ಬಾಗೇಪಲ್ಲಿ: ಮಳೆಗಾಗಿ ಗ್ರಾಮ ದೇವತೆಗಳನ್ನು ಸುಡುವ ಸಂಪ್ರದಾಯ ಆಚರಣೆ

ಬಾಗೇಪಲ್ಲಿ ತಾಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡಪ್ಪಲ್ಲಿ ಗ್ರಾಮದಲ್ಲಿ ಮಳೆ ಬಾರದಿದ್ದಾಗ ಈ ಹಿಂದೆ ಕೆರೆಕಟ್ಟೆ ಹೋಗುವ ಸಾಂಪ್ರದಾಯವನ್ನು ಅನುಸರಿಸುತ್ತಿದ್ದರು. ಅದರಂತೆ, ಒಣ ಹುಲ್ಲಿನ ಕಟ್ಟಿಗೆ ಬೆಂಕಿಯನ್ನು ಹಚ್ಚಿ ಗ್ರಾಮದ ಪ್ರಮುಖರೆಲ್ಲರೂ ಬರಗಾಲದಿಂದ ಸತ್ತರೂ ಎಂದು ಅವಿವಾಹಿತರು ಹಾಗೂ ಬಾಲಕರು ಬಾಯಿ ಬಡುಕೊಳ್ಳುತ್ತಾರೆ.

ಬಾಗೇಪಲ್ಲಿ: ಮಳೆಗಾಗಿ ಗ್ರಾಮ ದೇವತೆಗಳನ್ನು ಸುಡುವ ಸಂಪ್ರದಾಯ ಆಚರಣೆ
ಬಾಗೆಪಲ್ಲಿಯಲ್ಲಿ ಮಳೆಗಾಗಿ ಕೆರೆಕಟ್ಟೆ ಹೋಗುವ ಸಂಪ್ರದಾಯ ಆಚರಣೆ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Rakesh Nayak Manchi

Updated on: Aug 18, 2023 | 4:07 PM

ಚಿಕ್ಕಬಳ್ಳಾಫುರ, ಆಗಸ್ಟ್ 18: ಬಾಗೇಪಲ್ಲಿ (Bagepalli) ತಾಲ್ಲೂಕಿನಲ್ಲಿ ಬಹುತೇಕ ಸರಿಯಾಗಿ ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಹಲವು ಗ್ರಾಮಗಳಲ್ಲಿ ಮಳೆ (Rain) ಬರುವಿಕೆಗಾಗಿ ಸಂಪ್ರದಾಯಗಳನ್ನು ಆಚರಿಸುತ್ತಿದ್ದಾರೆ. ಅದರಂತೆ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡಪ್ಪಲ್ಲಿ ಗ್ರಾಮದಲ್ಲಿ ಮಳೆ ಬಾರದಿದ್ದಾಗ ಆಚರಿಸುವ ಗ್ರಾಮ ದೇವತೆಗಳ ಸುಡವ ಸಂಪ್ರದಾಯವನ್ನು ಆಚರಿಸಲಾಗಿದೆ.

ಈ ಹಿಂದೆ ಕೆರೆಕಟ್ಟೆ ಹೋಗುವ ಸಾಂಪ್ರದಾಯವನ್ನು ಅನುಸರಿಸುತ್ತಿದ್ದರು. ಅದರಂತೆ ಮೂರು ದಿನ ಅಥವಾ ಐದು ದಿನಗಳ ಕಾಲ ಕೆರೆಕಟ್ಟೆ ಹೋಗುವಂತ ಒಂದು ಸಾಂಪ್ರದಾಯ ಹಿಂದಿನಿಂದಲೂ ಆಚರಿಸಲಾಗುತ್ತಿದೆ. ಒಣ ಹುಲ್ಲು ಅಥವಾ ಕಾಶಿ ಹುಲ್ಲಿನಿಂದ ಕಟ್ಟನ್ನು ಕಟ್ಟಲಾಗುತ್ತೆ. ನಂತರ ಆ ಕಟ್ಟಿಗೆ ಬೆಂಕಿಯನ್ನು ಹಚ್ಚಿ ಗ್ರಾಮದ ಪ್ರಮುಖರೆಲ್ಲರೂ ಬರಗಾಲದಿಂದ ಸತ್ತರು ಎಂಬ ಘೋಷಣೆಗಳೊಂದಿಗೆ ಅಯ್ಯಯ್ಯೋ ಅಯ್ಯಯ್ಯೋ ಎಂದು ಮದುವೆಯಾಗದ ಬಾಲಕರು ಬಾಯಿ ಬಡುಕೊಳ್ಳುತ್ತಾರೆ.

