ಅಂಡಮಾನ್ ಬಳಿಕ ಇದೀಗ ಮಣಿಪುರದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ದಾಖಲಾಗಿದೆ. ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದೆ. ಭಾನುವಾರ ಮುಂಜಾನೆ ಅಂಡಮಾನ್ ಸಮುದ್ರದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಕ್ಟೋಬರ್ 8 ರಂದು ಬೆಳಗಿನ ಜಾವ 3.20ಕ್ಕೆ ಕಂಪನ ಸಂಭವಿಸಿದೆ. ಎನ್ಸಿಎಸ್ ಪ್ರಕಾರ, ಭೂಕಂಪವು 10 ಕಿ.ಮೀ ಆಳದಲ್ಲಿತ್ತು. 4.3 ತೀವ್ರತೆ ಭೂಕಂಪನ ಉಂಟಾಗಿದ್ದು, ಸ್ಥಳ: ಅಂಡಮಾನ್ ಸಮುದ್ರ, ಭಾರತ ಎಂದು ಎನ್ಸಿಎಸ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ.
ಅಫ್ಘಾನಿಸ್ತಾನದಲ್ಲಿ ಭೂಕಂಪ
ಅಫ್ಘಾನಿಸ್ತಾನದ ಪಶ್ಚಿಮ ಭಾಗದಲ್ಲಿ ಶನಿವಾರ ಸಂಭವಿಸಿದ 6.3 ತೀವ್ರತೆಯ ಪ್ರಬಲ ಭೂಕಂಪನದಿಂದ ಕನಿಷ್ಠ 120 ಮಂದಿ ಮೃತಪಟ್ಟಿದ್ದು, 1,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಭಾಗದ ಅತಿ ದೊಡ್ಡ ನಗರವಾದ ಹೆರಾತ್‌ನ ವಾಯವ್ಯ ಭಾಗದ 40 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.
ಮೊದಲು ರಿಕ್ಟರ್ ಮಾಪಕದಲ್ಲಿ ಇದು 6.3 ತೀವ್ರತೆ ದಾಖಲಾಗಿದೆ. ಇದರ ನಂತರವೂ 4.3 ಮತ್ತು 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ಗಾಯಗೊಂಡ 1 ಸಾವಿರಕ್ಕೂ ಅಧಿಕ ಜನರಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರೂ ಇದ್ದಾರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:49 am, Sun, 8 October 23