PFI Ban: ನಿಷೇಧಿತ PFI ಸದಸ್ಯರ ವಾಟ್ಸಾಪ್ ಗುಂಪಿನ ಅಡ್ಮಿನ್ ಪಾಕಿಸ್ತಾನದ ವ್ಯಕ್ತಿಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 18, 2022 | 5:23 PM

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ಸದಸ್ಯರ ವಾಟ್ಸಾಪ್ ಗುಂಪಿನ ಅಡ್ಮಿನ್ ಪಾಕಿಸ್ತಾನದ ವ್ಯಕ್ತಿಗಳು ಎಂದು ಭಯೋತ್ಪಾದನಾ ನಿಗ್ರಹ ದಳ ಅಥವಾ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

PFI Ban: ನಿಷೇಧಿತ PFI ಸದಸ್ಯರ ವಾಟ್ಸಾಪ್ ಗುಂಪಿನ ಅಡ್ಮಿನ್ ಪಾಕಿಸ್ತಾನದ ವ್ಯಕ್ತಿಗಳು
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ಸದಸ್ಯರ ವಾಟ್ಸಾಪ್ (whatsapp) ಗುಂಪಿನ ಅಡ್ಮಿನ್ ಪಾಕಿಸ್ತಾನದ ವ್ಯಕ್ತಿಗಳು ಎಂದು ಭಯೋತ್ಪಾದನಾ ನಿಗ್ರಹ ದಳ (Counter Terrorism Squad) ಅಥವಾ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅವರನ್ನು ಬಂಧಿಸಲಾಯಿತು ಮತ್ತು ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸಲು ಈ ಗುಂಪುಗಳನ್ನು ಯೋಜಿಸಲಾಗಿದೆ ಎಂದು ಆರೋಪಿಸಲಾಗಿದೆ.

ಎಟಿಎಸ್ ಅಧಿಕಾರಿಗಳು ಈ ವಾಟ್ಸಾಪ್ ಗುಂಪಿನಲ್ಲಿ ಅಫ್ಘಾನಿಸ್ತಾನ ಮತ್ತು ಯುಎಇಯ ವ್ಯಕ್ತಿಗಳಿದ್ದರು, ಈ ಗುಂಪು 175 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿತ್ತು. ಈ ಗುಂಪಿನಲ್ಲಿರುವ ಕೆಲವು ಸದಸ್ಯರು ವಿದೇಶದಲ್ಲಿವಿದ್ದರೆ. ಅಲ್ಲಿ ಈ ಬಗ್ಗೆ ವ್ಯವಹಾರಗಳನ್ನು ನಡೆಸುತ್ತಿದ್ದರೆ ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಮಹಾರಾಷ್ಟ್ರ ಎಟಿಎಸ್ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಈ ಗುಂಪಿನ ಮೇಲೆ ರಾಷ್ಟ್ರವ್ಯಾಪಿ ದಾಳಿಯನ್ನು ನಡೆಸಲಾಗಿತ್ತು. ಭಯೋತ್ಪಾದನೆಗೆ ಧನಸಹಾಯ ನೀಡಿದ ಆರೋಪ ಮೇಲೆ ಕೇಂದ್ರವು ಇತ್ತೀಚೆಗೆ ಪಿಎಫ್‌ಐನ್ನು ನಿಷೇಧಿಸಿ ಐವರು ಸದಸ್ಯರನ್ನು ಸೆಪ್ಟೆಂಬರ್ 22 ರಂದು ಬಂಧಿಸಲಾಯಿತು.

ಇದೀಗ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ಒಂದೊಂದು ಸತ್ಯಗಳು ಹೊರ ಬರುತ್ತಿದೆ. ತನಿಖೆಗಾಗಿ ಅವರ ಮೊಬೈಲ್ ಫೋನ್‌ಗಳು, ಕಂಪ್ಯೂಟರ್‌ಗಳ ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್‌ಗಳು ಮತ್ತು ಅವರ ಬ್ಯಾಂಕ್ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಮತ್ತು ಅವರ ಬ್ಯಾಂಕ್ ಖಾತೆಗಳಲ್ಲಿ ಅನುಮಾನಾಸ್ಪದ ವಹಿವಾಟುಗಳನ್ನು ಪತ್ತೆಹಚ್ಚಿದ್ದಾರೆ.

ಇದನ್ನು ಓದಿಮಂಗಳೂರಿನಲ್ಲಿ ಮತ್ತೆ SDPI, ನಿಷೇಧಿತ PFI ಮುಖಂಡರ ಮನೆಗಳ ಮೇಲೆ ದಾಳಿ: ಐವರು ವಶಕ್ಕೆ

ಆರೋಪಿಗಳ ಪೈಕಿ ಒಬ್ಬ ಐಟಿ ಇಂಜಿನಿಯರ್ ಆಗಿದ್ದು, ಆತ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದರೆ ಮತ್ತೊಬ್ಬ ಮೌಲಾನಾ ತೀರ್ಥಯಾತ್ರೆಗೆ ತೆರಳಿದ್ದ ಎಂದು ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಬಂಧಿತ ಆರೋಪಿಗಳನ್ನು ಮಾಲೆಗಾಂವ್‌ನ ಮೌಲಾನಾ ಸೈಫುರ್ರೆಹಮಾನ್ ಸಯೀದ್ ಅಹ್ಮದ್ ಅನ್ಸಾರಿ (26), ಅಬ್ದುಲ್ ಖಯೂಮ್ ಬದುಲ್ಲಾ ಶೇಖ್ (48) ಮತ್ತು ಪುಣೆಯ ರಾಜಿ ಅಹ್ಮದ್ ಖಾನ್ (31), ಬೀಡ್‌ನ ವಾಸಿಂ ಅಜೀಂ ಅಲಿಯಾಸ್ ಮುನ್ನಾ ಶೇಖ್ (29) ಮತ್ತು ಮೌಲಾ ನಸೀಸಾಬ್ ಎಂದು ಗುರುತಿಸಲಾಗಿದೆ.

Published On - 5:23 pm, Tue, 18 October 22