ಗಂಗೂಲಿ ಕಾಣಿಸಿಕೊಂಡಿದ್ದ ಫಾರ್ಚೂನ್ ಅಡುಗೆ ಎಣ್ಣೆ ಜಾಹೀರಾತುಗಳನ್ನು ತಡೆಹಿಡಿದ ಅದಾನಿ ವಿಲ್ಮರ್​ ಸಂಸ್ಥೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 05, 2021 | 3:28 PM

ಉತ್ತಮ ಆರೋಗ್ಯಕ್ಕಾಗಿ ಮತ್ತು ಹೃದಯ ಸಂಬಂಧಿ ತೊಂದರೆಗಳನ್ನು ದೂರವಿಡಲು ಅದಾನಿ ಫಾರ್ಚೂನ್​ ರೈಸ್​ ಬ್ರಾನ್​ ಕುಕ್ಕಿಂಗ್ ಆಯಿಲ್​ ಬಳಸಿ ಎಂದು ಹೇಳಿದ ಗಂಗೂಲಿಗೇ ಹೃದಯಾಘಾತವಾಗಿದೆ. ಈ ಸಂಸ್ಥೆಯನ್ನು ನಾವು ನಂಬಬಹುದೇ ಎಂದು ಅನೇಕರು ಗೇಲಿ ಮಾಡಿದ್ದಾರೆ.

ಗಂಗೂಲಿ ಕಾಣಿಸಿಕೊಂಡಿದ್ದ ಫಾರ್ಚೂನ್ ಅಡುಗೆ ಎಣ್ಣೆ ಜಾಹೀರಾತುಗಳನ್ನು ತಡೆಹಿಡಿದ ಅದಾನಿ ವಿಲ್ಮರ್​ ಸಂಸ್ಥೆ
ಸೌರವ್​ ಗಂಗೂಲಿ ಅಭಿನಯದ ಜಾಹೀರಾತಿನ ಚಿತ್ರ
Follow us on

ದೆಹಲಿ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೃದಯಾಘಾತಕ್ಕೆ ಒಳಗಾದ ಒಂದೇ ವಾರದಲ್ಲಿ ಅದಾನಿ ವಿಲ್ಮರ್​ ಸಂಸ್ಥೆ ಸೌರವ್​ ಗಂಗೂಲಿ ಕಾಣಿಸಿಕೊಂಡಿದ್ದ ಜಾಹೀರಾತುಗಳಿಗೆ ತಡೆಯೊಡ್ಡಿದೆ. ಫಾರ್ಚೂನ್​ ರೈಸ್​ ಬ್ರಾನ್​ ಕುಕ್ಕಿಂಗ್ ಆಯಿಲ್​ ಹೆಸರಿನಡಿಯಲ್ಲಿ ಅಡುಗೆ ಎಣ್ಣೆಯನ್ನು ಉತ್ಪಾದಿಸುತ್ತಿರುವ ಅದಾನಿ ವಿಲ್ಮರ್ ಸಂಸ್ಥೆ ಸೌರವ್​ ಗಂಗೂಲಿ ಅವರನ್ನು ತನ್ನ ಜಾಹೀರಾತುಗಳಿಗೆ ಬಳಸಿಕೊಂಡಿತ್ತು.

ಉತ್ತಮ ಆರೋಗ್ಯಕ್ಕಾಗಿ ಮತ್ತು ಹೃದಯ ಸಂಬಂಧಿ ತೊಂದರೆಗಳನ್ನು ದೂರವಿಡಲು ಅದಾನಿ ಫಾರ್ಚೂನ್​ ರೈಸ್​ ಬ್ರಾನ್​ ಕುಕ್ಕಿಂಗ್ ಆಯಿಲ್​ ಬಳಸಿ ಎಂದು ಹೇಳಿದ ಗಂಗೂಲಿಗೇ ಹೃದಯಾಘಾತವಾಗಿದೆ. ಈ ಸಂಸ್ಥೆಯನ್ನು ನಾವು ನಂಬಬಹುದೇ ಎಂದು ಅನೇಕರು ಗೇಲಿ ಮಾಡಿದ್ದರು.

ಟ್ವಿಟರ್​ನಲ್ಲಿ ಈ ಕುರಿತು ಸರಣಿ ಟ್ವೀಟ್​ಗಳಾಗಿದ್ದು, ಅದಾನಿ ಸಂಸ್ಥೆಯ ಜಾಹೀರಾತನ್ನು ಅನೇಕರು ಕಟುವಾಗಿ ಟೀಕಿಸಿದ್ದಾರೆ. ಗಂಗೂಲಿ ಅವರನ್ನು ಜಾಹೀರಾತಿಗೆ ಬಳಸಿಕೊಂಡ ಕಾರಣ ನಮಗೆ ವಿಷಯ ಗೊತ್ತಾಗಿದೆ. ಒಂದುವೇಳೆ ಅವರ ಜಾಗದಲ್ಲಿ ಅಷ್ಟೇನು ಪ್ರಸಿದ್ಧಿ ಅಲ್ಲದ ಮುಖಗಳಿದ್ದರೆ ಅವರಿಗೆ ಏನಾಗುತ್ತಿತ್ತು ಎನ್ನುವುದೂ ತಿಳಿಯುತ್ತಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಟೀಕೆ ವ್ಯಕ್ತವಾದ ಬೆನ್ನಲ್ಲೇ, ಅದಾನಿ ವಿಲ್ಮರ್ ಸಂಸ್ಥೆ ಸದರಿ ಜಾಹೀರಾತನ್ನು ತಡೆಹಿಡಿದಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಂಗಳವಾರ ಆಸ್ಪತೆಯಿಂದ ಡಿಸ್ಚಾರ್ಜ್​ ಸಾಧ್ಯತೆ