
ಹೈದರಾಬಾದ್, ಜನವರಿ 10: ಮನೆಯಲ್ಲಿ ದೀರ್ಘ ಸಮಯದಿಂದ ನಡೆಯುತ್ತಿದ್ದ ಕೌಟುಂಬಿಕ ಜಗಳಗಳಿಂದ ಬೇಸತ್ತ ಮಹಿಳೆಯೊಬ್ಬರು ತನ್ನ 11 ತಿಂಗಳ ಮಗನಿಗೆ ವಿಷ ನೀಡಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣದ (Telangana) ರಾಜಧಾನಿ ಹೈದರಾಬಾದ್‌ನಲ್ಲಿ ಈ ದುರಂತ ಘಟನೆ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದ ನಂತರ ಮಹಿಳೆಯೊಬ್ಬರು ತನ್ನ ಮಗನಿಗೆ ವಿಷಪ್ರಾಶನ ಮಾಡಿ ನಂತರ ತಾವೂ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಘಟನೆಯ ಬಗ್ಗೆ ಪೊಲೀಸರು ತನಿಖೆಯನ್ನೂ ಪ್ರಾರಂಭಿಸಿದ್ದಾರೆ. ಮೃತ ಮಹಿಳೆಯ ಕುಟುಂಬಸ್ಥರು ಕೊಲೆ ಆರೋಪವನ್ನು ಹೊರಿಸಿದ್ದರೆ, ಆಕೆಯ ಪತಿ ಈ ಆರೋಪಗಳನ್ನು ತೀವ್ರವಾಗಿ ನಿರಾಕರಿಸಿದ್ದಾರೆ. ಹೈದರಾಬಾದ್‌ನ ಮೀರಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಹಸ್ತಿನಾಪುರಂ ಪ್ರದೇಶದಲ್ಲಿ ಯಶವಂತ್ ರೆಡ್ಡಿ ಅವರ ಪತ್ನಿ ಸುಷ್ಮಿತಾ (27) ತಮ್ಮ 11 ತಿಂಗಳ ಮಗ ನಂದನಿಗೆ ವಿಷ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಅಮ್ಮನ ಎದೆಹಾಲು ಕುಡಿಯುವಾಗ ಮಗು ಸಾವು!
ಸುಷ್ಮಿತಾ 2 ವರ್ಷದ ಹಿಂದೆ ಯಶವಂತ್ ಅವರನ್ನು ವಿವಾಹವಾಗಿದ್ದರು. ಅಂದಿನಿಂದ, ಯಶವಂತ್ ನಮ್ಮ ಮಗಳೊಂದಿಗೆ ಮಾತನಾಡಲು ನಮಗೆ ಅವಕಾಶ ನೀಡಲಿಲ್ಲ. ಅವರು ನಮ್ಮಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದರು. ನಾವು ನಮ್ಮ ಮಗಳೊಂದಿಗೆ ಫೋನ್‌ನಲ್ಲಿ ಮಾತನಾಡಲು ಸಹ ಸಾಧ್ಯವಾಗಲಿಲ್ಲ. ಅವರು ನಿರಂತರವಾಗಿ ಸುಷ್ಮಿತಾಗೆ ಬೈಯುತ್ತಿದ್ದರು. ಅವರ ನಡುವೆ ಕೌಟುಂಬಿಕ ಕಲಹವಿತ್ತು. ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾವು ನಂಬುವುದಿಲ್ಲ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಮರೆಮಾಡಲಾಗಿದೆ. ನಮ್ಮ ಅಳಿಯನೇ ಈ ಕೊಲೆ ಮಾಡಿರಬಹುದು ಎಂಬ ಅನುಮಾನವಿದೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ಪೊಲೀಸರು ಕೂಡ ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Viral News: ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಮಗುವಿನ ಗುಪ್ತಾಂಗವನ್ನೇ ಸುಟ್ಟ ತಾಯಿ!
ಮಗಳು ಮತ್ತು ಮೊಮ್ಮಗು ಸತ್ತಿರುವುದನ್ನು ನೋಡಿದ ಮೃತ ಮಹಿಳೆಯ ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರ ಪ್ರಕಾರ, ಸುಷ್ಮಿತಾ ಬೆಡ್ ರೂಂನಲ್ಲಿ ಮಗುವಿನ ಜೊತೆ ತಾವೂ ಮೃತಪಟ್ಟಿದ್ದಾರೆ. ರಾತ್ರಿ ಆಕೆಯ ಗಂಡ ಯಶವಂತ್ ರೆಡ್ಡಿ ಕೆಲಸದಿಂದ ಮನೆಗೆ ಮರಳಿದಾಗ ಬೆಡ್ ರೂಂ ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ಬಾಗಿಲು ಒಡೆದು ನೋಡಿದಾಗ ಪತ್ನಿ ಮತ್ತು ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಏನೂ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