ದುಷ್ಟ ಶಕ್ತಿಗಳ ನಿವಾರಣೆಗಾಗಿ ಜನ ಜಾತ್ರೆ, ಕಾಳಿಕಾಂಭದೇವಿಗೆ ಮೊರೆ, ರಾತ್ರಿಯಿಡಿ ಥಡೆ ಹೊಡೆಸಿಕೊಂಡು ನಿರಾಳರಾದ ಜನ!

ಮಾನಸಿಕ ಕಾಯಿಲೆ, ದುಷ್ಟ ಶಕ್ತಿಗಳಿಂದ ಬಳಲುತ್ತಿದ್ದವರು ನಾನಾ ಭಾಗಗಳಿಂದ ಆಗಮಿಸಿದ್ದರು. ನಿನ್ನೆ ಅಮವಾಸ್ಯೆ ಕಾರಣ ಕಾಳಿಕಾಂಬದೇವಿಯ ಸನ್ನಿಧಿ ಜನರಿಂದ ತುಂಬಿ ತುಳುಕಿತ್ತು. ಇಲ್ಲಿ ಭಕ್ತರಿಂದ ಪೂಜೆ ಪುನಸ್ಕಾರ ಅಂತಾ ಯಾವುದೇ ಹಣ ವಸೂಲಿ ಮಾಡುವುದಿಲ್ಲ, ಜನರಿಗೆ ಒಳ್ಳೆಯದು ಆದರೆ ಸಾಕು, ದೇವಿ ಪ್ರೇರಣೆಯಿಂದ ಜನ ಸೇವೆ ಮಾಡ್ತಿರೋದಾಗಿ ಕಣಜೇನಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಕಾಳಿಕಾಂಬದೇವಿ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಸುಬ್ರಮಣ್ಯಸ್ವಾಮಿ ತಿಳಿಸಿದ್ರು.

ದುಷ್ಟ ಶಕ್ತಿಗಳ ನಿವಾರಣೆಗಾಗಿ ಜನ ಜಾತ್ರೆ, ಕಾಳಿಕಾಂಭದೇವಿಗೆ ಮೊರೆ, ರಾತ್ರಿಯಿಡಿ ಥಡೆ ಹೊಡೆಸಿಕೊಂಡು ನಿರಾಳರಾದ ಜನ!
ಚಿಕ್ಕಬಳ್ಳಾಫುರ ತಾಲೂಕಿನ ಕಣಜೇನಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಕಾಳಿಕಾಂಬದೇವಿ ಕ್ಷೇತ್ರ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on:Aug 17, 2023 | 6:03 PM

ಚಿಕ್ಕಬಳ್ಳಾಪುರ, ಆಗಸ್ಟ್​ 17: ಅಮವಾಸ್ಯೆ ಬಂದರೆ ಸಾಕು ಅಲ್ಲಿ ಜನಜಾತ್ರೆ ಸೇರುತ್ತಾರೆ. ಒಂದು ಕೈಯಲ್ಲಿ ಕೋಳಿ, ಮತ್ತೊಂದು ಕೈಲ್ಲಿ ಪೂಜಾ ಸಾಮಾನು ಹಿಡಿದು ಸಾಲುಗಟ್ಟಿ ನಿಲ್ಲುತ್ತಾರೆ. ಮಾಟ ಮಂತ್ರ ದುಷ್ಟ ಶಕ್ತಿಗಳ ಕಾಟದಿಂದ ಬೇಸತ್ತಿರುವ ಜನ, ರಾತ್ರಿಯಿಡಿ ಸಾಲುಗಟ್ಟಿ ನಿಂತು ಥಡೆ ಹೊಡೆಸಿಕೊಳ್ಳುವುದರ ಮೂಲಕ (to ward off from evil) ನಿರಾಳರಾಗುತ್ತಿದ್ದಾರೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ನೋಡಿ!! ಹೀಗೆ ಅಮವಾಸ್ಯೆಯ ಕತ್ತಲಲ್ಲಿ ಸಾಲುಗಟ್ಟಿ ನಿಂತಿರುವ ಜನ, ಒಂದು ಕೈಲ್ಲಿ ಕೋಳಿ ಮತ್ತೊಂದು ಕೈಯಲ್ಲಿ ಪೂಜಾ ಸಾಮಾಗ್ರಿ ಹಿಡಿದು ಕಷ್ಟ ಕಾರ್ಪಣ್ಯಗಳ ಮೊರೆ ಹೋಗಿರುವ ದೃಶ್ಯ ಕಂದು ಬಂದಿದ್ದು ಚಿಕ್ಕಬಳ್ಳಾಫುರ ತಾಲೂಕಿನ ಕಣಜೇನಹಳ್ಳಿ ಗ್ರಾಮದ (Kanajenahalli in chikkaballapur) ಬಳಿ ಇರುವ ಶ್ರೀ ಕಾಳಿಕಾಂಬದೇವಿ ಸನ್ನಿಧಿಯಲ್ಲಿ (Kalikambha devi puja).

