ಆದಿಯೋಗಿ ಪ್ರಕರಣ: ಭೂಮಿ ಅತಿಕ್ರಮಣ ಮಾಡಿಲ್ಲ ಎಂದು ಸಾಕ್ಷ್ಯ ಬಿಡುಗಡೆ ಮಾಡಿದ ಇಶಾ ಫೌಂಡೇಶನ್

|

Updated on: Sep 02, 2023 | 8:19 PM

ಆದಿಯೋಗಿಯದ್ದು ವಿಗ್ರಹ, ಅದು ಕಟ್ಟಡವಲ್ಲ. ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ಇದೆ. ಇದು DTCP ಯ ಅನುಮತಿ ವ್ಯಾಪ್ತಿಯೊಳಗೆ ಬರುವುದಿಲ್ಲ. ಹಾಗಾಗಿ ತಮ್ಮ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಡಿಟಿಸಿಪಿ, ನ್ಯಾಯಾಲಯದಲ್ಲಿ ಹೇಳಿದೆ ಎಂದು ತಿರು ರಾಜಾ ಹೇಳಿದ್ದಾರೆ.ಬುಡಕಟ್ಟು ಜನರಿಗೆ ಸೇರಿದ 44 ಎಕರೆ ಭೂಮಿಯನ್ನು ಇಶಾ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ನಿರಾಕರಿಸಿದ ರಾಜಾ, ಇಶಾ ಯಾರ ಭೂಮಿಯನ್ನೂ  ಅತಿಕ್ರಮಿಸಿಲ್ಲ ಎಂದಿದ್ದಾರೆ.

ಆದಿಯೋಗಿ ಪ್ರಕರಣ: ಭೂಮಿ ಅತಿಕ್ರಮಣ ಮಾಡಿಲ್ಲ ಎಂದು ಸಾಕ್ಷ್ಯ ಬಿಡುಗಡೆ ಮಾಡಿದ ಇಶಾ ಫೌಂಡೇಶನ್
ಆದಿಯೋಗಿ
Follow us on

ಚೆನ್ನೈ ಸೆಪ್ಟೆಂಬರ್ 02: ಮದ್ರಾಸ್ ಹೈಕೋರ್ಟ್‌ನಲ್ಲಿ (Madras High Court) ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿಯೋಗಿ (Adiyogi) ನಿರ್ಮಾಣವನ್ನು ಅಧಿಕೃತಗೊಳಿಸುವ ಆರ್‌ಟಿಐ ಫೈಲಿಂಗ್‌ಗೆ ಸರ್ಕಾರದ ಪ್ರತಿಕ್ರಿಯೆ ಮತ್ತು ಅಗತ್ಯವಿರುವ ಸರ್ಕಾರಿ ಇಲಾಖೆಯಿಂದ ಎಲ್ಲಾ ಅಗತ್ಯ ಅನುಮತಿಗಳ ದಾಖಲೆಯನ್ನು ಸಾಕ್ಷ್ಯವಾಗಿ ಇಶಾ ಫೌಂಡೇಶನ್ ಬಿಡುಗಡೆ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ಎಲ್ಲಾ ಸಾಕ್ಷ್ಯಚಿತ್ರ ಪುರಾವೆಗಳನ್ನು ಪ್ರಸ್ತುತಪಡಿಸಿದ ಇಶಾ ಯೋಗ ಕೇಂದ್ರದ (Isha Yoga Center) ವಕ್ತಾರ ತಿರು ದಿನೇಶ್ ರಾಜಾ, ಕೊಯಮತ್ತೂರಿನ ಜಿಲ್ಲಾಧಿಕಾರಿಗಳಿಂದ ಅಗತ್ಯ ಅನುಮತಿ ಪಡೆದ ನಂತರ ನಾವು ಆದಿಯೋಗಿ ಶಿವನನ್ನು ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ. ಸುಳ್ಳು ಆರೋಪಗಳನ್ನು ಖಂಡಿಸಿದ ಅವರು, ಆದಿಯೋಗಿಯ ಅನಾವರಣವನ್ನು ಹೇಗಾದರೂ ನಿಲ್ಲಿಸುವ ಉದ್ದೇಶದಿಂದ ಸಂಘಟನೆಯೊಂದು ಜನವರಿ 2017 ರಲ್ಲಿ ಇಶಾ ವಿರುದ್ಧ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ ಎಂದು ವಿವರಿಸಿದರು. ಕಳೆದ ತಿಂಗಳು ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ ಮತ್ತು ಗೌರವಾನ್ವಿತ ಉಚ್ಚ ನ್ಯಾಯಾಲಯದ ಅದನ್ನು ಮುಚ್ಚಿದೆ ಎಂಬುದನ್ನು ಗಮನಿಸಿ ಎಂದಿದ್ದಾರೆ ರಾಜಾ.

