21 ವರ್ಷದ ಮಗಳ ವ್ಯಾನಿಟಿ ಬ್ಯಾಗ್​ನಲ್ಲಿ ಪ್ರೆಗ್ನೆನ್ಸಿ ಕಿಟ್ ಪತ್ತೆ: ಹಿಂದೆಮುಂದೆ ಯೋಚಿಸದೆ ಮಗಳನ್ನು ಸಾಯಿಸಿ, ಆಸಿಡ್ ಸುರಿದ ಅಪ್ಪ-ಅಮ್ಮ!

pregnancy test kit: ಹೆತ್ತಮ್ಮ- ಅಪ್ಪ ತಮ್ಮ ಇಬ್ಬರು ಸಂಬಂಧಿಕರ ಸಹಾಯದಿಂದ 21 ವರ್ಷದ ಮಗಳನ್ನು ಕ್ರೂರವಾಗಿ ಸಾಯಿಸಿ, ದೇಹ ಗುರುತಿಸಲು ಸಾಧ್ಯವಾಗದಂತೆ ಆಸಿಡ್ ಸುರಿದು ಎಸೆದಿದ್ದಾರೆ. ಎಲ್ಲ ನಾಲ್ವರೂ ಆರೋಪಿಗಳೂ ಅರೆಸ್ಟ್

21 ವರ್ಷದ ಮಗಳ ವ್ಯಾನಿಟಿ ಬ್ಯಾಗ್​ನಲ್ಲಿ ಪ್ರೆಗ್ನೆನ್ಸಿ ಕಿಟ್ ಪತ್ತೆ: ಹಿಂದೆಮುಂದೆ ಯೋಚಿಸದೆ ಮಗಳನ್ನು ಸಾಯಿಸಿ, ಆಸಿಡ್ ಸುರಿದ ಅಪ್ಪ-ಅಮ್ಮ!
ಮಗಳ ವ್ಯಾನಿಟಿ ಬ್ಯಾಗ್​ನಲ್ಲಿ ಪ್ರೆಗ್ನೆನ್ಸಿ ಕಿಟ್ ಪತ್ತೆ, ಹತ್ಯೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 09, 2023 | 12:44 PM

21ರ ಹರೆಯದ ಯುವತಿಯೊಬ್ಬಳು ಆಕೆಯ ಬಳಿ ಗರ್ಭಧಾರಣೆ ಪರೀಕ್ಷೆಯ ಕಿಟ್‌ಗಳು (pregnancy test kit) ಸಿಕ್ಕಿದ್ದರಿಂದ ಆಕೆಯ ಪೋಷಕರು (Couple) ಆಕೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ, ಕತ್ತು ಹಿಸುಕಿ ಮಗಳನ್ನು ಕೊಂದಿದ್ದಾರೆ (Murder) ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿ ತಮ್ಮ ಇಬ್ಬರು ಸಂಬಂಧಿಕರ ಸಹಾಯದಿಂದ ದೇಹವನ್ನು ಗುರುತಿಸಲು ಸಾಧ್ಯವಾಗದಂತೆ ಆಸಿಡ್ (Acid) ಸುರಿದು, ನಂತರ ಮಗಳ (Daughter) ದೇಹವನ್ನ ಎಸೆದಿದ್ದಾರೆ ಎಂದು ಆರೋಪಿಸಿ ನಾಲ್ವರನ್ನು ಬಂಧಿಸಲಾಗಿದೆ. ಇಲ್ಲಿನ ತೇನ್ ಷಾ ಅಲಮಾಬಾದ್ (Tenn Shah Alamabad village) ಗ್ರಾಮದ ನಿವಾಸಿ ನರೇಶ್ ಅವರು ಫೆಬ್ರವರಿ 3 ರಂದು ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಇದೀಗ ಗ್ರಾಮದ ಹೊರಗಿನ ಕಾಲುವೆಯಿಂದ ಆಕೆಯ ದೇಹವನ್ನು ವಿರೂಪಗೊಳಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ (Kaushambi, Uttar Pradesh).

ನರೇಶ್ ಮತ್ತು ಅವರ ಪತ್ನಿ ಶೋಭಾ ದೇವಿ ಫೆಬ್ರವರಿ 3 ರಂದು ತಮ್ಮ ಮನೆಯಲ್ಲಿ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ. ಬಳಿಕ, ಗುರುತು ಮರೆಮಾಚಲು ದೇಹದ ಮೇಲೆ ಬ್ಯಾಟರಿ ಆಸಿಡ್ ಸುರಿದಿದ್ದಾರೆ. ನರೇಶ್ ಅವರ ಇಬ್ಬರು ಸಹೋದರರಾದ ಗುಲಾಬ್ ಮತ್ತು ರಮೇಶ್ ಕೂಡ ಮೃತದೇಹವನ್ನು ಮರೆಮಾಚಲು ಸಹಾಯ ಮಾಡಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ ಎಂದು PTI ವರದಿ ಮಾಡಿದೆ.

ಇದನ್ನೂ ಓದಿ:

Pregnancy Kit: ಪ್ರೆಗ್ನೆನ್ಸಿ ಕಿಟ್ ಬಳಸುವುದು ಹೇಗೆ? ಹಂತಗಳನ್ನು ತಿಳಿಯಿರಿ

ತನಿಖೆ ವೇಳೆ, ತಂದೆ ನರೇಶ್ ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ ಅವರ ಮಗಳು ಅನೇಕ ಹುಡುಗರೊಂದಿಗೆ ಸದಾ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದಳು ಎಂದು ತಿಳಿದುಬಂದಿದೆ. ಆಕೆಯ ವ್ಯಾನಿಟಿ ಬ್ಯಾಗ್​ನಲ್ಲಿ ಕೆಲವು ಗರ್ಭಧಾರಣೆ ಪರೀಕ್ಷೆಯ ಕಿಟ್‌ಗಳೂ ಪತ್ತೆಯಾಗಿದ್ದವು. ಇದರಿಂದ ನರೇಶ್‌, ತಮ್ಮ ಮಗಳು ಯಾವುದೋ ಹುಡುಗನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದಾರೆ. ಇದರಿಂದ ಕೋಪಗೊಂಡು ಕುಕೃತ್ಯವೆಸಗಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.

Published On - 12:43 pm, Thu, 9 February 23