AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್‌ಡೌನ್‌ 4.O ಅಂತ್ಯಕ್ಕೆ ಇನ್ನು 5 ದಿನ ಬಾಕಿ! ಪ್ರಧಾನಿ ಮುಂದಿನ ಪ್ಲ್ಯಾನ್ ಏನು?

ದೆಹಲಿ: ದೇಶದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್ ಅಂತ್ಯಕ್ಕೆ ಇನ್ನೇನು 5 ದಿನಗಳು ಮಾತ್ರವೇ ಬಾಕಿ ಉಳಿದಿದೆ. ಆದ್ರೆ ಮತ್ತೆ ಲಾಕ್‌ಡೌನ್ ಮಾಡ್ತಾರಾ. ಇಲ್ವಾ ಅನ್ನೋ ಪ್ರಶ್ನೆ ಮೂಡಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರದ ಮುಂದಿನ ಲಾಕ್‌ಡೌನ್ ಸೂತ್ರವೇನು? ಪ್ರಧಾನಿ ಮೋದಿ ಏನ್‌ ಯೋಜನೆ ಮಾಡ್ತಿದ್ದಾರೆ. ಲಾಕ್‌ಡೌನ್ ಇರುತ್ತಾ.. ಇರಲ್ವಾ ಅನ್ನೋ ಪ್ರಶ್ನೆ ಮೂಡಿದೆ. 5ನೇ ಹಂತದ ಲಾಕ್‌ಡೌನ್‌ ಇರುತ್ತಾ.. ಇರಲ್ವಾ? ಕೊರೊನಾ.. ಸದ್ಯ ಭಾರತವನ್ನ ಅಣು ಅಣುವೂ ಕೊಲ್ಲುತ್ತಿದೆ. ಕೊರೊನಾ ಕಂಟ್ರೋಲ್‌ಗೆ ಅಂತ ಬಳಸಿದ ಲಾಕ್‌ಡೌನ್‌ ಅಸ್ತ್ರ ವರ್ಕೌಟ್‌ […]

ಲಾಕ್‌ಡೌನ್‌ 4.O ಅಂತ್ಯಕ್ಕೆ ಇನ್ನು 5 ದಿನ ಬಾಕಿ! ಪ್ರಧಾನಿ ಮುಂದಿನ ಪ್ಲ್ಯಾನ್ ಏನು?
Follow us
ಆಯೇಷಾ ಬಾನು
|

Updated on:May 27, 2020 | 2:03 PM

ದೆಹಲಿ: ದೇಶದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್ ಅಂತ್ಯಕ್ಕೆ ಇನ್ನೇನು 5 ದಿನಗಳು ಮಾತ್ರವೇ ಬಾಕಿ ಉಳಿದಿದೆ. ಆದ್ರೆ ಮತ್ತೆ ಲಾಕ್‌ಡೌನ್ ಮಾಡ್ತಾರಾ. ಇಲ್ವಾ ಅನ್ನೋ ಪ್ರಶ್ನೆ ಮೂಡಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರದ ಮುಂದಿನ ಲಾಕ್‌ಡೌನ್ ಸೂತ್ರವೇನು? ಪ್ರಧಾನಿ ಮೋದಿ ಏನ್‌ ಯೋಜನೆ ಮಾಡ್ತಿದ್ದಾರೆ. ಲಾಕ್‌ಡೌನ್ ಇರುತ್ತಾ.. ಇರಲ್ವಾ ಅನ್ನೋ ಪ್ರಶ್ನೆ ಮೂಡಿದೆ.

5ನೇ ಹಂತದ ಲಾಕ್‌ಡೌನ್‌ ಇರುತ್ತಾ.. ಇರಲ್ವಾ? ಕೊರೊನಾ.. ಸದ್ಯ ಭಾರತವನ್ನ ಅಣು ಅಣುವೂ ಕೊಲ್ಲುತ್ತಿದೆ. ಕೊರೊನಾ ಕಂಟ್ರೋಲ್‌ಗೆ ಅಂತ ಬಳಸಿದ ಲಾಕ್‌ಡೌನ್‌ ಅಸ್ತ್ರ ವರ್ಕೌಟ್‌ ಆದಂತೆ ಕಾಣ್ತಿಲ್ಲ. 4 ಹಂತದಲ್ಲಿ ಲಾಕ್‌ಡೌನ್ ಮಾಡಿದ್ರೂ ಸೋಂಕಿನ ಪ್ರಮಾಣ ಮಾತ್ರ ದಿನದಿಂದ ಏರಿಕೆ ಆಗುತ್ತಲೇ ಇದೆ. ಒಂದೂವರೆ ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ ಮುನ್ನುಗ್ಗುತ್ತಿದೆ. ಸದ್ಯ ನಾಲ್ಕನೇ ಲಾಕ್‌ಡೌನ್‌ ಅಂತ್ಯದ ಹೊಸ್ತಿಲಲ್ಲಿರುವ ಭಾರತದಲ್ಲಿ ಮುಂದೇನು ಅನ್ನೋ ಚರ್ಚೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೀತಿದೆ.

ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದ ದೇಶದ ಆರ್ಥಿಕತೆ ಚೇತರಿಕೆಗೆ ಭಾಗಶಃ ಲಾಕ್‌ಡೌನ್‌ 4.Oನಲ್ಲಿ ವಿನಾಯಿತಿ ಘೋಷಣೆ ಮಾಡಿದ ಬಳಿಕ ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಮತ್ತಷ್ಟು ಏರಿಕೆಯಾಗ್ತಿದೆ.

ಪ್ರಧಾನಿ ಮೋದಿಗೆ ಕೈಸೇರಿದ ಲಾಕ್‌ಡೌನ್ ರಿಪೋರ್ಟ್! ಸೋಂಕು ಏರಿಕೆಯಾಗುತ್ತಿದ್ದಂತೆ ಸರ್ಕಾರ 4ನೇ ಹಂತದ ಲಾಕ್‌ಡೌನ್‌ ಬಳಿಕ ಮುಂದೇನು ಮಾಡ್ಬೇಕು ಅನ್ನೋ ಗೊಂದಲದಲ್ಲಿದ್ದು, ಇದಕ್ಕಾಗಿ ತಯಾರಿ ಆರಂಭಿಸಿಕೊಳ್ತಿದೆ. ಪ್ರಧಾನಿ ಕಾರ್ಯಾಲಯ ಮೋದಿ ನಿರ್ದೇಶನದ ಮೇರೆಗೆ ಎಲ್ಲಾ ರಾಜ್ಯಗಳ ವರದಿಗಳನ್ನ ಸಂಗ್ರಹಿಸಲು ಮುಂದಾಗಿದೆ. ಎಲ್ಲಾ ರಾಜ್ಯಗಳಿಗೆ ಕೇಂದ್ರ ಮಂತ್ರಿಗಳನ್ನ ಉಸ್ತುವಾಗಿಲನ್ನಾಗಿ ಮಾಡಿದ್ದು, ಎಲ್ಲಾ ಸಚಿವ ಬಳಿ ವರದಿ ಪಡೆಯಲಿದ್ದಾರೆ. ಅದರ ಆಧಾರದ ಮೇಲೆ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ ಅಭಿಪ್ರಾಯ ಸಂಗ್ರಹಿಸೋ ಸಾಧ್ಯತೆಯಿದೆ. ಹೀಗಾಗಿ ಶೀಘ್ರದಲ್ಲೇ ಸಭೆಯ ದಿನಾಂಕವನ್ನ ನಿಗದಿ ಮಾಡೋ ಸಾಧ್ಯತೆಯಿದೆ.

ಧಾರ್ಮಿಕ ಕ್ಷೇತ್ರಗಳಿಗೆ ಸಿಗಲಿದೆಯಾ ವಿನಾಯಿತಿ? ಕೇಂದ್ರ ಸರ್ಕಾರ ರಚನೆ ಮಾಡಿರೋ ಟಾಸ್ಕ್‌ಪೋರ್ಸ್‌ಗಳ ವರದಿ ಪಡೆದುಕೊಂಡು ಲಾಕ್‌ಡೌನ್ ಅಂತ್ಯದ ಬಳಿಕ ಮತ್ತೇನ್ ಮಾಡ್ಬೇಕು ಅನ್ನೋ ನಿರ್ಧಾರ ಮಾಡಲಿದೆ. ಸದ್ಯ ರೈಲು, ದೇಶೀಯ ವಿಮಾನ ಸಂಚಾರ ಆರಂಭಿಸಿರೋ ಕೇಂದ್ರ ಅಂತಾರಾಷ್ಟ್ರೀಯ ವಿಮಾನಗಳ ಹಾರಟದ ಸಿದ್ಧತೆಯಲ್ಲಿದೆ. ಜತೆಗೆ ಧಾರ್ಮಿಕ ಕ್ಷೇತ್ರಗಳಿಗೂ ವಿನಾಯಿತಿ ಕೊಡ್ಬೇಕು ಅಂತ ಮನವಿ ಇದೆ. ಆದ್ರೆ ಈಗಾಗಲೇ 4ನೇ ಹಂತದಲ್ಲಿ ವಿನಾಯಿತಿ ಕೊಟ್ಟಿರೋ ಕೇಂದ್ರ, 5ನೇ ಹಂತ ಮುಂದುವರಿಸಿದ್ರೂ ವಿನಾಯಿತಿ ಲಾಕ್‌ಡೌನ್ ಮುಂದುವರಿಸಬಹುದು. ಆದ್ರೆ ಕಂಟೇನ್ಮೆಂಟ್‌ ಜೋನ್‌ಗಳಲ್ಲಿ ಮಾತ್ರ ಕಠಿಣ ನಿಯಮ ಜಾರಿಯಲ್ಲಿರುತ್ತೆ.

Published On - 7:57 am, Wed, 27 May 20