Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರ್ತ್​ಡೇ ಪಾರ್ಟಿಯಲ್ಲಿ ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾರ

ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ 8 ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು ಆರ್ಕೆಸ್ಟ್ರಾ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ನೃತ್ಯಗಾರ್ತಿಯರನ್ನು ಹಣೆಗೆ ಬಂದೂಕಿಟ್ಟು ಅಪಹರಿಸಿ 10 ಕಿ.ಮೀ ದೂರಕ್ಕೆ ಕರೆದೊಯ್ದಿದ್ದಾರೆ.

ಬರ್ತ್​ಡೇ ಪಾರ್ಟಿಯಲ್ಲಿ ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾರ
ಪೊಲೀಸ್ Image Credit source: Amarujala.com
Follow us
ನಯನಾ ರಾಜೀವ್
|

Updated on: Sep 11, 2024 | 9:12 AM

ಬರ್ತ್​ ಡೇ ಪಾರ್ಟಿಯಲ್ಲಿ ನೃತ್ಯ ಮಾಡಲು ನಿರಾಕರಿಸಿದ ಇಬ್ಬರು ನೃತ್ಯಗಾರ್ತಿಯರ ಮೇಲೆ 8 ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ. ಆರೋಪಿಗಳು ಆರ್ಕೆಸ್ಟ್ರಾ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ನೃತ್ಯಗಾರ್ತಿಯರನ್ನು ಹಣೆಗೆ ಬಂದೂಕಿಟ್ಟು ಅಪಹರಿಸಿ 10 ಕಿ.ಮೀ ದೂರಕ್ಕೆ ಕರೆದೊಯ್ದಿದ್ದಾರೆ.

ಆರೋಪಿಗಳಲ್ಲಿ ಒಬ್ಬನ ಮನೆಗೆ ಕರೆದೊಯ್ದಿದ್ದಾರೆ, ಬರ್ತ್​ ಡೇ ಪಾರ್ಟಿಯಲ್ಲಿ ನೃತ್ಯ ಮಾಡುವಂತೆ ಆ ಇಬ್ಬರು ಯುವತಿಯರ ಬಳಿ ಕೇಳಿದ್ದಾರೆ. ಆದರೆ ಅವರು ನಿರಾಕರಿಸಿದ್ದಕ್ಕೆ ಕುಡಿದ ಮತ್ತಿನಲ್ಲಿ ಇಬ್ಬರ ಮೇಲೆ 8 ಮಂದಿ ಅತ್ಯಾಚಾರವೆಸಗಿದ್ದಾರೆ.

ಇದೀಗ ಪೊಲೀಸರು ಅಪರಾಧಕ್ಕೆ ಬಳಸಿದ್ದ ಎರಡು ಎಸ್‌ಯುವಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಎಂಟು ಆರೋಪಿಗಳ ವಯಸ್ಸು 30 ವರ್ಷಕ್ಕಿಂತ ಕಡಿಮೆ. ಆರೋಪಿಗಳನ್ನು ಖುಷಿನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಯುವತಿಯರ ವೈದ್ಯಕೀಯ ಪರೀಕ್ಷೆ ಮುಗಿದಿದ್ದು ವರದಿಗಾಗಿ ಕಾಯಲಾಗುತ್ತಿದೆ.

ಮತ್ತಷ್ಟು ಓದಿ:

ಸೆಪ್ಟೆಂಬರ್ 8ರ ರಾತ್ರಿ ಘಟನೆ ಕುರಿತು ಪೊಲೀಸರಿಗೆ ದೂರು ಬಂದಿತ್ತು.ರೋಪಿಗಳನ್ನು ನಾಗೇಂದ್ರ ಯಾದವ್, ಅಸನ್ ಸಿಂಗ್, ಕ್ರಿಶ್ ತಿವಾರಿ, ಅರ್ಥಕ್ ಸಿಂಗ್, ಅಜಿತ್ ಸಿಂಗ್ ಮತ್ತು ವಿವೇಕ್ ಸೇಠ್ ಎಂದು ಗುರುತಿಸಲಾಗಿದೆ. ಇತರ ಇಬ್ಬರು ಆರೋಪಿಗಳು – ನಿಸಾರ್ ಅನ್ಸಾರಿ ಮತ್ತು ಆದಿತ್ಯ ಸಾಹ್ನಿ, ಸೆಪ್ಟೆಂಬರ್ 10 ರಂದು ಪೊಲೀಸರು ನಡೆಸಿದ ಎನ್​ಕೌಂಟರ್​ನಲ್ಲಿ ಸಿಕ್ಕಿಬಿದ್ದಿದ್ದರು.

ಇಬ್ಬರ ಕಾಲಿಗೆ ಗುಂಡು ತಗುಲಿದ್ದು, ಪ್ರಥಮ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ತಮ್ಮ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ತಡರಾತ್ರಿಯಾಗಿದ್ದರಿಂದ ಯುವತಿಯರು ನೃತ್ಯ ಮಾಡಲು ನಿರಾಕರಿಸಿದ್ದರು. ಬಂದೂಕು ತೋರಿಸಿ ಅಪಹರಿಸಿ ಅಪಹರಿಸಿದ್ದರು.