Rahul Gandhi: ಒಂದು ವರ್ಗವನ್ನು ಹೊರಗಿಟ್ಟು ಪ್ರಧಾನಿ ಮೋದಿ ಭಾರತದ ದೃಷ್ಟಿಕೋನ ನಿರ್ಮಿಸುತ್ತಿರುವುದು ತಪ್ಪು; ರಾಹುಲ್ ಗಾಂಧಿ ವಾಗ್ದಾಳಿ

TV9 Digital Desk

| Edited By: Sushma Chakre

Updated on:May 24, 2022 | 3:56 PM

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನಸಂಖ್ಯೆಯ ಎಲ್ಲಾ ಭಾಗಗಳನ್ನು ಒಳಗೊಳ್ಳದ ಭಾರತದ ದೃಷ್ಟಿಕೋನವನ್ನು ರಚಿಸುತ್ತಿದ್ದಾರೆ. ಇದು ಅನ್ಯಾಯವಾಗಿದೆ ಮತ್ತು ಭಾರತದ ಕಲ್ಪನೆಗೆ ವಿರುದ್ಧವಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

Rahul Gandhi: ಒಂದು ವರ್ಗವನ್ನು ಹೊರಗಿಟ್ಟು ಪ್ರಧಾನಿ ಮೋದಿ ಭಾರತದ ದೃಷ್ಟಿಕೋನ ನಿರ್ಮಿಸುತ್ತಿರುವುದು ತಪ್ಪು; ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ
Image Credit source: Twitter

ನವದೆಹಲಿ: ಭಾರತದ ಜನರು ಮಾತನಾಡಿದಾಗ ಮಾತ್ರ ನಮ್ಮ ದೇಶ ಜೀವಂತವಾಗಿರುತ್ತದೆ. ಯಾವಾಗ ಜನರು ಮೌನ ವಹಿಸುತ್ತಾರೋ ಆಗ ದೇಶವೂ ಸಾಯುತ್ತದೆ. ಭಾರತದಲ್ಲಿ ಯಾರನ್ನಾದರೂ ಹೊರಗಿಟ್ಟರೆ ಅದರ ವಿರುದ್ಧ ಧ್ವನಿಯೆತ್ತಲು ನಾನು ಹೆದರುವುದಿಲ್ಲ. ಅದಕ್ಕೆ ನನ್ನ ವಿರೋಧವಿದೆ ಮತ್ತು ಅದು ದೊಡ್ಡ ಅನ್ಯಾಯವಾಗಿದೆ. ಭಾರತದಲ್ಲಿ ಜಾತ್ಯತೀತ ರಾಷ್ಟ್ರವಾದರೂ ಅದನ್ನು ಎಲ್ಲದಕ್ಕೂ ಅನ್ವಯಿಸಬೇಕು. ನೀವು ಪ್ರತಿಯೊಬ್ಬ ವ್ಯಕ್ತಿಯನ್ನು ಸಹಾನುಭೂತಿಯಿಂದ ಕಾಣಬೇಕು. ಆದರೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಮ್ಮ ದೇಶದ ಜನಸಂಖ್ಯೆಯ ದೊಡ್ಡ ಭಾಗಗಳನ್ನು ಬಿಟ್ಟು ಭಾರತದ ದೃಷ್ಟಿಕೋನವನ್ನು ನಿರ್ಮಿಸುತ್ತಿದ್ದಾರೆ. ಅದನ್ನು ಭಾರತದ ದೃಷ್ಟಿಕೋನ ಎಂದು ಹೇಳಲು ಸಾಧ್ಯವಿಲ್ಲ, ಅದು ಒಂದು ದೃಷ್ಟಿಕೋನವಷ್ಟೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ಇಂಡಿಯಾ ಅಟ್ 75′ ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹಿಂದೂ ರಾಷ್ಟ್ರೀಯತೆ, ಕಾಂಗ್ರೆಸ್ ಪಕ್ಷದೊಳಗೆ ಗಾಂಧಿ ಕುಟುಂಬದ ಪಾತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು. ನಾನು ಹಿಂದೂ ಧರ್ಮವನ್ನು ಸಾಕಷ್ಟು ವಿವರವಾಗಿ ಅಧ್ಯಯನ ಮಾಡಿದ್ದೇನೆ. ಜನರನ್ನು ಕೊಲ್ಲಲು ಮತ್ತು ಜನರನ್ನು ಹೊಡೆಯಲು ಹಿಂದುತ್ವ ಎಲ್ಲಿಯೂ ಹೇಳಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಹಿತಾಸಕ್ತಿ ಕಾಪಾಡಿಕೊಳ್ಳುವುದು, ಆತ್ಮವಿಶ್ವಾಸವನ್ನು ಅಹಂಕಾರ ಎನ್ನಲಾಗದು; ರಾಹುಲ್ ಗಾಂಧಿಗೆ ಸಚಿವ ಜೈಶಂಕರ್ ತಿರುಗೇಟು

ಇದನ್ನೂ ಓದಿ

ಭಾರತ ಮಾತನಾಡಿದಾಗ ಭಾರತ ಜೀವಂತವಾಗುತ್ತದೆ. ಯಾವಾಗ ಭಾರತ ಮೌನ ವಹಿಸುತ್ತದೆಯೋ ಆಗ ಭಾರತ ಸಾಯುತ್ತದೆ. ಭಾರತಕ್ಕೆ ಮಾತನಾಡಲು ಅವಕಾಶ ನೀಡುವ ಸಂಸ್ಥೆಗಳ ಮೇಲಿನ ವ್ಯವಸ್ಥಿತ ದಾಳಿ, ಸಂಸತ್ತು, ಚುನಾವಣಾ ವ್ಯವಸ್ಥೆ, ಪ್ರಜಾಪ್ರಭುತ್ವದ ಮೂಲ ರಚನೆಯನ್ನು ನಾವು ನೋಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನಸಂಖ್ಯೆಯ ಎಲ್ಲಾ ಭಾಗಗಳನ್ನು ಒಳಗೊಳ್ಳದ ಭಾರತದ ದೃಷ್ಟಿಕೋನವನ್ನು ರಚಿಸುತ್ತಿದ್ದಾರೆ. ಇದು ಅನ್ಯಾಯವಾಗಿದೆ ಮತ್ತು ಭಾರತದ ಕಲ್ಪನೆಗೆ ವಿರುದ್ಧವಾಗಿದೆ ಎಂದು ರಾಹುಲ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ಆದರೆ ಭಾರತದ ಕಲ್ಪನೆಯ ಮೇಲೆ ದಾಳಿ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada