ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ, ರಾಜಕೀಯ ಅಸ್ಥಿರತೆ, ಸೇನೆ ತಟಸ್ಥ: ಶಹಬಾಜ್​ಗೆ ನಿರ್ವಹಿಸಲು ಆಗುತ್ತಿಲ್ಲ ಸಂಕಷ್ಟ

ಇಸ್ಲಾಮಾಬಾದ್​ಗೆ ಇಮ್ರಾನ್ ಖಾನ್ ದೀರ್ಘ ಪಾದಯಾತ್ರೆ ನಡೆಸಲಿದ್ದು, ರಾಜಕೀಯ ವಿದ್ಯಮಾನಗಳಿಂದ ಸೇನೆ ಈ ಬಾರಿ ಅಂತರ ಕಾಯ್ದುಕೊಂಡಿದೆ.

ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ, ರಾಜಕೀಯ ಅಸ್ಥಿರತೆ, ಸೇನೆ ತಟಸ್ಥ: ಶಹಬಾಜ್​ಗೆ ನಿರ್ವಹಿಸಲು ಆಗುತ್ತಿಲ್ಲ ಸಂಕಷ್ಟ
ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 24, 2022 | 1:02 PM

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ದೀರ್ಘಾವಧಿ ರಾಜಕೀಯ ಅಸ್ಥಿರತೆ, ಆರ್ಥಿಕ ಬಿಕ್ಕಟ್ಟು ನೆಲೆಸುವ ಸಾಧ್ಯತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರಿಂದ ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಒಂದಾದ ಮೇಲೆ ಮತ್ತೊಂದರಂತೆ ರಾಜಕೀಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಸ್ಲಾಮಾಬಾದ್​ಗೆ ಇಮ್ರಾನ್ ಖಾನ್ ದೀರ್ಘ ಪಾದಯಾತ್ರೆ ನಡೆಸಲಿದ್ದು, ರಾಜಕೀಯ ವಿದ್ಯಮಾನಗಳಿಂದ ಸೇನೆ ಈ ಬಾರಿ ಅಂತರ ಕಾಯ್ದುಕೊಂಡಿದೆ.

ಮೇ 25ರಂದು ಮುಂಜಾನೆ ಪೇಶಾವರ್​ದಿಂದ ಇಸ್ಲಾಮಾಬಾದ್​ಗೆ ನಡೆಯಲಿರುವ ಬೃಹತ್ ಪಾದಯಾತ್ರೆಯ ನೇತೃತ್ವವನ್ನು ಇಮ್ರಾನ್​ ಖಾನ್ ವಹಿಸಲಿದ್ದಾರೆ. ಖೈಬರ್ ಪಖ್ತುನ್​ಖ್ವಾ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಪ್ರತ್ಯೇಕ ಹೋರಾಟಗಳನ್ನು ನಡೆಸಲು ಕರೆ ನೀಡಲಾಗಿದೆ. ಬಲೂಚಿಸ್ತಾನದ ಖ್ವೆಟ್ಟಾ ಮತ್ತು ಸುಕ್ಕೂರ್​ಗಳಲ್ಲಿ ಸ್ಥಳೀಯವಾಗಿ ಪ್ರತಿಭಟನೆಗಳು ನಡೆಯಲಿದೆ. ಸಿಂಧ್ ಪ್ರಾಂತ್ಯದ ಲರ್ಕಾನಾ, ಹೈದರಾಬಾದ್ ಮತ್ತು ಕರಾಚಿ ನಗರಗಳಲ್ಲಿಯೂ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ನೀಡಲಾಗಿದೆ.

ಪಿಟಿಐ ನಾಯಕರ ಪ್ರಕಾರ ಇಮ್ರಾನ್ ಖಾನ್ ಜೂನ್ 3ರಂದು ತಮ್ಮ ಮುಂದಿನ ನಡೆಯನ್ನು ಘೋಷಿಸಬಹುದು. ಸರ್ಕಾರದ ವಿರುದ್ಧ ಇಸ್ಲಾಮಾಬಾದ್​ನಲ್ಲಿ ಅನಿರ್ದಿಷ್ಟಾವಾಧಿ ಧರಣಿ ನಡೆಸಬಹುದು ಎಂದು ಪಿಟಿಐ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಪ್ರಧಾನಿ ಶೆಹಬಾಜ್ ಷರೀಫ್, ಸಿಂಧ್ ಪ್ರಾಂತ್ಯದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನ ದೇಶಾದ್ಯಂತ ನಡೆಯುತ್ತಿದೆ.

ರಾಜಕೀಯ ಅಸ್ಥಿರತೆಯಲ್ಲಿ ಪಾಕಿಸ್ತಾನವು ನಲುಗಿರುವಾಗಲೇ ಅಲ್ಲಿನ ಸೇನಾ ವಲಯದಲ್ಲಿಯೂ ಹಲವು ಚಟುವಟಿಕೆಗಳು ನಡೆಯುತ್ತಿವೆ. ಪಾಕಿಸ್ತಾನ ಸೇನೆಯ ಮುಖ್ಯಸ್ಥರಾದ ಜನರಲ್ ಖಾಮರ್ ಜಾವೇದ್ ಬಾಜ್ವಾ ಸೇನೆಯು ತಟಸ್ಥ ನಿಲುವು ತಳೆಯಬೇಕೆಂದು ಸೂಚಿಸಿದ್ದಾರೆ. ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಶಮನಗೊಳಿಸುವುದು ಮತ್ತು ಸ್ಥಿರತೆ ಮೂಡಿಸುವುದು ನಮ್ಮ ಆದ್ಯತೆ ಎಂದು ಸ್ಪಷ್ಪಪಡಿಸಿದ್ದಾರೆ.

ನೆರೆಯ ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಆಡಳಿತ ಆರಂಭವಾದ ನಂತರ ಪಾಕಿಸ್ತಾನಕ್ಕೆ ಭದ್ರತೆಯ ಹೊಸ ಸವಾಲು ಎದುರಾಗಿದೆ. ಸುನ್ನಿ ಪಷ್ತೂನ್​ಗಳು ಅಫ್ಘಾನಿಸ್ತಾನ-ಪಾಕಿಸ್ತಾನವನ್ನು ಪ್ರತ್ಯೇಕಿಸುವ ಡುರಾಂಡ್​ ರೇಖೆಗೆ ಮಾನ್ಯತೆ ನೀಡುತ್ತಿಲ್ಲ. ಹೀಗಾಗಿ ಪಾಕಿಸ್ತಾನವು ಪೂರ್ವದಲ್ಲಿ ಭಾರತ ಮತ್ತು ಪಶ್ಚಿಮದಲ್ಲಿ ಅಫ್ಘಾನಿಸ್ತಾನದೊಂದಿಗೆ ಏಕಕಾಲಕ್ಕೆ ಭದ್ರತೆಯ ಆತಂಕ ಎದುರಿಸಬೇಕಾಗಿ ಬಂದಿದೆ.

ಪಾಕಿಸ್ತಾನದಲ್ಲಿ ಕುಟುಂಬ ರಾಜಕಾರಣ ಕೊನೆಗೊಳಿಸಿ, ಜನಮನ್ನಣೆ ಗಳಿಸಿದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ವಾದಿಸುತ್ತಿರುವ ಇಮ್ರಾನ್ ಖಾನ್ ಅವಧಿಪೂರ್ವ ಚುನಾವಣೆ ನಡೆಸಬೇಕೆಂದು ಆಗ್ರಹಿಸುತ್ತಿದ್ದಾರೆ. ಪಾಕಿಸ್ತಾನದ ಯುವಜನರ ನಡುವೆ ಇರುವ ಜನಪ್ರಿಯತೆ ತಮ್ಮನ್ನು ಮತ್ತೆ ಅಧಿಕಾರಕ್ಕೆ ಮರಳಲು ಸಹಾಯ ಮಾಡಬಹುದು ಎಂದು ಇಮ್ರಾನ್ ಭಾವಿಸಿದ್ದಾರೆ.

ಆದರೆ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅವರೊಂದಿಗಿರುವ ರಾಜಕಾರಿಣಿಗಳು ಈ ನಿಲುವು ಒಪ್ಪುತ್ತಿಲ್ಲ. ಅವರು ಅಕ್ಟೋಬರ್ 2023ರವರೆಗಿನ ಪೂರ್ಣ ಅವಧಿಗೆ ಅಧಿಕಾರದಲ್ಲಿ ಇರಬೇಕೆಂದು ಬಯಸುತ್ತಿದ್ದಾರೆ. ಬಾಹ್ಯ ಸಾಲ, ಹಣದುಬ್ಬರ ಮತ್ತು ಏರುತ್ತಿರುವ ತೈಲಬೆಲೆಗಳಿಂದ ಪಾಕಿಸ್ತಾನದ ಆರ್ಥಿಕತೆ ಸಂಕಷ್ಟ ಸ್ಥಿತಿಗೆ ತಲುಪಿದೆ. ಪಾಕಿಸ್ತಾನದ ರೂಪಾಯಿ ಮೌಲ್ಯವು ಡಾಲರ್ ಎದುರು ಸತತ ಕುಸಿತ ಕಾಣುತ್ತಿದೆ.

ಪಾಕಿಸ್ತಾನದ ಸೇನೆಯ ಮುಖ್ಯಸ್ಥರಾಗಿರುವ ಜನರಲ್ ಬಾಜ್ವಾ ಅವರಿಗೆ ಇದೇ ನವೆಂಬರ್ 11ಕ್ಕೆ 62 ವರ್ಷ ಪೂರ್ಣಗೊಳ್ಳಲಿದೆ. ಅವರು ಸೇವಾ ವಿಸ್ತರಣೆಯ ನಿರೀಕ್ಷೆಯಲ್ಲಿದ್ದಾರೆ. ಸೇನೆಯ ವಿರುದ್ಧ ಇಮ್ರಾನ್ ಖಾನ್ ಹಲವು ಆರೋಪಗಳನ್ನು ಮಾಡಿದ್ದರು. ಹೀಗಾಗಿ ಪ್ರಸ್ತುತ ಪಾಕಿಸ್ತಾನದ ಸೇನೆಯು ರಾಜಕಾರಣದಿಂದ ಪ್ರಜ್ಞಾಪೂರ್ವಕ ಅಂತರ ಕಾಯ್ದುಕೊಂಡಿದೆ. ಆರ್ಥಿಕ ಸಂಕಷ್ಟದಿಂದ ಪಾಕಿಸ್ತಾನದ ಭದ್ರತೆಗೆ ಧಕ್ಕೆ ಬರಬಾರದು ಎಂದು ಹಲವು ವೇದಿಕೆಗಳಲ್ಲಿ ಬಾಜ್ವಾ ಸಲಹೆ ಮಾಡಿದ್ದಾರೆ.

ಶಹಬಾಜ್​ರ ಅಣ್ಣ, ಮಾಜಿ ಪ್ರಧಾನಿ ನವಾಜ್ ಷರೀಫ್ ಸಹ ಅವಧಿಪೂರ್ವ ಚುನಾವಣೆಯ ಪರವಾಗಿದ್ದಾರೆ. ಜನರಲ್ ಬಾಜ್ವಾ ಅವರ ಸೇವಾ ನಿವೃತ್ತಿಯ ಬಗ್ಗೆ ಹೊಸ ಸರ್ಕಾರವೇ ಅಗತ್ಯ ಕ್ರಮ ತೆಗೆದುಕೊಳ್ಳಲಿ ಎನ್ನುವುದು ಅವರ ನಿಲುವಾಗಿದೆ. ಪಾಕಿಸ್ತಾನದ ಆರ್ಥಿಕ ದುಸ್ಥಿತಿಗೆ ಕಾರಣ ಎನ್ನುವ ಕಾರಣಕ್ಕೆ ಇಮ್ರಾನ್ ವಿರುದ್ಧ ಅಲ್ಲಿನ ಜನರಲ್ಲಿ ಆಕ್ರೋಶ ಮಡುಗಟ್ಟಿದೆ. ಈ ಆಕ್ರೋಶವನ್ನು ಬಂಡವಾಳವಾಗಿಸಿಕೊಳ್ಳುವುದು ನವಾಜ್ ಷರೀಫ್​ರ ಉದ್ದೇಶ. ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆಯಿಂದ ಪಾಕಿಸ್ತಾನ ಸದ್ಯ ಚುಕ್ಕಾಣಿಯಿಲ್ಲದ ನೌಕೆಯಂತೆ ಆಗಿದೆ.

Published On - 1:02 pm, Tue, 24 May 22

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್