ಕೊಯಮತ್ತೂರಿನ ಹೆಮ್ಮೆ ಮತ್ತು ಆಧ್ಯಾತ್ಮಿಕ ಐಕಾನ್ ಆಗಿರುವ ಆದಿಯೋಗಿ ಶಿವನನ್ನು 2017 ರಲ್ಲಿ ಸ್ಥಾಪಿಸಲಾಯಿತು. ಸಾಮಾನ್ಯವಾಗಿ, ಯಾವುದೇ ಪ್ರತಿಮೆಗಳನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳ ಅನುಮೋದನೆ ಅಗತ್ಯ. ಅದರಂತೆ 2016ರಲ್ಲಿ ಆದಿಯೋಗಿಯನ್ನು ಪ್ರತಿಷ್ಠಾಪಿಸಲು ಜಿಲ್ಲಾಧಿಕಾರಿ ಅನುಮತಿಗೆ ಅರ್ಜಿ ಸಲ್ಲಿಸಿದ್ದೆವು. ಜಿಲ್ಲಾಧಿಕಾರಿಗಳು, ತಪಾಸಣಾ ವರದಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಶಿಫಾರಸುಗಳನ್ನು ಆಧರಿಸಿ, ನಮ್ಮ ಅರ್ಜಿಯನ್ನು ಗೌರವಿಸಿ, ಆದಿಯೋಗಿಯನ್ನು ಪ್ರತಿಷ್ಠಾಪಿಸಲು ಸೆಪ್ಟೆಂಬರ್ 2016 ರಲ್ಲಿ ಅನುಮತಿ ನೀಡಿದರು. ಆದ್ದರಿಂದ, ಆದಿಯೋಗಿಯನ್ನು ಯಾವುದೇ ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ಹೇಳುವುದು ನಿರಾಧಾರ. ಹೈಕೋರ್ಟ್ ಆದೇಶದಂತೆ, ನಮ್ಮ ಬಳಿ ಲಭ್ಯವಿರುವ ದಾಖಲೆಗಳನ್ನು ನಗರ ಯೋಜನಾ ಇಲಾಖೆಗೆ ಸಲ್ಲಿಸಿದ್ದೇವೆ.

ಆದಿಯೋಗಿಯದ್ದು ವಿಗ್ರಹ, ಅದು ಕಟ್ಟಡವಲ್ಲ. ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ಇದೆ. ಇದು DTCP ಯ ಅನುಮತಿ ವ್ಯಾಪ್ತಿಯೊಳಗೆ ಬರುವುದಿಲ್ಲ. ಹಾಗಾಗಿ ತಮ್ಮ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಡಿಟಿಸಿಪಿ, ನ್ಯಾಯಾಲಯದಲ್ಲಿ ಹೇಳಿದೆ ಎಂದು ತಿರು ರಾಜಾ ಹೇಳಿದ್ದಾರೆ.

