AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನಲ್ಲಿ ಮತ್ತೆ SDPI, ನಿಷೇಧಿತ PFI ಮುಖಂಡರ ಮನೆಗಳ ಮೇಲೆ ದಾಳಿ: ಐವರು ವಶಕ್ಕೆ

ಪೊಲೀಸ್ ಕಮಿಷನರ್ N.ಶಶಿಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಐವರು ಪಿಎಫ್​​ಐ ಮುಖಂಡರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಪಿಎಫ್​​ಐ ಮುಂಡರ ವಿರುದ್ಧ UAPA ಕಾಯ್ದೆ ಸೇರಿ ವಿವಿಧ ಸೆಕ್ಷನ್​​​ಗಳಡಿ ಕೇಸ್​ ದಾಖಲಿಸಲಾಗಿದೆ.

ಮಂಗಳೂರಿನಲ್ಲಿ ಮತ್ತೆ SDPI, ನಿಷೇಧಿತ PFI ಮುಖಂಡರ ಮನೆಗಳ ಮೇಲೆ ದಾಳಿ: ಐವರು ವಶಕ್ಕೆ
ಪಿಎಫ್​ಐ ನಿಷೇಧ
TV9 Web
| Edited By: ಆಯೇಷಾ ಬಾನು|

Updated on:Oct 13, 2022 | 7:55 AM

Share

ಮಂಗಳೂರು: ಬೆಳ್ಳಂಬೆಳಗ್ಗೆ ನಿಷೇಧಿತ ಪಿಎಫ್ಐಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಮಂಗಳೂರಿನಲ್ಲಿ SDPI, ನಿಷೇಧಿತ PFI ಮುಖಂಡರ ಮನೆಗಳ ಮೇಲೆ ಮತ್ತೆ ದಾಳಿ ನಡೆಸಲಾಗಿದೆ. ಪೊಲೀಸ್ ಕಮಿಷನರ್ N.ಶಶಿಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಐವರು ಪಿಎಫ್​​ಐ ಮುಖಂಡರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಣಂಬೂರು, ಸುರತ್ಕಲ್, ಮಂಗಳೂರು ಗ್ರಾಮಾಂತರ, ಉಳ್ಳಾಲ ಸೇರಿ ಏಳೆಂಟು ಕಡೆ ದಾಳಿ ಮಾಡಿರುವ ಪೊಲೀಸರು ಮನೆಗಳ ಸಂಪೂರ್ಣ ಪರಿಶೀಲನೆ ನಡೆಸುತ್ತಿದ್ದಾರೆ. ವಶಕ್ಕೆ ಪಡೆದ ಪಿಎಫ್​​ಐ ಮುಂಡರ ವಿರುದ್ಧ UAPA ಕಾಯ್ದೆ ಸೇರಿ ವಿವಿಧ ಸೆಕ್ಷನ್​​​ಗಳಡಿ ಕೇಸ್​ ದಾಖಲಿಸಲಾಗಿದೆ. ಇದನ್ನೂ ಓದಿ: ದೊಡ್ಡ ರಹಸ್ಯ ಬಯಲು ಮಾಡಲು ಹೋಗಿ ಗೊಂದಲಕ್ಕೆ ತುತ್ತಾದ ಝೇಂಡೆ; ತಿಳಿಯಿತು ಹಲವು ವಿಚಾರ

