
ನೊಯ್ಡಾ, ಆಗಸ್ಟ್ 27: ಉತ್ತರ ಪ್ರದೇಶದ ನೊಯ್ಡಾದಲ್ಲಿ (Noida) ನಿಕ್ಕಿ ಎಂಬ ಮಹಿಳೆಯನ್ನು ಆಕೆಯ ಗಂಡ ಹಾಗೂ ಅತ್ತೆ ಸೇರಿ ಬೆಂಕಿ ಹಚ್ಚಿ ಕೊಂದಿದ್ದರು. ವರದಕ್ಷಿಣೆಗಾಗಿ (Dowry) ನಡೆದಿದ್ದ ಈ ಕೊಲೆಯ ಬೆನ್ನಲ್ಲೇ ಅದೇ ರೀತಿಯ ಇನ್ನೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ 20 ವರ್ಷದ ಮಹಿಳೆಯಾದ ಡಿ.ಸಿ ಕುಮಾರಿಯನ್ನು ಅವರ ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಕೊಂದಿದ್ದಾರೆ. ಕುಮಾರಿಯನ್ನು ಮದುವೆ ಮಾಡಿಕೊಡುವಾಗ ಆಕೆಯ ತವರುಮನೆಯವರು ಭರವಸೆ ನೀಡಿದ್ದ ಚಿನ್ನದ ಸರವನ್ನು ಆಕೆಯ ಕುಟುಂಬದವರು ನೀಡಿಲ್ಲ ಎಂಬ ಕಾರಣಕ್ಕೆ ಆಕೆಯ ಕತ್ತು ಹಿಸುಕಿ ನಂತರ ನೇಣು ಹಾಕಲಾಗಿದೆ.
ಆ ಮಹಿಳೆ ಸುಮಾರು 1 ವರ್ಷದ ಹಿಂದೆ ವಿಭೀಷಣ್ ಯಾದವ್ ಅವರನ್ನು ವಿವಾಹವಾಗಿದ್ದರು. ಮುಂಗೇರ್ ನಿವಾಸಿಯಾಗಿರುವ ಆಕೆಯ ತಂದೆ ಜಾಗೋ ಯಾದವ್ ತಮ್ಮ ಮಗಳ ಪತಿ ಮತ್ತು ಆಕೆಯ ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಆಕೆಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಸ್ವಲ್ಪ ಸಮಯದ ನಂತರ ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ನಾನು ಆಕೆಯ ಅತ್ತೆ-ಮಾವಂದಿರಿಗೆ ಭರವಸೆ ನೀಡಿದ್ದೆ. ಆದರೆ ಅವರು ಒಪ್ಪಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನೊಯ್ಡಾ ವರದಕ್ಷಿಣೆ ಕಿರುಕುಳ ಪ್ರಕರಣ; ನಿಕ್ಕಿಯನ್ನು ಸುಟ್ಟು ಕೊಲ್ಲಲು 1 ತಿಂಗಳಿಂದ ರೆಡಿಯಾಗಿತ್ತು ಪ್ಲಾನ್!
ಮೃತ ಮಹಿಳೆಯ ಪತಿ ಕೃಷಿ ಮಾಡುತ್ತಿದ್ದರು. ಆದರೆ, ನಂತರ ಗಾಂಜಾ ಮತ್ತು ಮದ್ಯ ಮಾರಾಟ ಮಾಡಲು ಪ್ರಾರಂಭಿಸಿದ್ದ ಎಂದು ಆರೋಪಿಸಲಾಗಿದೆ. ಆಕೆಯ ಸಹೋದರ ಸಂದೀಪ್ ಕುಮಾರ್, ತನ್ನ ಸಹೋದರಿಯನ್ನು ಆಕೆಯ ಅತ್ತೆ-ಮಾವಂದಿರು ಆಕೆಯ ದೇಹವನ್ನು ನೇಣು ಹಾಕುವ ಮೊದಲು ಕ್ರೂರವಾಗಿ ಥಳಿಸಿ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆಯ ದೇಹದಾದ್ಯಂತ ಗಾಯದ ಗುರುತುಗಳಿತ್ತು ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Wed, 27 August 25