ಚಂದ್ರಯಾನ-3 ಬಗ್ಗೆ ಇಸ್ರೋದಿಂದ ಮತ್ತೊಂದು ಅಪ್‌ಡೇಟ್‌: ತನ್ನ ಕಾರ್ಯ ಯೋಜನೆ ಪೂರ್ಣಗೊಳಿಸಿದ ರೋವರ್

ಚಂದ್ರನ ದಕ್ಷಿಣ ಧ್ರುವದಲ್ಲಿ ಓಡಾಟ ನಡೆಸಿರುವ ಪ್ರಜ್ಞಾನ್​​​​ ರೋವರ್ ದಿನಕ್ಕೊಂದು ಕೌತುಕ ಮಾಹಿತಿಯನ್ನು ಭೂಮಿಗೆ ಕಳುಹಿಸುತ್ತಿದೆ. ಅದೇ ರೀತಿಯಾಗಿ ಇದೀಗ ಚಂದ್ರಯಾನ-3 ಬಗ್ಗೆ ಇಸ್ರೋದಿಂದ ಮತ್ತೊಂದು ಅಪ್‌ಡೇಟ್​ ಬಂದಿದೆ. ರೋವರ್ ತನ್ನ ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದು ಇಸ್ರೋ ಟ್ವೀಟ್​ ಮೂಲಕ ಮಾಹಿತಿ ನೀಡಿದೆ.

ಚಂದ್ರಯಾನ-3 ಬಗ್ಗೆ ಇಸ್ರೋದಿಂದ ಮತ್ತೊಂದು ಅಪ್‌ಡೇಟ್‌: ತನ್ನ ಕಾರ್ಯ ಯೋಜನೆ ಪೂರ್ಣಗೊಳಿಸಿದ ರೋವರ್
ಪ್ರಜ್ಞಾನ್‌ ರೋವರ್‌
Follow us
ಗಂಗಾಧರ​ ಬ. ಸಾಬೋಜಿ
|

Updated on:Sep 02, 2023 | 10:51 PM

ಬೆಂಗಳೂರು, ಸೆಪ್ಟೆಂಬರ್​ 2: ಚಂದ್ರಯಾನ-3 (Chandrayaan-3) ಯೋಜನೆಯೂ ಸಕ್ಸಸ್​​ ಆಗಿದ್ದು, ಭಾರತದ ಕೀರ್ತಿ ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ. ಅತ್ತ ಚಂದ್ರನ ದಕ್ಷಿಣ ಧ್ರುವದಲ್ಲಿ ಓಡಾಟ ನಡೆಸಿರುವ ಪ್ರಜ್ಞಾನ್​​​​ ರೋವರ್ ದಿನಕ್ಕೊಂದು ಕೌತುಕ ಮಾಹಿತಿಯನ್ನು ಭೂಮಿಗೆ ಕಳುಹಿಸುತ್ತಿದೆ. ಅದೇ ರೀತಿಯಾಗಿ ಇದೀಗ ಚಂದ್ರಯಾನ-3 ಬಗ್ಗೆ ಇಸ್ರೋದಿಂದ ಮತ್ತೊಂದು ಅಪ್‌ಡೇಟ್​ ಬಂದಿದೆ. ರೋವರ್ ತನ್ನ ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸಿದೆ. ರೋವರ್‌ನ್ನು ಈಗ ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದೆ ಎಂದು ಇಸ್ರೋ ಟ್ವೀಟ್​ ಮೂಲಕ ಮಾಹಿತಿ ನೀಡಿದೆ.

ಪ್ರಜ್ಞಾನ್‌ ರೋವರ್‌ನ್ನು ಸ್ಲೀಪ್ ಮೋಡ್‌ನಲ್ಲಿ ಇಡಲಾಗಿದೆ. APXS ಮತ್ತು LIBS ಪೇಲೋಡ್‌ಗಳನ್ನು ಆಫ್ ಮಾಡಲಾಗಿದೆ. ಪೇಲೋಡ್‌ಗಳಿಂದ ದತ್ತಾಂಶ ಲ್ಯಾಂಡರ್ ಮೂಲಕ ರವಾನೆ ಆಗುತ್ತೆ. ಪ್ರಸ್ತುತ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಿದೆ.

