ನಟ ವಿಷ್ಣು ವಿಶಾಲ್-ಜ್ವಾಲಾ ದಂಪತಿ ಮಗಳಿಗೆ ಹೆಸರಿಟ್ಟ ಆಮಿರ್; ಇಲ್ಲಿದೆ ನಾಮಕರಣ ಶಾಸ್ತ್ರದ ಫೋಟೋ
ತಮಿಳು ನಟ ವಿಷ್ಣು ವಿಶಾಲ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಏಪ್ರಿಲ್ 22ರಂದು ಹೆಣ್ಣು ಮಗುವನ್ನು ಸ್ವಾಗತಿಸಿದರು. ಆ ಬಳಿಕ ದಂಪತಿ ಬಾಳಲ್ಲಿ ಖುಷಿ ಹೆಚ್ಚಾಗಿದೆ. ಈಗ ಮಗುವಿಗೆ ನಾಮಕರಣ ಶಾಸ್ತ್ರ ನಡೆದಿದೆ. ಈ ಸಮಾರಂಭಕ್ಕೆ ಆಮಿರ್ ಖಾನ್ ಅವರು ಅತಿಥಿ ಆಗಿ ಬಂದಿದ್ದರು ಅನ್ನೋದು ವಿಶೇಷ.
Updated on:Jul 08, 2025 | 7:33 AM

ತಮಿಳು ನಟ ವಿಷ್ಣು ವಿಶಾಲ್ ಹಾಗೂ ಜ್ವಾಲಾ ಗುಟ್ಟಾ ದಂಪತಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಏಪ್ರಿಲ್ನಲ್ಲಿ ಜ್ವಾಲಾಗೆ ಹೆಣ್ಣು ಮಗು ಜನಿಸಿತು. ಈಗ ಈ ಮಗುವಿಗೆ ನಾಮಕರಣ ಶಾಸ್ತ್ರ ನಡೆದಿದೆ. ಆಮಿರ್ ಖಾನ್ ಬಂದು ಮಗುವಿಗೆ ಹೆಸರು ಇಟ್ಟಿದ್ದಾರೆ.

ಹೈದರಾಬಾದ್ನಲ್ಲಿ ವಿಷ್ಣು ಹಾಗೂ ಜ್ವಾಲಾ ಮಗಳ ನಾಮಕರಣ ಶಾಸ್ತ್ರ ನಡೆದಿದೆ. ಮಗಳಿಗೆ ಮೀರಾ ಎಂದು ಹೆಸರು ಇಟ್ಟಿದ್ದಾರೆ. ಈ ಸಂದರ್ಭದ ಫೋಟೋನ ಜ್ವಾಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಆಮಿರ್ ಅತಿಥಿಯಾಗಿ ಆಗಮಿಸಿದ್ದರು.

‘ನಮ್ಮ ಮೀರಾ. ಇನ್ನೂ ಹೆಚ್ಚಿನದ್ದನ್ನು ಕೇಳಲು ಸಾಧ್ಯವಿಲ್ಲ. ನೀವಿಲ್ಲದೆ ಈ ಪ್ರಯಾಣ ಅಸಾಧ್ಯವಾಗುತ್ತಿತ್ತು ಆಮಿರ್. ಸುಂದರ ಮತ್ತು ಚಿಂತನಾಶೀಲ ಹೆಸರನ್ನು ನೀಡಿದ್ದಕ್ಕೆ ಧನ್ಯವಾದಗಳು’ ಎಂದು ಜ್ವಾಲಾ ಬರೆದುಕೊಂಡಿದ್ದಾರೆ.

ಹೆಸರು ಇಡೋ ಸಂದರ್ಭದಲ್ಲಿ ಜ್ವಾಲಾ ಅವರು ತುಂಬಾನೇ ಭಾವುಕರಾಗಿದ್ದರು. ಈ ವೇಳೆ ಆಮಿರ್ ಖಾನ್ ಅವರು ಜ್ವಾಲಾನ ಸಂತೈಸಿದರು. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಆಮಿರ್ ಅವರು ವಿಶೇಷ ಅತಿಥಿಯಾಗಿ ಬಂದಿದ್ದಕ್ಕೆ ಕುಟುಂಬದವರೆಲ್ಲರೂ ಖುಷಿಪಟ್ಟಿದ್ದಾರೆ.

ವಿಷ್ಣು ಹಾಗೂ ಜ್ವಾಲಾ 2021ರಲ್ಲಿ ವಿವಾಹ ಆದರು. ಹೈದರಾಬಾದ್ನಲ್ಲಿ ಖಾಸಗಿಯಾಗಿ ಈ ಕಾರ್ಯಕ್ರಮ ನಡೆಯಿತು. ವಿಷ್ಣು ನಟನಾದರೆ, ಜ್ವಾಲಾ ಅವರು ಬ್ಯಾಡ್ಮಿಂಟನ್ ಆಟಗಾರ್ತಿ. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಅರೆ. ವಿಷ್ಣು ವಿಶಾಲ್ ‘ಲಾಲ್ ಸಲಾಂ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು.
Published On - 7:32 am, Tue, 8 July 25

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



