ಪ್ರವಾಸಿಗರ ಗಮನಕ್ಕೆ! ಚಿಕ್ಕಬಳ್ಳಾಪುರದ ಈಶಾ ಸದ್ಗುರು ಸನ್ನಿಧಿಗೆ ಹೋಗಲು ಪರದಾಟ ಬೇಡ: ಇಲ್ಲಿವೆ ಉತ್ತಮ ಮಾರ್ಗಗಳು

ಚಿಕ್ಕಬಳ್ಳಾಪುರ ತಾಲೂಕು ಆವಲಗುರ್ಕಿ ಗ್ರಾಮದ ಬಳಿ ಇರುವ 112 ಅಡಿಗಳ ಆಧಿಯೋಗಿ ವಿಗ್ರಹವಿರುವ ಪವಿತ್ರ ಸನ್ನಿಧಿಯೊಂದಿದೆ. ಅಲ್ಲಿಯ ಆದಿಯೋಗಿ ನೋಡಲು ಪ್ರತಿದಿನ ಸಾವಿರಾರು ಭಕ್ತರು ಹೋಗುತ್ತಾರೆ. ಆದರೆ ಸೂಕ್ತ ರಸ್ತೆ ಮಾರ್ಗ ಗೊತ್ತಾಗದೆ ಪರದಾಡುತ್ತಿರುವುದು ಹೆಚ್ಚಾಗುತ್ತಿದೆ. ಹಾಗಾಗಿ ನಾಲ್ಕು ಉತ್ತಮ ಮಾರ್ಗಗಳು ಇಲ್ಲಿವೆ ನೋಡಿ.

ಪ್ರವಾಸಿಗರ ಗಮನಕ್ಕೆ! ಚಿಕ್ಕಬಳ್ಳಾಪುರದ ಈಶಾ ಸದ್ಗುರು ಸನ್ನಿಧಿಗೆ ಹೋಗಲು ಪರದಾಟ ಬೇಡ: ಇಲ್ಲಿವೆ ಉತ್ತಮ ಮಾರ್ಗಗಳು
ಪ್ರಾತಿನಿಧಿಕ ಚಿತ್ರ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 20, 2023 | 4:13 PM

ಚಿಕ್ಕಬಳ್ಳಾಪುರ, ಆಗಸ್ಟ್​ 20: ಚಿಕ್ಕಬಳ್ಳಾಪುರ (Chikkaballapur) ತಾಲೂಕು ಆವಲಗುರ್ಕಿ ಗ್ರಾಮದ ಬಳಿ ಇರುವ 112 ಅಡಿಗಳ ಆದಿಯೋಗಿಯ ಶಿವನ ವಿಗ್ರಹ, ಶಿವನ ಭಕ್ತರು ಹಾಗೂ ಸದ್ಗುರು ಜಗ್ಗಿ ವಾಸುದೇವ್​ರನ್ನು ನೋಡಲು ಪ್ರವಾಸಿಗರು ಬರುತ್ತಾರೆ. ಸದ್ಗುರು ಸನ್ನಿದಿಗೆ ಬರಲು ಸೂಕ್ತ ರಸ್ತೆ ಮಾರ್ಗ ಗೊತ್ತಾಗದೆ ಪರದಾಡುತ್ತಿರುವುದು ಹೆಚ್ಚಾಗುತ್ತಿದೆ. ಇನ್ನೂ ಗೂಗಲ್ ಮಾಪ್​ನಲ್ಲಿ ವಿವಿಧ ಮಾರ್ಗಗಳು ಇದ್ದು, ಅದರಲ್ಲಿ ಜಮೀನು ತೋಟ ಹಳ್ಳಿಗಳಿಗೆ ಹೋಗುವ ರಸ್ತೆಗಳು ಇವೆ. ಇದರಿಂದ ಮ್ಯಾಪ್​ಗಳನ್ನು ನಂಬಿಕೊಂಡು ಕೊನೆಗೆ ಸೂಕ್ತ ರಸ್ತೆ ಸಿಗದೆ ಪ್ರವಾಸಿಗರು ಪರದಾತ್ತಿದ್ದಾರೆ. ಹಾಗಾಗಿ ನಾಲ್ಕು ಉತ್ತಮ ಮಾರ್ಗಳನ್ನು ಈ ಕೆಳಗಿನಂತಿವೆ.

ಚಿಕ್ಕಬಳ್ಳಾಪುರದ ಸದ್ಗುರು ಸನ್ನಿದಿ ರಾಜಧಾನಿ ಬೆಂಗಳೂರಿನಿಂದ 65 ಕಿ.ಮೀ.ದೂರದಲ್ಲಿದೆ. ಬೆಂಗಳೂರಿನಿಂದ ಆದಿಯೋಗಿ ಸನ್ನಿಧಿಗೆ ಬರುವವರು ಮೊದಲು ಚಿಕ್ಕಬಳ್ಳಾಪುರ ನಗರಕ್ಕೆ ಬರಲೇಬೇಕು.