ಹೌದು! ಅಮವಾಸ್ಯೆಯ ದಿನ ಇಲ್ಲಿಗೆ ಆಗಮಿಸಿ ಮಾಟ ಮಂತ್ರ ದುಷ್ಟ-ಶಕ್ತಿಯ ಕಾಟ ಹಾಗೂ ಮಾನಸಿಕ ಸಮಸ್ಯೆಗಳನ್ನು ಜನರು ಬಗೆಹರಿಸಿಕೊಂಡಿದ್ದಾರೆ. ಮಾಟ ಮಂತ್ರ ದುಷ್ಟ-ಶಕ್ತಿಯ ಕಾಟದಿಂದ ನೊಂದ ಜನರು ಇಲ್ಲಿಗೆ ಆಗಮಿಸ್ತಾರೆ. ಶ್ರೀ ಕಾಳಿಕಾಂಬದೇವಿ ಎದುರು ನಿಂತು ದೃಷ್ಟಿ ತೆಗೆಸಿಕೊಂಡರೆ ಸಮಸ್ಯೆಗಳು ಬಗೆಯರಿಯುತ್ತವೆ, ಇನ್ನು ಮಾಟ ಮಂತ್ರ ದುಷ್ಟ ಶಕ್ತಿಯಿಂದ ನೊಂದ ಕೆಲವರು ದೇವಿಯ ಮುಂದೆ ಪೀಠದಲ್ಲಿ ಕುಳಿತು ಶಾಸ್ತ್ರೋಕ್ತವಾಗಿ ಥಡೆ ಹೊಡೆಸಿಕೊಳ್ತಾರೆ.

ಮತ್ತೊಂದೆಡೆ ದೆವ್ವದ ರೀತಿಯಲ್ಲಿ ಮಾನಸಿಕವಾಗಿ ಕಾಡುವ ಕೆಲವು ಸಮಸ್ಯೆಗಳಿಂದ ಬಳಲುವವರು ಇಲ್ಲಿಗೆ ಆಗಮಿಸ್ತಾರೆ. ಅದರಲ್ಲೂ ಇಲ್ಲಿರುವ ಪೀಠದ ಮೇಲೆ ಕುಳಿತುಕೊಳ್ತಿದ್ದಂತೆ… ಮೈ ಮನಸ್ಸು ಸೇರಿದ್ದ ದೆವ್ವಗಳು ವಿಕಾರವಾಗಿ ವಿಚಿತ್ರವಾಗಿ ಕೂಗಾಡುವುದರ ಮೂಲಕ ದೇವಿಗೆ ಸವಾಲು ಹಾಕುತ್ತವೆ, ದೇವಿಯ ಭಂಡಾರ ಹಣಗೆ ಹಚ್ಚುತ್ತಿದ್ದಂತೆ ಗಾಯಬ್ ಆಗುವ ದೃಶ್ಯಗಳು ಕಂಡು ಬಂತು.

Kalikambha devi puja performed by devotees at Kanajenahalli in chikkaballapur to ward off from evil

ಇನ್ನು ಕೆಲವು ಮಾನಸಿಕ ಕಾಯಿಲೆಗಳು, ದುಷ್ಟ ಶಕ್ತಿಗಳಿಂದ ಬಳಲುತ್ತಿದ್ದ ಕೆಲವರು ರಾಜಧಾನಿ ಬೆಂಗಳೂರು, ಆಂಧ್ರ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧ ನಗರ ಹಾಗೂ ಗ್ರಾಮಗಳಿಂದ ಜನರು ಆಗಮಿಸಿದ್ರು. ನಿನ್ನೆ ಅಮವಾಸ್ಯೆಯಾದ ಕಾರಣ ಶ್ರೀ ಕಾಳಿಕಾಂಬದೇವಿಯ ಸನ್ನಿಧಿ ಜನರಿಂದ ತುಂಬಿ ತುಳುಕಿತ್ತು. ಇನ್ನು ಇಲ್ಲಿಗೆ ದೇವಿಯ ಭಕ್ತರು ಪೂಜೆ ಪುನಸ್ಕಾರ ಅಂತಾ ಯಾವುದೇ ಹಣ ವಸೂಲಿ ಮಾಡುವುದಿಲ್ಲ, ಜನರಿಗೆ ಒಳ್ಳೆಯದು ಆದರೆ ಸಾಕು, ನಮಗೆ ದೇವಿಯ ಪ್ರೇರಣೆಯಿಂದ ಜನ ಸೇವೆ ಮಾಡ್ತಿರೋದಾಗಿ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಸುಬ್ರಮಣ್ಯಸ್ವಾಮಿಗಳು ತಿಳಿಸಿದ್ರು.

ಆಧುನಿಕ ಕಾಲದಲ್ಲಿ ಡಿಜಿಟಲ್​ ಸೌಲಭ್ಯ, ಸೌಕರ್ಯಗಳು ಹೆಚ್ಚಾದಷ್ಟೂ ಜನರ ಮಾನಸಿಕ ಸಮಸ್ಯೆಗಳು ಹಾಗೂ ದುಷ್ಟ ಕಾಟ ಮಾಟ ಮಂತ್ರದ ಕಾಟವೂ ಹೆಚ್ಚಾಗಿದೆಯಂತೆ, ಇದ್ರಿಂದ ಜನರು ಕಾಳಿಕಾಂಭದೇವಿಯ ಮೊರೆ ಹೋಗುವುದರ ಮೂಲಕ ತಮ್ಮ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Thu, 17 August 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್