ಡೆಲ್ಟಾ ರೂಪಾಂತರಿ ವಿರುದ್ಧ ಕೋವಿಡ್-19 ಲಸಿಕೆಗಳ ಪ್ರಭಾವ ಕಡಿಮೆಯಾಗುತ್ತಿದೆ ಎಂದ ವಿಶ್ವ ಆರೋಗ್ಯ ಸಂಸ್ಥೆ
ಕೊರೋನಾವೈರಸ್ ರೂಪಾಂತರಿ ಡೆಲ್ಟಾ ವಿರುದ್ಧ ಕೋವಿಡ್-19 ಲಸಿಕೆಗಳ ಪರಿಣಾಮಕಾರಿತ್ವ ಶಕ್ತಿ ಕುಂದುತ್ತಿರುವ ಸುಳಿವು ಸಿಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಸೋಮವಾರ ತಿಳಿಸಿದ್ದಾರೆ. ಆದಾಗ್ಯೂ, ತೀವ್ರ ಸ್ವರೂಪದ ಅನಾರೋಗ್ಯ ಮತ್ತು ಸಾವನ್ನು ತಡೆಗಟ್ಟುವಲ್ಲಿ ಲಸಿಕೆಗಳು ಇನ್ನೂ ಪರಿಣಾಮಕಾರಿ ಎನ್ನುವುದು ಖಚಿತಪಟ್ಟಿದೆ. ಮುಂಬರುವ ದಿನಗಳಲ್ಲಿ, ಕೊರೋನಾ ವೈರಸ್ ಗೊಂಚಲುಗಳಲ್ಲಿ ರೂಪಾಂತರಗೊಳ್ಳಲಿದೆ ಎಂದು ಹೇಳಿರುವ ಡಬ್ಲ್ಯುಎಚ್‌ಒ ಅಧಿಕಾರಿಯು ಲಸಿಕೆಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡದಿರುವ ಸಾಧ್ಯತೆಯಿದೆ ಎಂದಿದ್ದಾರೆ. ಡೆಲ್ಟಾ ಅಥವಾ B.1.617.2 ಪ್ರಭೇಧದಲ್ಲಿ ಆಗಿರುವ […]
ಕೊರೋನಾವೈರಸ್ ರೂಪಾಂತರಿ ಡೆಲ್ಟಾ ವಿರುದ್ಧ ಕೋವಿಡ್-19 ಲಸಿಕೆಗಳ ಪರಿಣಾಮಕಾರಿತ್ವ ಶಕ್ತಿ ಕುಂದುತ್ತಿರುವ ಸುಳಿವು ಸಿಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಸೋಮವಾರ ತಿಳಿಸಿದ್ದಾರೆ. ಆದಾಗ್ಯೂ, ತೀವ್ರ ಸ್ವರೂಪದ ಅನಾರೋಗ್ಯ ಮತ್ತು ಸಾವನ್ನು ತಡೆಗಟ್ಟುವಲ್ಲಿ ಲಸಿಕೆಗಳು ಇನ್ನೂ ಪರಿಣಾಮಕಾರಿ ಎನ್ನುವುದು ಖಚಿತಪಟ್ಟಿದೆ. ಮುಂಬರುವ ದಿನಗಳಲ್ಲಿ, ಕೊರೋನಾ ವೈರಸ್ ಗೊಂಚಲುಗಳಲ್ಲಿ ರೂಪಾಂತರಗೊಳ್ಳಲಿದೆ ಎಂದು ಹೇಳಿರುವ ಡಬ್ಲ್ಯುಎಚ್‌ಒ ಅಧಿಕಾರಿಯು ಲಸಿಕೆಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡದಿರುವ ಸಾಧ್ಯತೆಯಿದೆ ಎಂದಿದ್ದಾರೆ.
ಡೆಲ್ಟಾ ಅಥವಾ B.1.617.2 ಪ್ರಭೇಧದಲ್ಲಿ ಆಗಿರುವ ರೂಪಾಂತರದಿಂದಾಗಿ ಡೆಲ್ಟಾ ಪ್ಲಸ್ ರೂಪುಗೊಂಡಿದೆ, ಇದನ್ನು ಪ್ರಥಮ ಬಾರಿಗೆ ಭಾರತದಲ್ಲಿ ಪತ್ತೆ ಮಾಡಲಾಗಿದ್ದು ಇಲ್ಲಿ ಮತ್ತು ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಇತರ ಕೆಲ ರಾಷ್ಟ್ರಗಳಲ್ಲಿ ಕೋವಿಡ್-19 ಸೋಂಕಿನ ಎರಡನೇ ಅಲೆ ಏಳಲು ಈ ರೂಪಾಂತರಿಯೇ ಕಾರಣವೆಂದು ಹೇಳಲಾಗುತ್ತಿದೆ.
ಬಹಳ ತೀವ್ರ ಗತಿಯಲ್ಲಿ ಹರಡುವ ಈ ರೂಪಾಂತರಿ ವೈರಸ್ ಕೊರೋನಾದ ನಾಲ್ಕನೇ ರೂಪಾಂತರಿ ವೈರಸ್ ಎಂದು ವಿಜ್ಞಾನಿಗಳು ಹೇಳುತ್ತಾರೆ. ಯುಕೆಯಲ್ಲಿ ಮತ್ತೊಮ್ಮೆ ಸೋಂಕು ಹರಡರಾರಂಭಿಸಿದ್ದು ಪ್ರತಿದಿನ ಸೋಂಕಿನ ಪ್ರಕರಣಗಳು 10,000 ಕ್ಕಿಂತ ಹೆಚ್ಚಾಗುತ್ತಿವೆ.
