
ಪಣಜಿ: ಸದಾ ಕಾಂಟ್ರವರ್ಸಿಯ ಸುಳಿಯಲ್ಲಿರುವ ಬಾಲಿವುಡ್ ನಟಿ ಪೂನಂ ಪಾಂಡೆ ಇದೀಗ, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಗೋವಾದ ಚಪೋಲಿ ಡ್ಯಾಂ ಬಳಿ ಅಶ್ಲೀಲ ವಿಡಿಯೋ ಒಂದನ್ನು ಚಿತ್ರೀಕರಿಸಿ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.
ಗೋವಾದ ಫಾರ್ವಡ್ ಪಾರ್ಟಿಯ ಮಹಿಳಾ ಕಾರ್ಯಕರ್ತೆಯರು ನೀಡಿದ ದೂರಿನನ್ವಯ ಪೊಲೀಸರು ನಟಿಯನ್ನು ಸದ್ಯ ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಈ ವಿವಾದದ ಬೆಡಗಿ ತನ್ನ ಪತಿ ವಿರುದ್ಧ ಕಿರುಕುಳದ ದೂರು ದಾಖಲಿಸಿ ಆತನನ್ನು ಅರೆಸ್ಟ್ ಮಾಡಿಸಿದ್ದಳು. ಆದರೆ ಬಳಿಕ, ಸತಿ ಪತಿ ಮತ್ತೆ ಒಂದಾಗಿದ್ದರು.
Published On - 7:15 pm, Thu, 5 November 20