Adani Group: ಫೆ.10 ರಂದು ಸುಪ್ರೀಂನಲ್ಲಿ ಅದಾನಿ ಸಂಸ್ಥೆಗಳ ವಿರುದ್ಧದ ಹಿಂಡನ್‌ಬರ್ಗ್ ವರದಿಯ ತನಿಖೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ

|

Updated on: Feb 09, 2023 | 12:02 PM

ಅದಾನಿ ಸಂಸ್ಥೆಗಳ ಮೇಲಿನ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಮನವಿಯನ್ನು ಫೆ.10 ರಂದು ವಿಚಾರಣೆ ಮಾಡಲು ಸುಪ್ರೀಂಕೋರ್ಟ್​ ಒಪ್ಪಿಕೊಂಡಿದೆ.

Adani Group: ಫೆ.10 ರಂದು ಸುಪ್ರೀಂನಲ್ಲಿ ಅದಾನಿ ಸಂಸ್ಥೆಗಳ ವಿರುದ್ಧದ ಹಿಂಡನ್‌ಬರ್ಗ್ ವರದಿಯ ತನಿಖೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ
ಸುಪ್ರೀಂಕೋರ್ಟ್​
Follow us on

ಅದಾನಿ ಸಂಸ್ಥೆಗಳ ಮೇಲಿನ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಮನವಿಯನ್ನು ಫೆ.10 ರಂದು ವಿಚಾರಣೆ ಮಾಡಲು ಸುಪ್ರೀಂಕೋರ್ಟ್​ ಒಪ್ಪಿಕೊಂಡಿದೆ.

ಅರ್ಜಿ ಸಲ್ಲಿಸಿರುವ ವಕೀಲ ವಿಶಾಲ್ ತಿವಾರಿ ಅವರು ಗುರುವಾರ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ನೇತೃತ್ವದ ಪೀಠದ ಮುಂದೆ ತುತ್ತಾಗಿ ವಿಚಾರಣೆ ನಡೆಸುವಂತೆ ಕೋರಿದರು. ಹಿಂಡೆನ್​ಬರ್ಗ್​ ಕಳೆದ ವಾರ ಅದಾನಿ ಗ್ರೂಪ್ ವಿರುದ್ಧ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಅಕೌಂಟಿಂಗ್ ವಂಚನೆಯ ಬಗ್ಗೆ ಆರೋಪ ಮಾಡಿದೆ.

ಹಿಂಡೆನ್​ಬರ್ಗ್​ ವರದಿಯ ಬಗ್ಗೆ ಅದಾನಿ ಗ್ರೂಪ್ ಬಿಡುಗಡೆಗೊಳಿಸಿರುವ 413 ಪುಟಗಳ ಪ್ರತಿಕ್ರಿಯೆಗೆ ಹಿಂಡೆನ್​ಬರ್ಗ್ ಪ್ರತ್ಯುತ್ತರ ನೀಡಿದ್ದು, ಅದಾನಿ ಗ್ರೂಪ್ ಜಂಬದ ಪ್ರತಿಕ್ರಿಯೆ ನೀಡುವ ಮೂಲಕ ನಾವು ಎತ್ತಿರುವ ಪ್ರಮುಖ ಆರೋಪಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದೆ.
ಅದಾನಿ ಗ್ರೂಪ್ ನಿರೀಕ್ಷೆಯಂತೆ ಪ್ರಮುಖ ವಿಷಯವನ್ನು ಮರೆಮಾಚಲು ರಾಷ್ಟ್ರೀಯವಾದವನ್ನು ಮುಂಚೂಣಿಗೆ ತಂದಿದೆ ಎಂದಿದೆ.

ಹಿಂಡೆನ್​ಬರ್ಗ್​ ವರದಿ ಏನು?

ಅಮೆರಿಕದ ಶಾರ್ಟ್‌ ಸೆಲ್ಲರ್‌ ಸಂಸ್ಥೆ ಹಿಂಡೆನ್‌ಬರ್ಗ್‌ ರಿಸರ್ಚ್‌ ಅದಾನಿ ಸಮೂಹದ ವಿರುದ್ಧ ವರದಿ ಬಿಡುಗಡೆ ಮಾಡಿತ್ತು. ಇದರ ನಂತರ ಅದಾನಿ ಗ್ರೂಪ್‌ ಷೇರುಗಳು ತೀವ್ರ ಕುಸಿತ ಕಂಡಿವೆ. ಈ ವರದಿಯಿಂದಾಗಿ ಭಾರತ ಮತ್ತು ಏಷ್ಯಾದ ಅತಿದೊಡ್ಡ ಉದ್ಯಮಿ ಗೌತಮ್ ಅದಾನಿ ಸಂಪತ್ತು ಸುಮಾರು 4 ಲಕ್ಷ ಕೋಟಿ ರೂ. ಕರಗಿದೆ. ಅದಾನಿ ಗ್ರೂಪ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿ ಹೇಳಿದೆ. ಈ ಗ್ರೂಪ್‌ ದಶಕಗಳಿಂದ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಖಾತೆ ವಂಚನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದೆ.

ಅದಾನಿ ಅವರ ನಿವ್ವಳ ಮೌಲ್ಯ 92 ಬಿಲಿಯನ್‌ಗೆ ಇಳಿದಿದೆ. ಈ ಮೂಲಕ ಅದಾನಿ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ವಿಚಾರದಲ್ಲಿ ಅದಾನಿ ಗ್ರೂಪ್ ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಅದಾನಿ ಗ್ರೂಪ್‌ ಕುರಿತು 88 ನೇರ ಪ್ರಶ್ನೆಗಳನ್ನು ಕೇಳಿತ್ತು. ಆದರೆ, ಈ ಪ್ರಶ್ನೆಗಳಿಗೆ ಅದಾನಿ ಗ್ರೂಪ್ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಹಿಂಡೆನ್‌ಬರ್ಗ್ ಹೇಳಿಕೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:49 am, Thu, 9 February 23