ನಾನು ಯಾವುದೇ ಅಸಂಸದೀಯ ಪದ ಬಳಸಿಲ್ಲ, ಆದರೂ ಭಾಷಣದ ಕೆಲವು ಭಾಗಗಳನ್ನು ಸಂಸತ್ ದಾಖಲೆಯಿಂದ ತೆಗೆದುಹಾಕಿದ್ದು ಯಾಕೆ?: ಖರ್ಗೆ

|

Updated on: Feb 09, 2023 | 1:02 PM

Mallikarjun Kharge ನಾನು ನನ್ನ ಭಾಷಣದಲ್ಲಿ ಅಸಂಸದೀಯ ಪದ ಬಳಸಿಲ್ಲ ಅಥವಾ ಯಾರ ವಿರುದ್ಧವೂ ಆಪಾದನೆ ಮಾಡಿಲ್ಲ.ಆದರೆ ಕೆಲವು ಪದಗಳು ಆಚೀಚೆ ಆಗಿವೆ. ನಿಮಗೇನಾದರೂ ಸಂದೇಹವಿದ್ದರೆ ನೀವು ಅದನ್ನು ಬೇರೆ ರೀತಿಯಲ್ಲಿ ಕೇಳಬಹುದಾಗಿತ್ತು. ಆದರೆ ನೀವು ನನ್ನ ಮಾತುಗಳನ್ನು ಆರು ಕಡೆ ಅಳಿಸಿಹಾಕಿದ್ದೀರಿ ಎಂದ ಖರ್ಗೆ

ನಾನು ಯಾವುದೇ ಅಸಂಸದೀಯ ಪದ ಬಳಸಿಲ್ಲ, ಆದರೂ ಭಾಷಣದ ಕೆಲವು ಭಾಗಗಳನ್ನು ಸಂಸತ್ ದಾಖಲೆಯಿಂದ ತೆಗೆದುಹಾಕಿದ್ದು ಯಾಕೆ?: ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Follow us on

ದೆಹಲಿ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸಂಸತ್​​ನಲ್ಲಿ ಮಾಡಿದ ಭಾಷಣದ ಕೆಲವು ಭಾಗಗಳನ್ನು ಸಂಸತ್ ದಾಖಲೆಯಿಂದ ತೆಗೆದುಹಾಕಿದ ಬಳಿಕ ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ (Mallikarjun Kharge) ಭಾಷಣದ ಭಾಗಗಳನ್ನು ಅಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಬಗ್ಗೆ ಖರ್ಗೆ ಹೇಳಿರುವ ಕೆಲವು ಮಾತುಳನ್ನು ದಾಖಲೆಯಿಂದ ಅಳಿಸಲಾಗಿದೆ. ನಾನು ನನ್ನ ಭಾಷಣದಲ್ಲಿ ಅಸಂಸದೀಯ ಪದ ಬಳಸಿಲ್ಲ ಅಥವಾ ಯಾರ ವಿರುದ್ಧವೂ ಆಪಾದನೆ ಮಾಡಿಲ್ಲ.ಆದರೆ ಕೆಲವು ಪದಗಳು ಆಚೀಚೆ ಆಗಿವೆ. ನಿಮಗೇನಾದರೂ ಸಂದೇಹವಿದ್ದರೆ ನೀವು ಅದನ್ನು ಬೇರೆ ರೀತಿಯಲ್ಲಿ ಕೇಳಬಹುದಾಗಿತ್ತು. ಆದರೆ ನೀವು ನನ್ನ ಮಾತುಗಳನ್ನು ಆರು ಕಡೆ ಅಳಿಸಿಹಾಕಿದ್ದೀರಿ ಎಂದು ರಾಜ್ಯಸಭಾ ಸಭಾಪತಿ, ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಅವರಲ್ಲಿ ಖರ್ಗೆ ಹೇಳಿದ್ದಾರೆ.

ರಾಹುಲ್ ಗಾಂಧಿಯ ಮಾತುಗಳನ್ನು ಅಳಿಸಲಾಗಿದೆ. ಅಂದರೆ ಆ ಮಾತುಗಳನ್ನು ಯಾವುದೇ ಮಾಧ್ಯಮದಲ್ಲಿ ಮತ್ತೊಮ್ಮೆ ಬಳಸಬಾರದು. ಈ ವಿಷಯ ವಿವಾದಕ್ಕೀಡಾಗಿದ್ದು,ಸರ್ಕಾರ ನಮ್ಮ ಮಾತಿಗೆ ಕತ್ತರಿ ಹಾಕುತ್ತಿದೆ ಎಂದು ವಿಪಕ್ಷ ಆರೋಪಿಸಿದೆ.

