ವೈಯಕ್ತಿಕ ವಾಟ್ಸಾಪ್ ನಂಬರ್ ನೀಡುತ್ತೇವೆ. ಆ ನಂಬರ್ಗೆ ನೀವು ರೆಕಾರ್ಡ್ ಮಾಡಿಕೊಂಡ ವಿಡಿಯೋ ಅಥವಾ ಆಡಿಯೋವನ್ನು ಕಳುಹಿಸಿ. ನಾವು ಆ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Tue, 24 May 22