ನಂತರ ಕೆರೆಕಟ್ಟೆಯ ಮೇಲೆ ಮೂರು ಬಾರಿ ಗಂಗಮ್ಮ ದೇವರು ಗುಡಿಗು ಹಾಗೂ ಗ್ರಾಮದ ಸಮೀಪಕ್ಕೂ ಓಡಾಡುವರು ನಂತರ ಮತ್ತು ಚೌಡೇಶ್ವರಿ ದೇವಿ ಗಂಗಮ್ಮ ದೇವಾಲಯಗಳಲ್ಲಿ ಬೆಂಕಿಯ ಶಾಖವನ್ನು ತೋರಿಸಿ ಗಂಗಮ್ಮ ಸುಡ್ರೋ, ಚೌಡೇಶ್ವರಿಯನ್ನು ಸುಡ್ರೋ ಎಂದು ಬೆಂಕಿಯ ಕೆನ್ನಾಲಿಗೆಯನ್ನು ದೇವರ ವಿಗ್ರಹಗಳಿಗೆ ತಾಕಿಸುತ್ತಿದ್ದರು.

ಇದನ್ನೂ ಓದಿ: Karnataka Weather: ರಾಜ್ಯದಲ್ಲಿ ಮುಂಗಾರು ದುರ್ಬಲ, ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ

ಗಂಗಮ್ಮ ದೇವಾಲಯದ ಮುಂಭಾಗದಲ್ಲಿರುವ ಗಂಗಮ್ಮ ಬಾವಿಯಲ್ಲಿ ಈಜಾಡಿ, ಪೂಜೆ ಮಾಡಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅಲ್ಲಿಂದ ಗ್ರಾಮಕ್ಕೆ ಮರಳಿ ಬರುತ್ತಾರೆ. ಬಾಲಕರೆಲ್ಲರು ಗ್ರಾಮಕ್ಕೆ ಪ್ರವೇಶ ಮಾಡುತ್ತಿದ್ದಂತೆ ಅವರೆಲ್ಲರಿಗೂ ತಣ್ಣೀರು ಎರಚಿ ಗ್ರಾಮದ ಜನರು ಆಹ್ವಾನಿಸುತ್ತಾರೆ. ಆಗ ಬಾಲಕರು ಮಳೆ ಬಂತು ಮಳೆ ಬಂತು ಎನ್ನುತ್ತಾರೆ.

ನಂತರ ಗ್ರಾಮದ ರಾಮಸ್ವಾಮಿ ದೇವಾಲಯ ಹೋಗಿ, ಮಳೆ ಬರಲಿ ಸ್ವಾಮಿ ಎಂದು ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ರಾತ್ರಿ ಪೂರ್ತಿ ಉಪ್ಪರ ಪೆಟ್ಟಿಗೆ ಎಂಬ ಗ್ರಾಮೀಣ ಕ್ರೀಡೆಯನ್ನು ಮಾಡುತ್ತಿದ್ದರು. ಈ ಆಚರಣೆಯಿಂದ ಮಳೆ ಬರುತ್ತದೆ ಎಂಬ ನಿರೀಕ್ಷೆ ಹಾಗೂ ಭರವಸೆ ಗ್ರಾಮಸ್ಥರದ್ದರು.

ಈ ಸಂಪ್ರದಾಯ ಮೊದಲಿನಿಂದಲೂ ಮಾಡಪ್ಪಲ್ಲಿ ಗ್ರಾಮದಲ್ಲಿ ಆಚರಿಸುತ್ತಾ ಬರಲಾಗುತ್ತಿದೆ. ಅದರಂತೆ ಈ ಬಾರಿ ಮಳೆಯ ಅಭಾವದಿಂದ ಬೆಳೆಯಿಲ್ಲದೆ, ಅದೇ ರೀತಿ ಕುರಿ ಮೇಕೆಗಳಿಗೆ ಹುಲ್ಲು ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಮೂರು ದಿನಗಳ ಕಾಲ ಉಪ್ಪಾರಪೇಟೆಗೆ, ಕೆರೆಕಟ್ಟೆ ಹೋಗುವ ಸಾಂಪ್ರದಾಯಗಳನ್ನು ಮದುವೆಯಾಗದ ಬಾಲಕರು ಮಾಡಿದರು.

ಗ್ರಾಮದಲ್ಲಿ ಮಳೆ ಇಲ್ಲದೆ, ಬೆಳೆ ಇಲ್ಲದೆ ರೈತರು, ಕುರಿಗಾಹಿ, ಮೇಕೆ ಸಾಕಾಣಿಕೆದಾರರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದಿನಿಂದಲೂ ಮಳೆ ಬರದಿದ್ದಾಗ ಅನುಸರಿಸುತ್ತಿದ್ದ ಕೆರೆಕಟ್ಟೆ ಹೋಗುವ ಸಂಪ್ರದಾಯವನ್ನು ಮಾಡಿ, ದೇವರ ಮೊರೆ ಹೋಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