Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohammad Afzal Guru: ಸಂಸತ್ ಮೇಲೆ ದಾಳಿ ನಡೆಸಿದ ಮೊಹಮ್ಮದ್ ಅಫ್ಜಲ್ ಗುರು ಪುಣ್ಯತಿಥಿ ಆಚರಣೆಗೆ ಶ್ರೀನಗರ ಬಂದ್

Attack on Parliament: ಭಾರತದ ಸಂಸತ್ ಮೇಲೆ ದಾಳಿ ನಡೆಸಿದ ಮೊಹಮ್ಮದ್ ಅಫ್ಜಲ್ ಗುರುವನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಿದ ದಿನವಾಗಿ ಇಂದು (ಗುರವಾರ) 10ನೇ ಪುಣ್ಯತಿಥಿಯ ಎಂದು ಶ್ರೀನಗರದ ಕೆಲವು ಭಾಗಗಳಲ್ಲಿ ಬಂದ್ ಆಚರಿಸಲಾಯಿತು.

Mohammad Afzal Guru: ಸಂಸತ್ ಮೇಲೆ ದಾಳಿ ನಡೆಸಿದ ಮೊಹಮ್ಮದ್ ಅಫ್ಜಲ್ ಗುರು ಪುಣ್ಯತಿಥಿ ಆಚರಣೆಗೆ ಶ್ರೀನಗರ ಬಂದ್
ಮೊಹಮ್ಮದ್ ಅಫ್ಜಲ್ ಗುರು ಮತ್ತು ಸಂಸತ್
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 09, 2023 | 1:34 PM

ಶ್ರೀನಗರ: ಭಾರತದ ಸಂಸತ್ ಮೇಲೆ ದಾಳಿ ನಡೆಸಿದ ಮೊಹಮ್ಮದ್ ಅಫ್ಜಲ್ ಗುರುವನ್ನು (Mohammad Afzal Guru) ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಿದ ದಿನವಾಗಿ ಇಂದು (ಗುರವಾರ) 10ನೇ ಪುಣ್ಯತಿಥಿಯ ಎಂದು ಶ್ರೀನಗರದ ಕೆಲವು ಭಾಗಗಳಲ್ಲಿ ಬಂದ್ ಆಚರಿಸಲಾಯಿತು. ಇದೀಗ ಶ್ರೀನಗರದ ಭಾಗದಲ್ಲಿ ಒಂದು ಆಂತಕದ ಪರಿಸ್ಥಿತಿ ಸೃಷ್ಟಿಯಾಗಿದೆ. ನಿಷೇಧಿತ ಜೆಕೆಎಲ್‌ಎಫ್ ಕರೆ ನೀಡಿರುವ ಮುಷ್ಕರದಿಂದಾಗಿ ನೌಹಟ್ಟಾ, ಗೊಜ್ವಾರಾ ಮತ್ತು ನಲ್ಲ ಮಾರ್ ರಸ್ತೆ ಪ್ರದೇಶಗಳಲ್ಲಿನ ಅಂಗಡಿಗಳು ಮತ್ತು ಇತರ ವ್ಯಾಪಾರ ಸಂಸ್ಥೆಗಳು ಮುಚ್ಚಿದ್ದು. ಬಲವಂತವಾಗಿ ಬಂದ್ ಮಾಡಲಾಗಿದೆ ಎಂದು ಹೇಳಲಾಗಿದೆ. ಖಾಸಗಿ ಸಾರಿಗೆಯು ಕೂಡ ಕಣಿವೆಯಾದ್ಯಂತ ಸಾಮಾನ್ಯವಾಗಿ ಚಲಿಸುತ್ತಿತ್ತು.

ಪರಿಸ್ಥಿತಿ ಇಲ್ಲಿಯವರೆಗೆ ಶಾಂತಿಯುತವಾಗಿದೆ. ಕೆಲವೊಂದು ಸಂಚಾರಕ್ಕೆ ನಿಷೇಧಿಸಲಾಗಿದೆ. ಶಾಲಾ – ಕಾಲೇಜುಗಳನ್ನು ಕೂಡ ಬಂದ್ ಮಾಡಲಾಗಿದೆ ಎಂದು ಪಿಟಿಐ ತಿಳಿಸಿದೆ. 2001 ರಲ್ಲಿ ಜೈಶ್-ಎ-ಮೊಹಮ್ಮದ್ ನಡೆಸಿದ ಸಂಸತ್ತಿನ ದಾಳಿಗಾಗಿ 2013 ರಲ್ಲಿ ಈ (9.2.2013) ದಿನ ಗಲ್ಲಿಗೇರಿಸಲಾಯಿತು.

ಇದನ್ನೂ ಓದಿ:ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದು 21 ವರ್ಷ; ಭಾರತ-ಪಾಕ್ ಸಂಬಂಧ ಈಗ ಹೇಗಿದೆ?

