Maharashtra Crime: ರಿಫೈನರಿ ವಿರುದ್ಧ ಸುದ್ದಿ ಬರೆದ ಪತ್ರಕರ್ತರೊಬ್ಬರ ಮೇಲೆ ಕಾರು ಹರಿಸಿ ಹತ್ಯೆ

ಮಹಾರಾಷ್ಟ್ರದಲ್ಲಿ ಪತ್ರಕರ್ತರೊಬ್ಬರ ಮೇಲೆ ಕಾರು ಹರಿಸಿ ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿತ ವ್ಯಕ್ತಿಯ ವಿರುದ್ಧ ಪೊಲೀಸರು ಕೊಲೆ ಆರೋಪ ಹೊರಿಸಿದ್ದಾರೆ.

Maharashtra Crime: ರಿಫೈನರಿ ವಿರುದ್ಧ ಸುದ್ದಿ ಬರೆದ ಪತ್ರಕರ್ತರೊಬ್ಬರ ಮೇಲೆ ಕಾರು ಹರಿಸಿ ಹತ್ಯೆ
ಮಹಾರಾಷ್ಟ್ರದಲ್ಲಿ ಪತ್ರಕರ್ತನ ಹತ್ಯೆ
Follow us
ನಯನಾ ರಾಜೀವ್
|

Updated on: Feb 09, 2023 | 12:40 PM

ಮಹಾರಾಷ್ಟ್ರದಲ್ಲಿ ಪತ್ರಕರ್ತರೊಬ್ಬರ ಮೇಲೆ ಕಾರು ಹರಿಸಿ ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿತ ವ್ಯಕ್ತಿಯ ವಿರುದ್ಧ ಪೊಲೀಸರು ಕೊಲೆ ಆರೋಪ ಹೊರಿಸಿದ್ದಾರೆ. ಸ್ಥಳೀಯ ಪತ್ರಕರ್ತ ಶಶಿಕಾಂತ ವಾರಿಶೆ ಅವರು ನಾನಾರ್‌ನಲ್ಲಿರುವ ರತ್ನಗಿರಿ ರಿಫೈನರಿ ವಿರುದ್ಧ ಸುದ್ದಿ ಬರೆದಿದ್ದರು. ಸೋಮವಾರ ಈ ಸುದ್ದಿ ಪ್ರಕಟವಾಗಿದ್ದು, ಅದೇ ದಿನ ಮಧ್ಯಾಹ್ನ ರಿಫೈನರಿಯ ಕಟ್ಟಾ ಬೆಂಬಲಿಗರಾದ ಪಂಢರಿನಾಥ್ ಅಂಬರ್ಕರ್ ಅವರ ಕಾರು ವರಿಶೆ ಅವರ ಬೈಕಿಗೆ ಗುದ್ದಿತ್ತು.

ಪತ್ರಕರ್ತರು ಮಂಗಳವಾರ ಕೊಲ್ಲಾಪುರ ಆಸ್ಪತ್ರೆಯಲ್ಲಿ ನಿಧನರಾದರು. ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪತ್ರಕರ್ತರ ಸಂಘಟನೆಗಳು ಕ್ರಮಕ್ಕೆ ಆಗ್ರಹಿಸಿದ್ದವು.

ಈ ಹಿಂದೆ ಅವರ ವಿರುದ್ಧ ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಆತನ ಮೇಲೆ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಅಂಬರ್ಕರ್ ಅವರನ್ನು ಫೆಬ್ರವರಿ 13 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಕೊಲೆಯ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: Mandya: ಮನೆಯಲ್ಲಿ ಮಲಗಿದ್ದ ಒಂಟಿ ಮಹಿಳೆಯ ಹತ್ಯೆ ಮಾಡಿ ಬೆಂಕಿ ಹಚ್ಚಿದ ಪಾಪಿಗಳು; ಬೆಚ್ಚಿಬಿದ್ದ ಗ್ರಾಮಸ್ಥರು

ಶಶಿಕಾಂತ್ ವಾರಿಶೆ ಅಂಬೇಡ್ಕರ್ ಅವರ ಬೈಕ್​ಗೆ ಗುಡ್ಡಿ ಹೊಡೆದಿದ್ದರು. ವಾರಿಶೆ ಅವರನ್ನು 100 ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದು ಸ್ಥಳದಿಂದ ಪರಾರಿಯಾಗಿದ್ದರು.

ನಾನಾರ್‌ನಲ್ಲಿ ರತ್ನಗಿರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಪ್ರಾಜೆಕ್ಟ್ ನಿರ್ಮಾಣವು ಪ್ರಾರಂಭದಿಂದಲೂ ರಾಜಕೀಯದ ವಿಷಯವಾಗಿದೆ. ಬಿಜೆಪಿಯೊಂದಿಗೆ ಸರ್ಕಾರಕ್ಕೆ ಸೇರ್ಪಡೆಗೊಂಡ ಶಿವಸೇನೆಯ ಉಪಕ್ರಮದ ಮೇರೆಗೆ 2019 ರ ಚುನಾವಣೆಗೆ ಮೊದಲು ಈ ಯೋಜನೆಯನ್ನು ಅಂದಿನ ಸರ್ಕಾರ ರದ್ದುಗೊಳಿಸಿತು.

ಈಗ ಶಿವಸೇನೆ ಇಲ್ಲದೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದು, ಯೋಜನೆಗೆ ಮರುಜೀವ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. 60 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ವಿಶ್ವದ ಅತಿದೊಡ್ಡ ಸಂಸ್ಕರಣಾಗಾರವನ್ನು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಾಗುವುದು ಎಂದು ಕೇಂದ್ರ ಸಚಿವರೊಬ್ಬರು ಕಳೆದ ವರ್ಷ ಘೋಷಿಸಿದ್ದರು. ಅಂಬರ್ಕರ್ ವಿರುದ್ಧ ಲೇಖನ ಬರೆಯಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