Accident: ಟಾಟಾ ಏಸ್, ಲಾರಿ ನಡುವೆ ಡಿಕ್ಕಿ, 6 ಸಾವು, 5 ಜನರಿಗೆ ಗಾಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 07, 2022 | 3:08 PM

ತಿರುಚ್ಚಿ-ಚೆನ್ನೈ ರಾಷ್ಟ್ರೀಯ (Trichy-Chennai) ಹೆದ್ದಾರಿಯಲ್ಲಿ ಭೀಕರ ಅಪಘಾತದಲ್ಲಿ 6 ಜನ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂತಗಂನಲ್ಲಿ ತಿರುಚ್ಚಿ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ 15 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್(Tata Ace) ವಾಹನವು ಲಾರಿಗೆ ಡಿಕ್ಕಿ ಹೊಡೆದು ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ.

Accident: ಟಾಟಾ ಏಸ್, ಲಾರಿ ನಡುವೆ ಡಿಕ್ಕಿ, 6 ಸಾವು, 5 ಜನರಿಗೆ ಗಾಯ
Accident Tata Ace, collision between lorry, 6 dead, 5 injured
Follow us on

ಚೆಂಗಲ್ಪಟ್ಟು: ತಿರುಚ್ಚಿ-ಚೆನ್ನೈ ರಾಷ್ಟ್ರೀಯ (Trichy-Chennai) ಹೆದ್ದಾರಿಯಲ್ಲಿ ಭೀಕರ ಅಪಘಾತದಲ್ಲಿ 6 ಜನ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂತಗಂನಲ್ಲಿ ತಿರುಚ್ಚಿ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ 15 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್(Tata Ace) ವಾಹನವು ಲಾರಿಗೆ ಡಿಕ್ಕಿ ಹೊಡೆದು ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ. ಎದುರಿನಿಂದ ಟಾಟಾ ಏಸ್ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಹಿಂದೆ ಬಂದ ಮತ್ತೊಂದು ವಾಹನ ಟಾಟಾ ಏಸ್‌ಗೂ ಡಿಕ್ಕಿ ಹೊಡೆದಿದೆ.

ಆರು ಮಂದಿ ಮೃತರು, ಐವರು ಗಾಯಗೊಂಡಿದ್ದಾರೆ

ಎರಡು ವಾಹನಗಳ ನಡುವೆ ಟಾಟಾ ಏಸ್ ನಜ್ಜುಗುಜ್ಜಾಗಿದ್ದರಿಂದ ಆರು ಮಂದಿ ಸಾವನ್ನಪ್ಪಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಗೊಂಡ ಪ್ರಯಾಣಿಕರನ್ನು ರಕ್ಷಿಸಿ ಚೆಂಗಲಪಟ್ಟು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: ಬಿಬಿಎಂಪಿ ಕಸದ ಲಾರಿ ಹರಿದು ಬೈಕ್ ಸವಾರರಿಬ್ಬರ ದುರ್ಮರಣ

ಮೃತರ ಕುಟುಂಬಗಳಿಗೆ ಸಿಎಂ ನಿಧಿ ಹಂಚಿಕೆ
ಅಪಘಾತದಲ್ಲಿ ಮೃತಪಟ್ಟ ಆರು ಮಂದಿಯ ಕುಟುಂಬಗಳಿಗೆ ಸಿಎಂ ಎಂಕೆ ಸ್ಟಾಲಿನ್ ತಲಾ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಕಾರ್ತಿಕ್ ದೀಪಂ ಆಚರಣೆ ಮುಗಿಸಿ ಪ್ರಯಾಣಿಕರೊಂದಿಗೆ ಟಾಟಾ ಏಸ್ ತಿರುವಣ್ಣಾಮಲೈನಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