Accident: ಭೀಕರ ಅಪಘಾತ; ಭತ್ತದ ಗದ್ದೆಯಿಂದ ಮನೆಗೆ ಹಿಂದಿರುಗುತ್ತಿದ್ದ 8 ಮಹಿಳಾ ಕೃಷಿ ಕಾರ್ಮಿಕರು ಸಾವು

ಭತ್ತದ ಗದ್ದೆಯಿಂದ ಮನೆಗಳಿಗೆ ಹಿಂದಿರುಗುತ್ತಿದ್ದ ಮಹಿಳಾ ಕೃಷಿ ಕಾರ್ಮಿಕರಿದ್ದ ಆಟೊಗೆ ದಕ್ಷಿಣ ಬಂಗಾಳ ಸಾರಿಗೆ ನಿಗಮದ ಬಸ್ ಮುಖಾಮುಖಿಯಾಯಿತು.

Accident: ಭೀಕರ ಅಪಘಾತ; ಭತ್ತದ ಗದ್ದೆಯಿಂದ ಮನೆಗೆ ಹಿಂದಿರುಗುತ್ತಿದ್ದ 8 ಮಹಿಳಾ ಕೃಷಿ ಕಾರ್ಮಿಕರು ಸಾವು
ಅಪಘಾತದಲ್ಲಿ 8 ಮಂದಿ ಮೃತಪಟ್ಟಿದ್ದಾರೆ.
Edited By:

Updated on: Aug 10, 2022 | 8:09 AM

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಮಂಗಳವಾರ (ಆಗಸ್ಟ್ 9) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) 9 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಬಿರ್ಭೂಮ್ ಜಿಲ್ಲೆಯ ಮಲ್ಲಾರ್​ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 60ರಲ್ಲಿ ಘಟನೆ ನಡೆದಿದೆ. ಭತ್ತದ ಗದ್ದೆಯಿಂದ ಮನೆಗಳಿಗೆ ಹಿಂದಿರುಗುತ್ತಿದ್ದ ಮಹಿಳಾ ಕೃಷಿ ಕಾರ್ಮಿಕರಿದ್ದ ಆಟೊಗೆ ದಕ್ಷಿಣ ಬಂಗಾಳ ಸಾರಿಗೆ ನಿಗಮದ (South Bengal State Transport Corporation – SBSTC) ಬಸ್ ಮುಖಾಮುಖಿಯಾಯಿತು.

ಮೃತರ ಪೈಕಿ 8 ಮಂದಿ ಕೃಷಿ ಕಾರ್ಮಿಕರಾಗಿದ್ದರೆ, ಮತ್ತೊಬ್ಬಾತ ಆಟೊದ ಚಾಲಕನಾಗಿದ್ದಾನೆ. ಶವಗಳನ್ನು ಆರಂಬಾಗ್​ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಸ್ಸು ದುರ್ಗಾಪುರದಿಂದ ಆರಂಬಾಗ್​ಗೆ ಬರುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ₹ 2 ಲಕ್ಷ, ಗಾಯಾಳುಗಳಿಗೆ ತಲಾ ₹ 50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳದ ರಸ್ತೆ ಅಪಘಾತದ ವಿಷಯ ತಿಳಿದು ತುಂಬಾ ನೋವಾಯಿತು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ. ಅಪಘಾತದಲ್ಲಿ ಆಪ್ತರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು ಗಾಯಾಳುಗಳು ಬೇಗ ಗುಣಮಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

Published On - 6:43 am, Wed, 10 August 22