ರೈಲ್ವೆ ನಿಲ್ದಾಣದಲ್ಲಿ ಜಾಹೀರಾತು ಪರದೆ ಮೇಲೆ ಅಶ್ಲೀಲ ಸಿನಿಮಾ ಪ್ರಸಾರ: ದಿಗ್ಭ್ರಮೆಗೊಂಡ ಪ್ರಯಾಣಿಕರು

|

Updated on: Mar 21, 2023 | 9:20 AM

ಬಿಹಾರದ ರೈಲ್ವೆ ನಿಲ್ದಾಣದಲ್ಲಿ ಜಾಹೀರಾತು ಪರದೆ ಮೇಲೆ 3 ನಿಮಿಷಗಳ ಕಾಲ ಅಶ್ಲೀಲ ಚಿತ್ರ ಪ್ರಸಾರವಾಗಿದ್ದು, ಜನರು ದಿಗ್ಭ್ರಮೆಗೊಂಡಿದ್ದರು. ಇದರಿಂದ ಗೊಂದಲಕ್ಕೊಳಗಾದ ಪ್ರಯಾಣಿಕರು ಸಮಯ ವ್ಯರ್ಥ ಮಾಡದೆ ಕೂಡಲೇ ಸರ್ಕಾರಿ ರೈಲ್ವೆ ಪೊಲೀಸ್ ಹಾಗೂ ರೈಲ್ವೆ ಭದ್ರತಾ ಪೊಲೀಸರಿಗೆ ದೂರು ನೀಡಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಜಾಹೀರಾತು ಪರದೆ ಮೇಲೆ ಅಶ್ಲೀಲ ಸಿನಿಮಾ ಪ್ರಸಾರ: ದಿಗ್ಭ್ರಮೆಗೊಂಡ ಪ್ರಯಾಣಿಕರು
ಪಾಟ್ನಾ ರೈಲು ನಿಲ್ದಾಣ
Follow us on

ಬಿಹಾರದ ರೈಲ್ವೆ ನಿಲ್ದಾಣದಲ್ಲಿ ಜಾಹೀರಾತು ಪರದೆ ಮೇಲೆ 3 ನಿಮಿಷಗಳ ಕಾಲ ಅಶ್ಲೀಲ ಚಿತ್ರ ಪ್ರಸಾರವಾಗಿದ್ದು, ಜನರು ದಿಗ್ಭ್ರಮೆಗೊಂಡಿದ್ದರು.
ಇದರಿಂದ ಗೊಂದಲಕ್ಕೊಳಗಾದ ಪ್ರಯಾಣಿಕರು ಸಮಯ ವ್ಯರ್ಥ ಮಾಡದೆ ಕೂಡಲೇ ಸರ್ಕಾರಿ ರೈಲ್ವೆ ಪೊಲೀಸ್ ಹಾಗೂ ರೈಲ್ವೆ ಭದ್ರತಾ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಈ ಕುರಿತು ಕ್ರಮ ಕೈಗೊಳ್ಳಲು ಸರ್ಕಾರಿ ರೈಲ್ವೆ ಪೊಲೀಸರು ವಿಳಂಬ ಮಾಡಿದ್ದರು, ಆಗ ಮಧ್ಯಪ್ರದೇಶಿಸಿದ ರೈಲ್ವೆ ಭದ್ರತಾ ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಜಾಹೀರಾತು ಪ್ರಸಾರ ಮಾಡುವ ಜವಾಬ್ದಾರಿ ಹೊತ್ತಿರುವ ದತ್ತಾ ಕಮ್ಯುನಿಕೇಷನ್​ ಅನ್ನು ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು.

ಭಾನುವಾರ ಬೆಳಗ್ಗೆ 9:30ರ ವೇಳೆಗೆ ನಿಲ್ದಾಣದಲ್ಲಿ ಸ್ಥಾಪಿಸಲಾಗಿದ್ದ ಟಿವಿ ಪರದೆ ಮೇಲೆ ಸುಮಾರು 3 ನಿಮಿಷಗಳ ಕಾಲ ಅಶ್ಲೀಲ ವೀಡಿಯೋ ಪ್ರದರ್ಶನವಾಗಿದೆ. ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರಿದ್ದು, ಈ ವೇಳೆ ಜನರು ಮುಜುಗರಕ್ಕೀಡಾಗಿದ್ದಾರೆ.
ಬಳಿಕ ರೈಲ್ವೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಜಾಹೀರಾತು ಪ್ರಸಾರ ಮಾಡಲು ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಗೊಳಿಸಿದ್ದಾರೆ ಮತ್ತು ದತ್ತಾ ಕಮ್ಯುನಿಕೇಷನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಮತ್ತಷ್ಟು ಓದಿ: Video Viral: ಬಿಎಂಟಿಸಿಯ ಎಲೆಕ್ಟ್ರಿಕ್​ ಬಸ್​​ನ ವಿಶೇಷ ಸೌಲಭ್ಯ ಕಂಡು ಕಂಡಕ್ಟರ್​ಗೆ ಕೈಮುಗಿದ ವಿದೇಶಿ ಪ್ರಜೆ

ಅಶ್ಲೀಲ ವೀಡಿಯೋ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 10 ರಲ್ಲಿ ಮಾತ್ರವೇ ಪ್ರಸಾರವಾಗಿತ್ತು. ನಿರ್ಧಿಷ್ಟ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೋ ಪ್ರಸಾರ ಮಾಡಿರುವುದನ್ನು ಗಮನಹರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ರೈಲ್ವೆ ಇಲಾಖೆಯೂ ಪ್ರತ್ಯೇಕ ವಿಚಾರಣೆ ನಡೆಸುತ್ತಿದೆ.

ರೈಲ್ವೆ ನಿಲ್ದಾಣದಲ್ಲಿ ಟಿವಿ ಪರದೆ ಮೇಲೆ ಜಾಹೀರಾತು ಪ್ರಸಾರ ಮಾಡಲು ದತ್ತಾ ಕಮ್ಯುನಿಕೇಷನ್ಸ್​ಗೆ ನೀಡಲಾಗಿತ್ತು, ಈಗ ಈ ಗುತ್ತಿಗೆಯನ್ನು ಹಿಂಪಡೆಯಲಾಗಿದೆ. ಘಟನೆಯ ಕುರಿತು ರೈಲ್ವೆ ಇಲಾಖೆ ಪ್ರತ್ಯೇಕ ತನಿಖೆ ನಡೆಸುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