AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mandya: ಮನೆಯಲ್ಲಿ ಮಲಗಿದ್ದ ಒಂಟಿ ಮಹಿಳೆಯ ಹತ್ಯೆ ಮಾಡಿ ಬೆಂಕಿ ಹಚ್ಚಿದ ಪಾಪಿಗಳು; ಬೆಚ್ಚಿಬಿದ್ದ ಗ್ರಾಮಸ್ಥರು

ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯ ಗ್ರಾಮದ ಪ್ರೇಮ(42) ಎಂಬ ಒಬ್ಬಂಟಿ ಮಹಿಳೆಯನ್ನ ಹತ್ಯೆ ಮಾಡಿ ಹಾಸಿಗೆಯಲ್ಲಿ ಮಲಗಿಸಿ ಬೆಂಕಿ ಹಚ್ಚಲಾಗಿದೆ.

Mandya: ಮನೆಯಲ್ಲಿ ಮಲಗಿದ್ದ ಒಂಟಿ ಮಹಿಳೆಯ ಹತ್ಯೆ ಮಾಡಿ ಬೆಂಕಿ ಹಚ್ಚಿದ ಪಾಪಿಗಳು; ಬೆಚ್ಚಿಬಿದ್ದ ಗ್ರಾಮಸ್ಥರು
ಮೃತ ಮಹಿಳೆ ಪ್ರೇಮ(42)
TV9 Web
| Edited By: |

Updated on: Jan 10, 2023 | 3:20 PM

Share

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯ ಗ್ರಾಮದ ಪ್ರೇಮ(42) ಎಂಬ ಒಬ್ಬಂಟಿ ಮಹಿಳೆಯನ್ನ ಹತ್ಯೆ ಮಾಡಿ ಹಾಸಿಗೆಯಲ್ಲಿ ಮಲಗಿಸಿ ಬೆಂಕಿ ಹಚ್ಚಲಾಗಿದೆ. ಮೃತ ಪ್ರೇಮ ದೇಹವು ಸಂಪೂರ್ಣ ಸುಟ್ಟು ಹೋಗಿದ್ದು ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ನಿಧನದ ಬಳಿಕ ಒಂಟಿಯಾಗಿದ್ದ ಪ್ರೇಮ ಅವರ ಓರ್ವ ಪುತ್ರ ಬೆಂಗಳೂರಿನಲ್ಲಿ ವಾಸವಿದ್ದ. ರಾತ್ರಿ ತಮ್ಮ ಮನೆಯಲ್ಲಿ ಒಂಟಿಯಾಗಿ ಮಲಗಿದ್ದಾಗ ಹತ್ಯೆ ಮಾಡಿ ಬೆಂಕಿ ಹಚ್ಚಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ರಾಮನಗರ: ಶಾಲಾ ಬಸ್ ಹರಿದು ವಿದ್ಯಾರ್ಥಿನಿ ಸಾವು; ಶಾಲೆಯ ಮಾಲೀಕನ ಹಲ್ಲೆಗೆ ಮುಂದಾದ ಮೃತ ವಿದ್ಯಾರ್ಥಿನಿ ಕುಟುಂಬಸ್ಥರು

ಜಿಲ್ಲೆಯ ರಾಮನಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಸಾಯಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದ ಯುಕೆಜಿ ವಿದ್ಯಾರ್ಥಿ ರಕ್ಷಾ (5) ಶಾಲಾ ಬಸ್​ನಿಂದ ಬಿದ್ದು ಟೈಯರ್​ಗೆ ಸಿಲುಕಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಮೃತದೇಹ ನೋಡಲು ಆಗಮಿಸಿದ್ದ ಶಾಲೆಯ ಮಾಲೀಕ ಜಯಪ್ರಕಾಶ್​ನ ಕೊತ್ತಿನ ಪಟ್ಟಿ ಹಿಡಿದು ಮೃತ ವಿದ್ಯಾರ್ಥಿನಿ ಕುಟುಂಬಸ್ಥರು, ಸಂಬಂಧಿಕರು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಶಾಲೆಯ ಮಾಲೀಕನ್ನ ಬಿಗಿ ಭದ್ರತೆಯಲ್ಲಿ ಕರೆದುಕೊಂಡ ಹೋಗಿದ್ದಾರೆ

ಕನಕಪುರ ತಾಲೂಕಿನ ಸಿದ್ದೇನಹಳ್ಳಿ ಗ್ರಾಮದ ಸ್ವಾಮಿ ಹಾಗೂ ಉಮಾ ದಂಪತಿಗಳ ಪುತ್ರಿಯಾಗಿದ್ದ ರಕ್ಷಾ ಶ್ರೀ ಸಾಯಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದಳು. ಶಾಲೆಯ ಆಡಳಿತ ಮಂಡಳಿಯ ವೈಫಲ್ಯದಿಂದ ಸಾವು ಸಂಭವಿಸಿದೆ ಎಂದು ಆಕ್ರೋಶ ಹೊರಹಾಕಿದ ಕುಟುಂಬಸ್ಥರು ಗ್ರಾಮಕ್ಕೆ ಆಗಮಿಸಿದ್ದ ಶಾಲೆಯ ಮಾಲೀಕನ ಹಲ್ಲೆಗೆ ಮುಂದಾಗಿದ್ದರು ಕನಕಪುರ ಗ್ರಾಮಾಂತರ ಠಾಣೆ ಪೊಲೀಸರಿಂದ ಮಾಲೀಕನ ರಕ್ಷಣೆ ಮಾಡಲಾಗಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಭಗತ್‌ಸಿಂಗ್ ಪಾತ್ರದ ಪ್ರಾಕ್ಟೀಸ್ ವೇಳೆ ವಿದ್ಯಾರ್ಥಿ ಸಾವು: ಚಿತ್ರದುರ್ಗದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ

ಸವದತ್ತಿ: ವಾಲ್ಮೀಕಿ ಭವನದ ಸಂಪ್​ಗೆ ಬಿದ್ದು 4 ವರ್ಷದ ಇಬ್ಬರು ಮಕ್ಕಳ ಸಾವು

ಬೆಳಗಾವಿ: ಜಿಲ್ಲೆಯ ಸವದತ್ತಿ ಪಟ್ಟಣದ ಗುರ್ಲಹೊಸೂರ ಕಾಲೋನಿಯ ಪ್ರಗತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಶ್ಲೋಕ ಗುಡಿ(4), ಚಿದಾನಂದ ಸಾಳುಂಕೆ(4) ಎಂಬ ವಿದ್ಯಾರ್ಥಿಗಳು ಆಟವಾಡಲು ಹೊರ ಬಂದಿದ್ದಾರೆ. ಈ ನಡುವೆ ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ಸಂಪ್‌ಗೆ ಬಿದ್ದು ಇಬ್ಬರು ಬಾಲಕರ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸವದತ್ತಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