ಬುಡಕಟ್ಟು ಜನರಿಗೆ ಸೇರಿದ 44 ಎಕರೆ ಭೂಮಿಯನ್ನು ಇಶಾ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ನಿರಾಕರಿಸಿದ ರಾಜಾ, ಇಶಾ ಯಾರ ಭೂಮಿಯನ್ನೂ  ಅತಿಕ್ರಮಿಸಿಲ್ಲ. 44 ಎಕರೆ ಜಮೀನನ್ನು ಇಶಾ ವಶ ಪಡಿಸಿದೆ ಎಂದು ಅವರು ಸಾಬೀತುಪಡಿಸಿದರೆ, ನಾವು ಅದನ್ನು ತಕ್ಷಣವೇ ಹಿಂದಿರುಗಿಸುತ್ತೇವೆ. ಈ ಬಗ್ಗೆ ಆರ್‌ಟಿಐ ಪ್ರಶ್ನೆಗೆ ಉತ್ತರವಾಗಿ, ಆರ್‌ಟಿಐ ವರದಿಯು ಇಶಾ 44 ಎಕರೆಯನ್ನು ಅತಿಕ್ರಮಿಸಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ.

ಆನೆ ಕಾರಿಡಾರ್ ಮತ್ತು ಆನೆಗಳ ಆವಾಸಸ್ಥಾನದಲ್ಲಿ ಇಶಾ ಅವರ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ತಿರು ದಿನೇಶ್ ರಾಜಾ, ವಿವಿಧ ಅಧಿಕೃತ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳಿಂದ 5 ವಿಭಿನ್ನ ಸಾಕ್ಷ್ಯಚಿತ್ರ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿದ್ದು, ಇದು ಇಶಾ ಯೋಗ ಕೇಂದ್ರವು ಆನೆ ಕಾರಿಡಾರ್‌ನಲ್ಲಿಲ್ಲ ಎಂಬುದಕ್ಕೆ ಪುರಾವೆಯಾಗಿದೆ.

ತಮಿಳುನಾಡು ಅರಣ್ಯ ಇಲಾಖೆಯ ಆರ್ ಟಿಐ ಮಾಹಿತಿ, ತಮಿಳುನಾಡು ಅರಣ್ಯ ಇಲಾಖೆ, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ವರದಿ, ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF) ವರದಿ ಮತ್ತು ಭಾರತೀಯ ವನ್ಯಜೀವಿ ಟ್ರಸ್ಟ್ (WTI) ಸಂಶೋಧನಾ ವರದಿ, 2005 ಮತ್ತು 2017ರ ರ ತಜ್ಞರ ಸಮಿತಿಯಿಂದ ವರದಿ ಉಲ್ಲೇಖಿಸಿದ ಅವರು ಈ ವರದಿಗಳಲ್ಲಿ ಆನೆ ಕಾರಿಡಾರ್ ಪ್ರದೇಶಗಳಲ್ಲಿ ಇಶಾ ಈಶ ಯೋಗ ಕೇಂದ್ರ ಇದೆ ಎಂದು ಹೇಳಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಪ್ರವಾಸಿಗರ ಗಮನಕ್ಕೆ! ಚಿಕ್ಕಬಳ್ಳಾಪುರದ ಈಶಾ ಸದ್ಗುರು ಸನ್ನಿಧಿಗೆ ಹೋಗಲು ಪರದಾಟ ಬೇಡ: ಇಲ್ಲಿವೆ ಉತ್ತಮ ಮಾರ್ಗಗಳು

ಈ ಪತ್ರಿಕಾಗೋಷ್ಠಿಯಲ್ಲಿ, ತಿರುರಾಜ ಅವರು ವರದಿಗಾರರಿಗೆ ಸೂಕ್ತ ದಾಖಲೆಗಳು ಮತ್ತು ಪುರಾವೆಗಳನ್ನು ಪ್ರಸ್ತುತಪಡಿಸಿದರು, ಅರಣ್ಯವನ್ನು ನಾಶಪಡಿಸಿದ ನಂತರ ಆದಿಯೋಗಿ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂಬ ಎಲ್ಲಾ ಆರೋಪಗಳನ್ನು ಸುಳ್ಳು, ನಿರಾಧಾರ ಮತ್ತು ದೂಷಣೆ ಎಂದ ಅವರು ಇದು ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್ (EIA) ಅನುಮತಿಯನ್ನು ಒಳಗೊಂಡಿತ್ತು ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