ಇಸ್ರೋ ಟ್ವೀಟ್ ಹೀಗಿದೆ

ಸೆ.22ರಂದು ಮುಂದಿನ ಸೂರ್ಯೋದಯದಲ್ಲಿ ಬೆಳಕು ನಿರೀಕ್ಷಿಸಲಾಗಿದೆ. ಬೆಳಕು ಸ್ವೀಕರಿಸಲು ಸೌರಫಲಕದ ರಿಸೀವರ್‌ನ್ನು ಆನ್‌ನಲ್ಲಿ ಇರಿಸಲಾಗಿದೆ. ಮುಂದಿನ ಸೂರ್ಯೋದಯದಂದು ಕಾರ್ಯ ಮುಂದುವರಿಸುವ ವಿಶ್ವಾಸವಿದ್ದು, ಮತ್ತೊಂದು ಸುತ್ತಿನ ಅಸೈನ್‌ಮೆಂಟ್‌ಗೆ ರೋವರ್‌ ಸಿದ್ಧವಾಗುವ ಭರವಸೆ ಇದೆ. ಇದು ಸಾಧ್ಯವಾಗದಿದ್ದರೆ ಭಾರತದ ಚಂದ್ರನ ರಾಯಭಾರಿಯಾಗಿ ಶಾಶ್ವತವಾಗಿ ಉಳಿಯುತ್ತದೆ ಎಂದು ಇಸ್ರೋ ಟ್ವೀಟ್​ ಮಾಡಿದೆ.

ಇದನ್ನೂ ಓದಿ: ಚಂದ್ರಯಾನ-3: ಚಂದ್ರನಲ್ಲಿ ಸಲ್ಫರ್ ಪತ್ತೆ, ಚಂದಿರನ ಅಂಗಳದಲ್ಲಿ ಗಂಧಕ ಬಂದಿದ್ದು ಹೇಗೆ?

ಚಂದ್ರನ ಅಂಗಳದಲ್ಲಿ ಅಧ್ಯಯನ ನಡೆಸುತ್ತಿರುವ ಪ್ರಜ್ಞಾನ್ ರೋವರ್‌ಗೆ ಇತ್ತೀಚೆಗೆ ದೊಡ್ಡದೊಂದು ಕುಳಿ ಎದುರಾಗಿತ್ತು. ಈ ಕುಳಿ ರೋವರ್‌ಗೆ 3 ಮೀಟರ್‌ ದೂರದಲ್ಲಿ ಇತ್ತು. ನಂತರ ಇಸ್ರೋ ರೋವರ್ ಮಾರ್ಗವನ್ನು ಬದಲಾಯಿಸಿತ್ತು. ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಹಲವು ಖನಿಜಗಳನ್ನು ರೋವರ್ ಪತ್ತೆ ಮಾಡಿತ್ತು.

ಮುಖ್ಯವಾಗಿ ಚಂದ್ರನಲ್ಲಿ ಸಲ್ಫರ್ ಅಂದರೆ ಗಂಧಕ ಇರುವಿಕೆಯನ್ನು ರೋವರ್ ದೃಢಪಡಿಸಿತ್ತು. ಈ ಬಗ್ಗೆ ಇಸ್ರೋ ಟ್ವೀಟ್​​​ ಸಹ ಮಾಡಿತ್ತು. ಗ್ರಾಫ್​​​ ಮೂಲಕ ಮಾಹಿತಿ ನೀಡಲಾಗಿತ್ತು. ರೋವರ್‌ನಲ್ಲಿರುವ ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋ ಸ್ಕೋಪ್ ಉಪಕರಣ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ ಇರುವಿಕೆಯನ್ನು ಖಚಿತ ಪಡಿಸಿದೆ ಎಂದು ಇಸ್ರೋ ಹೇಳಿತ್ತು.

ಸದ್ಯ ಪ್ರಜ್ಞಾನ್​​ ರೋವರ್ ಈವರೆಗೆ ಸುಮಾರು 15ಕ್ಕೂ ಹೆಚ್ಚು ಮೀಟರ್ ದೂರವನ್ನು ಕ್ರಮಿಸಿದೆ. ಸೌರಶಕ್ತಿ ಚಾಲಿತ ಪ್ರಜ್ಞಾನ್​​​​ ರೋವರ್ ವೈಜ್ಞಾನಿಕ ಪ್ರಯೋಗಗಳನ್ನು ಮುಂದುವರೆಸುತ್ತಿದೆ. ಚಂದ್ರಯಾನದ ಮಿಷನ್ ಇನ್ನೂ ಕೆಲ ದಿನಗಳಿದ್ದು, ಮತ್ಯಾವ ವಿಸ್ಮಯವನ್ನ ಪ್ರಜ್ಞಾನ್​​ ರೋವರ್​​​ ಪತ್ತೆ ಮಾಡುತ್ತೆ ಎನ್ನುವುದು ಸದ್ಯದ ಕೌತುಕವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:50 pm, Sat, 2 September 23