ಇದನ್ನೂ ಓದಿ: ಬಾಗೇಪಲ್ಲಿ: ಮಳೆಗಾಗಿ ಗ್ರಾಮ ದೇವತೆಗಳನ್ನು ಸುಡುವ ಸಂಪ್ರದಾಯ ಆಚರಣೆ

  • ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಮರಸನಹಳ್ಳಿ ಗ್ರಾಮದ ಬಳಿ ಎಡಕ್ಕೆ ತಿರುಗಿದರೆ ವಡ್ರೇಪಾಳ್ಯದ ಮೂಲಕ ಈಶಾ ಫೌಂಡೇಶನ್ ಸದ್ಗುರು ಸನ್ನಿಧಿ ತಲುಪಬಹುದು.
  • ಇನ್ನೂ ಚಿಕ್ಕಬಳ್ಳಾಪುರ ನಗರದಿಂದ ಕೆ.ಎಸ್.ಆರ್.ಟಿ.ಸಿ ಡಿಪೋ ರಸ್ತೆ, ಮುಸ್ಟೂರು, ಆವಲಗುರ್ಕಿ, ವಡ್ರೇಪಾಳ್ಯ ಮೂಲಕ ಈಶಾ ಫೌಂಡೇಷನ್ ತಲುಪಬಹುದು.
  • ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆ, ಪ್ರಶಾಂತ ನಗರ, ಹನುಮಂತಪುರ ಕಡೆಯಿಂದಲೂ ಸದ್ಗುರು ಸನ್ನಿಧಿ ತಲುಪಬಹುದು.
  • ಚಿಕ್ಕಬಳ್ಳಾಪುರದ ಎಂ.ಜಿ.ರಸ್ತೆಯಿಂದ ಅಂಕಣಗೊಂದಿ, ರಂಗಧಾಮ ಕೆರೆ, ಸೂಸೇಪಾಳ್ಯ ಮೂಲಕವೂ ಸದ್ಗುರು ಸನ್ನಿಧಿಗೆ ತಲುಪಬಹುದು. ಗೂಗಲ್‌ ಮ್ಯಾಪ್​ನಲ್ಲಿ ಜಮೀನು ಹಾಗೂ ತೋಟದ ರಸ್ತೆಗಳನ್ನೂ ಸಹ ತೋರಿಸುತ್ತದೆ. ವಾಹನ ಸವಾರರು ಅವುಗಳ ಬದಲು ಈ ನಾಲ್ಕು ಸೂಕ್ತ ಮಾರ್ಗಗಳನ್ನು ಆಯ್ಕೆ ಮಾಡಬಹುದು.

ಆಗಸ್ಟ್ 21 ರಂದು ನಾಗಾರಾಧನೆ ಕಾರ್ಯಕ್ರಮ

112 ಅಡಿಗಳ ಆದಿಯೋಗಿಯ ಶಿವನ ವಿಗ್ರಹ ಇರುವುದು ಚಿಕ್ಕಬಳ್ಳಾಪುರ ತಾಲೂಕು ಆವಲಗುರ್ಕಿ ಗ್ರಾಮದ ಬಳಿ ಇದೆ. ಇದನ್ನು ಈಶಾ ಫೌಂಡೇಶನ್ನಿನ ಸಂಸ್ಥಾಪಕರಾದ ಜಗ್ಗೀ ವಾಸುದೇವ್ ರವರು ಪ್ರತಿಷ್ಠಾಪನೆ ಮಾಡಿದ್ದಾರೆ. ಆದಿಯೋಗಿಯ ಸನ್ನಿಧಿ ಸುತ್ತಲೂ ಸುಂದರವಾದ ಗಿರಿ ಸಾಲುಗಳಿವೆ. ಎತ್ತ ನೋಡಿದರೂ ಸುಂದರವಾದ ಪ್ರಕೃತಿ ಸೊಬಗು ಕಾಣಸಿಗುತ್ತೆ.

ಇದನ್ನೂ ಓದಿ: ದುಷ್ಟ ಶಕ್ತಿಗಳ ನಿವಾರಣೆಗಾಗಿ ಜನ ಜಾತ್ರೆ, ಕಾಳಿಕಾಂಭದೇವಿಗೆ ಮೊರೆ, ರಾತ್ರಿಯಿಡಿ ಥಡೆ ಹೊಡೆಸಿಕೊಂಡು ನಿರಾಳರಾದ ಜನ!

ಇದೇ ಸದ್ಗುರು ಸನ್ನಧಿ ಆವರಣದಲ್ಲಿ ಬೃಹತ್ ಆದ ನಾಗಮಂಟಪ ನಿರ್ಮಾಣ ಮಾಡಿದ್ದು ಏಕಶಿಲೆಯಲ್ಲಿ ನಾಗವಿಗ್ರಹವಿದೆ. ಇದರಿಂದ ಆಗಸ್ಟ್ 21 ಸೋಮವಾರ ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ವಿಜೃಂಭಣೆಯ ನಾಗಾರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.