ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದಾಕ್ಷಣ ವರಸೆ ಬದಲಿಸಿದ ಚೀನಾ!

Updated on: May 13, 2025 | 11:39 AM

ನಿನ್ನೆ ಸಾಯಂಕಾಲ ಭಾರತ ಮತ್ತು ಪಾಕಿಸ್ತಾನ ಡಿಜಿಎಂಒಗಳ ನಡುವೆ ಸಭೆ ಕೂಡ ನಡೆದಿದೆ. ಈ ಸಭೆಯಲ್ಲ್ಲೂ ಭಾರತದ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಪಾಕಿಸ್ತಾನದ ಡಿಜಿಎಂಒ ಕಾಶಿಫ್ ಅಬ್ದುಲ್ಲಾಗೆ ತೀಕ್ಷ್ಣವಾದ ಎಚ್ಚರಿಕೆಗಳನ್ನು ನೀಡಿದ್ದಾರೆ. ಭಾರತದ ಉಸಾಬರಿಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ, ಗಡಿರೇಖೆ ಬಳಿ ಪಾಕ್ ಬೆಂಬಲಿತ ಉಗ್ರರಾಗಲೀ, ಅದರ ಸೇನೆಯಾಗಲೀ ಬಾಲ ಬಿಚ್ಚಿದರೆ ಸಹಿಸಲ್ಲ ಎಂದು ಜನರಲ್ ಘಾಯ್ ಎಚ್ಚರಿಸಿದ್ದಾರೆ.

ಬೆಂಗಳೂರು, ಮೇ 13: ಭಾರತ ಮತ್ತು ಪಾಕಿಸ್ತಾನದ ನಡೆಯುತ್ತಿದ್ದ ಯುದ್ಧವನ್ನು ಯಾಕೆ ನಿಲ್ಲಿಸಲಾಯಿತು ಮತ್ತು ಕದನ ವಿರಾಮ ಯಾಕೆ ಏರ್ಪಟ್ಟಿತು ಅನ್ನೋದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರಕ್ಕೆ ನೀಡಿದ ಸಂಬೋಧನೆಯಲ್ಲಿ ವಿವರಿಸಿದರು. ಮೂರೇ ದಿನಗಳಲ್ಲಿ ಸೋತು ಸುಣ್ಣವಾಗಿದ್ದ ಪಾಕಿಸ್ತಾನದ ಡಿಜಿಎಂಒ (DGMO of Pakistan) ಮತ್ತು ಇತರ ಸೇನಾಧಿಕಾರಿಗಳು ದಾಳಿ ನಿಲ್ಲಿಸಿ, ನಮ್ಮ ವಾಯುನೆಲೆಗಳು ಮಣ್ಣುಗೂಡುತ್ತಿವೆ, ನಮಗೆ ಯುದ್ಧ ಬೇಡ ಅಂತ ಅಂಗಲಾಚಿದ ಕಾರಣ ಕದನ ವಿರಾಮದ ಬಗ್ಗೆ ಯೋಚಿಸಲಾಯಿತು ಎಂದು ಮೋದಿ ಹೇಳಿದರು. ಪ್ರಧಾನಿಯವರ ಎಚ್ಚರಿಕೆ ಮತ್ತು ಖಡಕ್ ಮಾತುಗಳಿಂದ ಬೆಚ್ಚಿದ ಚೀನಾ, ನಾವು ಪಾಕಿಸ್ತಾನಕ್ಕೆ ಸಹಾಯ ಮಾಡಲಿಲ್ಲ, ಕ್ಷಿಪಣಿ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಒದಗಿಸಲಿಲ್ಲ ಎಂದು ಹೇಳುತ್ತಿದೆ. ಚೀನಾದ ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿದ್ದನ್ನು ಚೀನಾ ಸಹ ನೋಡಿದೆ. ಈಗ ಯು-ಟರ್ನ್!

ಇದನ್ನೂ ಓದಿ:  ಆಪರೇಷನ್ ಸಿಂದೂರ್​ ಯಶಸ್ವಿ: ಭಾರತೀಯ 3 ಸೇನೆ, ತಂತ್ರಜ್ಞರು, ಅಧಿಕಾರಿಗಳಿಗೆ ಮೋದಿ ಸೆಲ್ಯೂಟ್

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