ಡಿಸೆಂಬರ್ 13, 2001 ರಂದು , ಸಂಸತ್ತಿನ ಚಳಿಗಾಲದ ಅಧಿವೇಶನದಂದು ಭಯೋತ್ಪಾದಕರು ಸಂಸತ್ ಭವನದ ಮೇಲೆ ದಾಳಿ ಮಾಡಿದರು, ಇದು ಇಡೀ ದೇಶವನ್ನು ಬೆಚ್ಚಿಬೀಳಿಸಿತು. ಪಾಕಿಸ್ತಾನದ ಎರಡು ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ದಾಳಿಯ ಹೊಣೆ ಹೊತ್ತುಕೊಂಡಿತ್ತು.

ನಂತರ ಅಫ್ಜಲ್ ಗುರುವನ್ನು ಬಂಧನ ಮಾಡಿ ಪೊಲೀಸ್ ರಿಮಾಂಡ್‌ನಲ್ಲಿ ಇರಿಸಲಾಯಿತು, ಆದರೆ ವಿಚಾರಣೆಯ ನಂತರ ನ್ಯಾಯಾಲಯವು ಅಫ್ಸಾನ್‌ನನ್ನು ಖುಲಾಸೆಗೊಳಿಸಿತು ಮತ್ತು ಗಿಲಾನಿ, ಶೌಕತ್ ಮತ್ತು ಅಫ್ಜಲ್‌ಗೆ ಮರಣದಂಡನೆ ವಿಧಿಸಿತು. 2003ರಲ್ಲಿ ಗೀಲಾನಿ ಕೂಡ ಖುಲಾಸೆಗೊಂಡಿದ್ದ. 2005 ಲ್ಲಿ, ಸುಪ್ರೀಂ ಕೋರ್ಟ್ ಅಫ್ಜಲ್‌ನ ಮರಣದಂಡನೆಯನ್ನು ಎತ್ತಿಹಿಡಿದಿದೆ, ಆದರೆ ಶೌಕತ್‌ನ ಶಿಕ್ಷೆಯನ್ನು 10 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಪರಿವರ್ತಿಸಿತು. ಮತ್ತೊಂದೆಡೆ, ಸೆಪ್ಟೆಂಬರ್ 2006 ರಲ್ಲಿ, ನ್ಯಾಯಾಲಯವು ಅಫ್ಜಲ್ ಗುರುವನ್ನು ಗಲ್ಲಿಗೇರಿಸಲು ಆದೇಶ ನೀಡಿತು, ಆದರೆ 11 ವರ್ಷಗಳ ನಂತರ ಅವರನ್ನು ಗಲ್ಲಿಗೇರಿಸಲಾಯಿತು.

Published On - 1:34 pm, Thu, 9 February 23

Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ
ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!
ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗ್ನಿ ಅವಘಡ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗ್ನಿ ಅವಘಡ
ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ
ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ
ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಡಾಲಿ ಧನಂಜಯ
ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಡಾಲಿ ಧನಂಜಯ
ಬಿಮ್ಸ್​​ನ ಟ್ರಾಮಾ ಕೇರ್ ಸೆಂಟರ್​ನಲ್ಲಿ ಮೊಬೈಲ್ ಟಾರ್ಚ್​ನಲ್ಲಿ ಚಿಕಿತ್ಸೆ
ಬಿಮ್ಸ್​​ನ ಟ್ರಾಮಾ ಕೇರ್ ಸೆಂಟರ್​ನಲ್ಲಿ ಮೊಬೈಲ್ ಟಾರ್ಚ್​ನಲ್ಲಿ ಚಿಕಿತ್ಸೆ
ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ?
ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ?
ಧನಂಜಯ ಕಟ್ಟಿದ ತಾಳಿ ಕಣ್ಣಿಗೆ ಒತ್ತಿಕೊಂಡ ಧನ್ಯತಾ; ಇದು ಭಾವುಕ ಕ್ಷಣ
ಧನಂಜಯ ಕಟ್ಟಿದ ತಾಳಿ ಕಣ್ಣಿಗೆ ಒತ್ತಿಕೊಂಡ ಧನ್ಯತಾ; ಇದು ಭಾವುಕ ಕ್ಷಣ
ಮೆರಿಕದಿಂದ ಅಮೃತಸರಕ್ಕೆ ಬಂದಿಳಿದ 116 ಅಕ್ರಮ ವಲಸಿಗರನ್ನು ಹೊತ್ತ ವಿಮಾನ
ಮೆರಿಕದಿಂದ ಅಮೃತಸರಕ್ಕೆ ಬಂದಿಳಿದ 116 ಅಕ್ರಮ ವಲಸಿಗರನ್ನು ಹೊತ್ತ ವಿಮಾನ