ದೇಶದ ಜನರಿಗೆ ಈ ಬಾರಿಯ ‘ಚಳಿಗಾಲ ಹಿತವಾಗಿರಲಾರದು’ ಎಂದು ಬ್ರಿಟನ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ ಅವರು ಎಚ್ಚರಿಸಿರುರಾದರೂ, ಅಲ್ಲಿನ ಸದ್ಯದ ಸ್ಥಿತಿ, ಜುಲೈ 19ರಂದು ಲಾಕ್ಡೌನ್ ಅನ್ನು ತೆರವುಗೊಳಿಸಲು ಪೂರಕವಾಗಿದೆ ಎಂದು ವರದಿಯಾಗಿತ್ತು.
ರವಿವಾರದಂದು 9,284 ಹೊಸ ಸೋಂಕಿನ ಪ್ರಕರಣಗಳು ವರದಿಯಾದ ನಂತರ ಜಾನ್ಸನ್ ಜನರನ್ನು ಎಚ್ಚರಿಸಿದ್ದಾರೆ. ಜೂನ್ 21ರಂದು ಬ್ರಿಟನ್ನಲ್ಲಿ ಲಾಕ್ಡೌನ್ ಅನ್ನು ತೆರವುಗೊಳಿಸಬೇಕೆಂಬ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿತ್ತು, ಅದರೆ ಡೆಲ್ಟಾ ರೂಪಾಂತರಿಯು ಅದನ್ನು ಮತ್ತೊಂದು ತಿಂಗಳ ಅವಧಿಗೆ ವಿಸ್ತರಿಸುವಂಥ ಅನಿವಾರ್ಯತೆ ಸೃಷ್ಟಿಸಿದೆ.
ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಡೆಲ್ಟಾ ರೂಪಾಂತರಿ ವೈರಸ್ನಿಂದ ಸೃಷ್ಟಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಪ್ರತಿವಾರ ಶೇಕಡಾ 30 ರಂತೆ ಹೆಚ್ಚುತ್ತಿವೆ ಎಂದು ಜಾನ್ಸನ್ ಹೇಳಿದ್ದಾರೆ. ಅಸ್ಪತ್ರೆಗಳಿಗೆ ಮತ್ತು ಐ ಸಿ ಯುಗಳಿಗೆ ಭರ್ತಿಯಾಗುತ್ತಿರುವವರ ಸಂಖ್ಯೆ ಮೊದಲಿನಂತೆಯೇ ಇದೆ ಎಂದು ಬ್ರಿಟನ್ ಪ್ರಧಾನಿ ಹೇಳಿದ್ದಾರೆ.
ರಷ್ಯಾದಲ್ಲೂ ಸತತವಾಗಿ ನಾಲ್ಕನೇ ದಿನ 17,000 ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು, ಅಲ್ಲೂ ಡೆಲ್ಟಾ ರೂಪಾಂತರಿಯೇ ಜನರನ್ನು ಅನಾರೋಗ್ಯಕ್ಕೀಡು ಮಾಡುತ್ತಿದೆ ಎಂದು ದೂಷಿಲಾಗಿದೆ. ಲಸಿಕೆ ಹಾಕಿಸಿಕೊಳ್ಳಲು ದೇಶದಾದ್ಯಂತ ನಡೆಯುತ್ತಿದ್ದ ಅಭಿಯಾನವೂ ಜನರ ಮೇಲೆ ಪ್ರಭಾವ ಬೀರುವುದು ಕಡಿಮೆಯಾಗಿದೆ ಎಂದು ಮೂಲಗಳಿಂದ ಗೊತ್ತಾಗಿದೆ. ದೇಶದ ಕೆಲ ಪ್ರಾಂತ್ಯಗಳಲ್ಲಿ ಕೋವಿಡ್ ಸ್ಥಿತಿ ಬಿಗಡಾಯಿಸುತ್ತಿದೆ ಎಂದು ಅಧ್ಯಕ್ಷ ವ್ಲಾದಿಮರ್ ಪುತಿನ್ ಎಚ್ಚರಿಸಿದ್ದಾರೆ.
ಹಾಗೆಯೇ, ಫೋರ್ಚುಗಲ್ ದೇಶದ ರಾಜಧಾಣಿ ಲಿಸ್ಬನ್ ಪ್ರದೇಶದಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಹೊಸ ಸೋಂಕಿನ ಪ್ರಕರಣಗಳನ್ನು ಉಂಟು ಮಾಡುತ್ತಿದೆ ಎಂದು ಪೋರ್ಚುಗೀಸ್ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಲಿಸ್ಬನ್ ನಗರ ಪ್ರಾಂತ್ಯದಲ್ಲಿ ಪತ್ತೆಯಾಗಿರುವ ಕೋವಿಡ್-19 ಸೋಂಕಿನ ಪ್ರಕರಣಗಳಲ್ಲಿ ಶೇಕಡಾ 60 ರಷ್ಟು ಪ್ರಕರಣಗಳು, ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಡೆಲ್ಟಾ ರೂಪಾಂತರಿ ಸೃಷ್ಟಿಸಿದೆ ಎಂದು ಫೋರ್ಚುಗಲ್ ರಾಷ್ಟ್ರೀಯ ಆರೋಗ್ಯ ಕೇಂದ್ರ ರವಿವಾರದಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Delta plus b1 617.2: ಭಾರತದಲ್ಲಿ ಪತ್ತೆಯಾಗಿದೆ ಡೆಲ್ಟಾ ಪ್ಲಸ್ ರೂಪಾಂತರಿ; ಸದ್ಯ ಕಳವಳದ ಅಗತ್ಯ ಇಲ್ಲ ಎಂದರು ವಿಜ್ಞಾನಿಗಳು