“ನನ್ನ ಪದಗಳನ್ನು ಏಕೆ ತೆಗೆದುಹಾಕಲಾಗಿದೆ ಎಂದು ಬುಧವಾರ ಸಂಸತ್ತಿಗೆ ತೆರಳುತ್ತಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಕೇಳಿದ್ದಾರೆ. ದಿನದ ಹಿಂದೆ ತಾವು ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಧಾನಿ ವಿಫಲರಾಗಿದ್ದಾರೆ. ಬಿಲಿಯನೇರ್ ಗೌತಮ್ ಅದಾನಿ ಅವರೊಂದಿಗಿನ ಸಂಬಂಧದ ಬಗ್ಗೆ ನಾನು ಅವರಿಗೆ ಸರಳವಾದ ಪ್ರಶ್ನೆಗಳನ್ನು ಕೇಳಿದ್ದು ಅವಪು ಉತ್ತರಿಸಲಿಲ್ಲ. ಇದು ಸತ್ಯವನ್ನು ಬಹಿರಂಗಪಡಿಸುತ್ತದೆ. ಅವರು ಸ್ನೇಹಿತರಲ್ಲದಿದ್ದರೆ, ಅವರು ವಿಚಾರಣೆಗೆ ಒಪ್ಪುತ್ತಿದ್ದರು. ರಕ್ಷಣಾ ವಲಯದಲ್ಲಿನ ಶೆಲ್ ಕಂಪನಿಗಳ ಆರೋಪಗಳ ಬಗ್ಗೆ ಏನನ್ನೂ ಹೇಳಲಿಲ್ಲ ಎಂದಿದ್ದಾರೆ ರಾಹುಲ್.

ಇದನ್ನೂ ಓದಿ: Himachal Pradesh: ಅದಾನಿಗೆ ಮತ್ತೆ ಶಾಕ್; ಕಂಪನಿ ಕಚೇರಿಗಳ ಮೇಲೆ ಅಬಕಾರಿ, ತೆರಿಗೆ ಇಲಾಖೆ ದಾಳಿ

ಅದಾನಿಯವರ ಪೋರ್ಟ್ಸ್-ಟು-ಎನರ್ಜಿ ಸಮೂಹದ ವಿರುದ್ಧದ ವಂಚನೆ ಆರೋಪಗಳ ಮೇಲೆ ಕಾಂಗ್ರೆಸ್, ಇತರ ವಿರೋಧ ಪಕ್ಷಗಳೊಂದಿಗೆ ಪಿಎಂ ಮೋದಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ. ಸಮೂಹವು, ರಾಜ್ಯ-ಚಾಲಿತ ಸಂಸ್ಥೆಗಳಿಂದ ಗಮನಾರ್ಹ ಹೂಡಿಕೆಯೊಂದಿಗೆ, ಸ್ಟಾಕ್ ರೂಟ್ನಲ್ಲಿ ಅರ್ಧದಷ್ಟು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ.

ಅದಾನಿ ಗ್ರೂಪ್ ಹಿಂಡೆನ್‌ಬರ್ಗ್ ವರದಿಯನ್ನು “ಆಯ್ದ ತಪ್ಪು ಮಾಹಿತಿಯ ದುರುದ್ದೇಶಪೂರಿತ ಸಂಯೋಜನೆ ಮತ್ತು ಭಾರತದ ಅತ್ಯುನ್ನತ ನ್ಯಾಯಾಲಯಗಳಿಂದ ಪರೀಕ್ಷಿಸಲ್ಪಟ್ಟ ಮತ್ತು ತಿರಸ್ಕರಿಸಲ್ಪಟ್ಟ ಹಳೆಯ, ಆಧಾರರಹಿತ ಮತ್ತು ಅಪಖ್ಯಾತಿಗೊಳಗಾದ ಆರೋಪಗಳು” ಎಂದು ಕರೆದಿದೆ.ಒಂದು ದಿನದ ಹಿಂದೆ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಗಾಂಧಿ ಮತ್ತು ಇತರರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ ಎಂದು ಪ್ರತಿಪಕ್ಷಗಳು ಹೇಳಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:59 pm, Thu, 9 February 23