ಟರ್ಕಿ ದೇಶದ ಜೊತೆ ಸಂಪರ್ಕ ಹೊಂದಿದ್ದ ಪಿಎಫ್ಐಗೆ ಹರಿದುಬಂದ ಹಣದ ಹೊಳೆ

ಬೆಂಗಳೂರು: ನಿಷೇಧಿತ ಪಿಎಫ್​ಐ ಸಂಘಟನೆಯ ಮುಖಂಡರನ್ನು ಎನ್​ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಸಾಕಷ್ಟು ಮಾಹಿತಿಯನ್ನು ಹೊರಹಾಕಿದ್ದಾರೆ. ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಪಿಎಫ್​ಐಗೆ ಟರ್ಕಿ ದೇಶದ ಜತೆ ಸಂಪರ್ಕ ಹೊಂದಿದ್ದ ಬಗ್ಗೆ ತಿಳಿದುಬಂದಿದ್ದು, ಟರ್ಕಿ, ಕತಾರ್​ ದೇಶಗಳಿಂದ ಹಣದ ಹೊಳೆಯೇ ಹರಿದುಬಂದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಟರ್ಕಿ, ಕತಾರ್​ ದೇಶಗಳಿಂದ ಕೇರಳ ಮೂಲಕ ಪಿಎಫ್​ಐಗೆ ಹವಲಾ ಹಣ ಸಂದಾಯವಾಗುತ್ತಿತ್ತು. ನಂತರ ದೇಶದ ವಿವಿಧ ಕಡೆಗಳಲ್ಲಿರುವ ಪಿಎಫ್​ಐ ಖಾತೆಗಳಿಗೆ ವರ್ಗಾವಣೆಯಾಗುತ್ತಿತ್ತು ಎನ್ನಲಾಗುತ್ತಿದೆ. ಹೀಗೆ ಹರಿದುಬಂದ ಹಣವನ್ನು ದೇಶ ವಿರೋಧಿ ಕೃತ್ಯಕ್ಕೆ, ಸರ್ಕಾರದ ವಿರುದ್ಧದ ಪ್ರತಿಭಟನೆ, ಅಪರಾಧಿ ಕೃತ್ಯಗಳಲ್ಲಿ ಬಂಧಿತ PFI ಸದಸ್ಯರ ಕುಟುಂಬಗಳಿಗೆ ನೆರವು ಮತ್ತು ತರಬೇತಿ ಶಿಬಿರಗಳಿಗೆ ಬಳಕೆ ಮಾಡಲಾಗುತ್ತಿತ್ತು ಎಂಬೂದು ತನಿಖೆ ವೇಳೆ ತಿಳಿದುಬಂದಿದೆ.

ಕತಾರ್​ಗೆ ಭೇಟಿ ಕೊಟ್ಟ ಪಿಎಫ್​ಐ ತಂಡ

ಭಾರತದಿಂದ ಪಿಎಫ್ಐನ ಒಂದು ತಂಡ ಕತಾರ್​ನಲ್ಲಿನ ದೋಹ ಎಂಬ ಪ್ರದೇಶದಕ್ಕೆ ಬೇಟಿ ನೀಡಿದ್ದು, ಟರ್ಕಿಯಿಂದ ಸಹ ಒಂದು ತಂಡ ಕತಾರ್​​ನ ದೋಹಕ್ಕೆ ಬಂದಿದೆ. ಇಲ್ಲಿ ಎರಡು ದಿನಗಳ ಕಾಲ ಸಭೆ ನಡೆಸಲಾಗಿದೆ. ದೇಶದಲ್ಲಿ ನಡೆದ ಸಿಎಎ ಪ್ರತಿಭಟನೆ ಸೇರಿ ಬೇರೆ ಬೇರೆ ಹಂತದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಎಲ್ಲಾ ಈ ಟರ್ಕಿಯಿಂದ ಹಣ ರವಾನೆ ಅಗಿದೆ. ಈ ಹಣವು ಟರ್ಕಿ ಮೀಟಿಂಗ್ ಬಳಿಕ ವರ್ಗಾವಣೆಯಾಗಿದೆ. ಇದಾದ ಬಳಿಕ ಪಿಎಫ್​ಐನಿಂದ ತೀವ್ರ ಚಟುವಟಿಕೆಗಳು ಆರಂಭವಾದವು. ಸದ್ಯ ಟರ್ಕಿಗೆ ಹೋಗಿದ್ದು, ಅಲ್ಲಿಂದ ಭಾರತಕ್ಕೆ ಹಣ ಬಂದಿದ್ದು ಎಲ್ಲವನ್ನು ಟೈಮ್ ಮ್ಯಾಪಿಂಗ್ ಮಾಡಿರುವ ಎನ್ಐಎ ಟರ್ಕಿ ತೆರಳಿದ್ದ ಸಂಪೂರ್ಣ ಸಾಕ್ಷಿಗಳನ್ನು ಕಲೆಗಾಕಿಕೊಂಡಿದೆ. ಇದನ್ನು ಮುಂದಿಟ್ಟುಕೊಂಡು ಪಿಎಫ್​ಐ ಮುಖಂಡರನ್ನು ವಿಚಾರಣೆ ನಡೆಸಲಾಗುತ್ತಿದೆ.

Published On - 7:55 am, Thu, 13 October 22

Follow Us
Web contact
Web contact

TV9 Kannada

Read More
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್