ಮಗಳ ಬ್ಯಾಗ್​​ನಲ್ಲಿ ಪ್ರೆಗ್ನೆನ್ಸಿ ಟೆಸ್ಟ್‌ ಕಿಟ್ ಪತ್ತೆ, ಆ್ಯಸಿಡ್ ಸುರಿದು ಕೊಂದ ಪೋಷಕರು

ಮಗಳ ಬ್ಯಾಗ್​​ನಲ್ಲಿ ಗರ್ಭಧಾರಣೆಯ ಪರೀಕ್ಷೆಯ ಕಿಟ್‌ಗಳು (pregnancy test kits) ಪತ್ತೆಯಾಗಿದೆ ಎಂದು ತಿಳಿದು ತಮ್ಮ ಮಗಳಿಗೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಗಳ ಬ್ಯಾಗ್​​ನಲ್ಲಿ ಪ್ರೆಗ್ನೆನ್ಸಿ ಟೆಸ್ಟ್‌ ಕಿಟ್ ಪತ್ತೆ, ಆ್ಯಸಿಡ್ ಸುರಿದು ಕೊಂದ ಪೋಷಕರು
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 09, 2023 | 12:43 PM

ಲಕ್ನೋ: ಮಗಳ ಬ್ಯಾಗ್​​ನಲ್ಲಿ ಗರ್ಭಧಾರಣೆಯ ಪರೀಕ್ಷೆಯ ಕಿಟ್‌ಗಳು (pregnancy test kits) ಪತ್ತೆಯಾಗಿದೆ ಎಂದು ತಿಳಿದು ತಮ್ಮ ಮಗಳಿಗೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಗಳಿಗೆ ಬೇರೆ ಯಾರೋ ಯುವಕನ ಜೊತೆಗೆ ಸಂಬಂಧ ಇದೆ ಎಂದು ಗರ್ಭಧಾರಣೆಯ ಪರೀಕ್ಷೆಯ ಕಿಟ್‌ ಕಂಡು ಅನುಮಾನ ವ್ಯಕ್ತಪಡಿಸಿ ಆಕೆಯನ್ನು ಕೊಂದಿದ್ದಾರೆ ಎಂದು ಹೇಳಲಾಗಿದೆ. ಪೋಷಕರು ತಮ್ಮ ಇಬ್ಬರು ಸಂಬಂಧಿಕರ ಸಹಾಯದಿಂದ ದೇಹವನ್ನು ಗುರುತಿಸಲು ಸಾಧ್ಯವಾಗದಂತೆ ಆಸಿಡ್ ಸುರಿದು ಎಸೆದಿದ್ದಾರೆ. ಈ ಬಳಿಕೆ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ನಾಲ್ವರನ್ನೂ ಬಂಧಿಸಿದ್ದಾರೆ.

ಲಕ್ನೋ ತೆನ್‌ ಶಾ ಅಲಮಾಬಾದ್‌ ಗ್ರಾಮದ ನಿವಾಸಿ ನರೇಶ್‌ ಫೆ.3ರಂದು ತನ್ನ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಮಂಗಳವಾರ, ಗ್ರಾಮದ ಹೊರಭಾಗದ ಕಾಲುವೆಯಿಂದ ತುಂಡರಿಸಿದ ಮೃತದೇಹ ಪತ್ತೆಯಾಗಿದೆ. ನರೇಶ್ ಮತ್ತು ಅವರ ಪತ್ನಿ ಶೋಭಾದೇವಿ ಫೆಬ್ರವರಿ 3 ರಂದು ತಮ್ಮ ಮನೆಯಲ್ಲಿ ತಮ್ಮ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ತನಿಖೆಯ ವೇಳೆ ಕಂಡುಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಬುಧವಾರ ಹೇಳಿದ್ದಾರೆ.

ಇದನ್ನು ಓದಿ:Crime News: ಚಲಿಸುವ ಬಸ್​ನಿಂದ ಬಿದ್ದು, ಚಕ್ರದಡಿ ಸಿಲುಕಿ ಅಪ್ಪಚ್ಚಿಯಾದ ಕಾಲೇಜು ವಿದ್ಯಾರ್ಥಿ

ಗುರುತು ಮರೆಮಾಚಲು ಶವದ ಮೇಲೆ ಬ್ಯಾಟರಿ ಆಸಿಡ್ ಸುರಿದಿದ್ದಾರೆ. ನರೇಶ್ ಅವರ ಇಬ್ಬರು ಸಹೋದರರಾದ ಗುಲಾಬ್ ಮತ್ತು ರಮೇಶ್ ಕೂಡ ಈ ಕೃತ್ಯಕ್ಕೆ ಸಹಾಯ ಮಾಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

ನರೇಶ್ ಪೊಲೀಸರಿಗೆ ತನ್ನ ಮಗಳು ಮೊಬೈಲ್ ಫೋನ್‌ನಲ್ಲಿ ಅನೇಕ ಹುಡುಗರೊಂದಿಗೆ ಮಾತನಾಡುತ್ತಿದ್ದಳು. ಆಕೆಯ ಬ್ಯಾಗ್​ನಲ್ಲಿ ಕೆಲವು ಗರ್ಭಧಾರಣೆ ಪರೀಕ್ಷೆಯ ಕಿಟ್‌ಗಳೂ ಪತ್ತೆಯಾಗಿದ್ದು, ಇದರಿಂದ ನರೇಶ್‌ ತನ್ನ ಮಗಳು ಯಾವುದೋ ಹುಡುಗನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಯನ್ನು ಕೊಂದಿದ್ದಾಳೆ ಎಂದು ಎಸ್‌ಪಿ ತಿಳಿಸಿದ್ದಾರೆ. ನರೇಶ್ ಅವರ ಇಬ್ಬರು ಸಹೋದರರು ಮೃತ ದೇಹವನ್ನು ಮರೆಮಾಡಲು ಸಹಾಯ ಮಾಡಿದ್ದಾರೆ.

Published On - 12:41 pm, Thu, 9 February 23