Turkey Updates: ಟರ್ಕಿಯಲ್ಲಿ ನಾಪತ್ತೆಯಾಗಿದ್ದು ಕನ್ನಡಿಗನಲ್ಲ, ಉತ್ತರಾಖಂಡ್ ನಿವಾಸಿ: ಮಾಹಿತಿ

Bengaluru Based Company's Engineer Missing: ಟರ್ಕಿಯಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯನ್ನು ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಆಕ್ಸಿ ಪ್ಲ್ಯಾಂಟ್ ಇಂಡಿಯಾ ಎಂಬ ಬೆಂಗಳೂರು ಮೂಲದ ಕಂಪನಿಯಲ್ಲಿ ಟೆಕ್ಕಿಯಾಗಿರುವ ವಿಜಯ್ ಕುಮಾರ್ ಉತ್ತರಾಖಂಡ್ ರಾಜ್ಯದವರೆನ್ನಲಾಗಿದೆ.

Turkey Updates: ಟರ್ಕಿಯಲ್ಲಿ ನಾಪತ್ತೆಯಾಗಿದ್ದು ಕನ್ನಡಿಗನಲ್ಲ, ಉತ್ತರಾಖಂಡ್ ನಿವಾಸಿ: ಮಾಹಿತಿ
ಟರ್ಕಿ ಭೂಕಂಪದ ದೃಶ್ಯ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 09, 2023 | 12:39 PM

ಬೆಂಗಳೂರು: ಟರ್ಕಿಯಲ್ಲಿ (Turkey Earthquake) ಬೆಂಗಳೂರು ಮೂಲದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಆಗಿತ್ತು. ಆದರೆ, ನಾಪತ್ತೆಯಾದ ವ್ಯಕ್ತಿ ಕರ್ನಾಟಕದವರಲ್ಲ, ಉತ್ತರಾಖಂಡ್ ರಾಜ್ಯದವರು ಎನ್ನಲಾಗಿದೆ. ಉತ್ತರಾಖಡ್​ನ ಡೆಹ್ರಾಡೂನ್​ನ ಬಲವಾಲದ ನಿವಾಸಿ 35 ವರ್ಷದ ವಿಜಯ್ ಕುಮಾರ್ ನಾಪತ್ತೆಯಾಗಿರುವ ವ್ಯಕ್ತಿ. ಇವರು ಬೆಂಗಳೂರು ಮೂಲದ ಆಕ್ಸಿ ಪ್ಲ್ಯಾಂಟ್ ಇಂಡಿಯಾ ಎಂಬ ಕಂಪನಿಯ ಉದ್ಯೋಗಿ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯ ವಿಪತ್ತು ನಿರ್ಹಣಾ ಇಲಾಖೆ ಟಿವಿ9ಗೆ ನೀಡಿರುವ ಮಾಹಿತಿ ಪ್ರಕಾರ, ಆಕ್ಸಿ ಪ್ಲ್ಯಾಂಟ್ ಇಂಡಿಯಾದಲ್ಲಿ ಪ್ಲ್ಯಾಂಟ್ ಎಂಜಿನಿಯರ್ ಆಗಿರುವ ವಿಜಯ್ ಕುಮಾರ್ ಅವರು ಕೆಲಸದ ನಿಮಿತ್ತ ಕಳೆದ ವಾರ ಟರ್ಕಿಗೆ ತೆರಳಿದ್ದರು. ಟರ್ಕಿಯ ಕುಲ್ಕು ಗಾಜ್ ಎಂಬ ಪ್ರಮುಖ ಕೈಗಾರಿಕಾ ಅನಿಲ ಪೂರೈಕೆ ಕಂಪನಿಗೆ ಆಕ್ಸಿ ಪ್ಲ್ಯಾಂಟ್ ಸಂಸ್ಥೆ ಅಸಿಟಿಲೀನ್ ಗ್ಯಾಸ್ ಘಟಕವನ್ನು ನಿರ್ಮಿಸುತ್ತಿದೆ. ಈ ಯೋಜನೆ ಸಂಬಂಧ ಪ್ಲ್ಯಾಂಟ್ ಎಂಜಿನಿಯರ್ ಆಗಿ ವಿಜಯ್ ಕುಮಾರ್ ಟರ್ಕಿಗೆ ಹೋಗಿದ್ದು ತಿಳಿದುಬಂದಿದೆ.

ಇದನ್ನೂ ಓದಿ: Turkey Earthquake; ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ನೋಡಲ್ ಅಧಿಕಾರಿ ನೇಮಕ, ಹೆಲ್ಪ್​ಲೈನ್ ವ್ಯವಸ್ಥೆ

ಟರ್ಕಿಯಲ್ಲಿ ಸುಮಾರು 3 ಸಾವಿರ ಭಾರತೀಯ ನಾಗರಿಕರಿದ್ದಾರೆ. ಇಸ್ತಾಂಬುಲ್ ಮತ್ತು ಅಂಕಾರ ನಗರಗಳಲ್ಲಿ ಹೆಚ್ಚು ಮಂದಿ ಇದ್ದಾರೆ. ಕನ್ನಡಿಗರೂ ನೂರಾರು ಮಂದಿ ಇದ್ದಾರೆ. ಸದ್ಯ ಬೆಂಗಳೂರು ಕಂಪನಿಯ ಟೆಕ್ಕಿ ಮಾತ್ರವೇ ನಾಪತ್ತೆಯಾಗಿರುವ ಸಂಗತಿ ದೃಢಪಟ್ಟಿದ್ದು, 10 ಮಂದಿ ದೂರದ ಸ್ಥಳಗಳಲ್ಲಿ ಸಹಾಯ ಇಲ್ಲದೇ ಸಿಲುಕಿಕೊಂಡಿದ್ದಾರಾದರೂ ಸುರಕ್ಷಿತವಾಗಿದ್ದಾರೆ. ಇತರ ಭಾರತೀಯರೆಲ್ಲರೂ ಸುರಕ್ಷಿತವಾಗಿದ್ದಾರಾ ಎಂಬ ಬಗ್ಗೆ ಸರ್ಕಾರದಿಂದ ಖಚಿತ ಮಾಹಿತಿ ಲಭ್ಯವಾಗಿಲ್ಲ. ಭಾರತದಲ್ಲಿರುವ ಅವರ ಸಂಬಂಧಿಗಳಿಂದ ಯಾವುದೇ ದೂರುಗಳೂ ದಾಖಲಾಗಿರುವುದು ತಿಳಿದುಬಂದಿಲ್ಲ.

ಟರ್ಕಿ ಮತ್ತು ಸಿರಿಯಾದಲ್ಲಿ ಈ ವಾರದ ಆರಂಭದಲ್ಲಿ ಸಂಭವಿಸಿದ ಭೂಕಂಪ ದುರಂತದಿಂದ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 16 ಸಾವಿರ ಗಡಿ ದಾಟಿದೆ. ಸಾವಿರಾರು ಕಟ್ಟಡಗಳು ನೆಲಕ್ಕುರುಳಿದ್ದು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವು ಶವಗಳು ಸಿಲುಕಿರುವ ಸಾಧ್ಯತೆ ಇದೆ. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು, ಭಾರತದ ಎನ್​ಡಿಆರ್​ಎಫ್ ಪಡೆ ಸಿಬ್ಬಂದಿ ತಂಡಗಳು ಟರ್ಕಿಗೆ ಹೋಗಿ ಕಾರ್ಯಾಚರಿಸುತ್ತಿದ್ದಾರೆ. ಭಾರತದಿಂದ ಐದು ವಿಮಾನಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಟರ್ಕಿಗೆ ಕಳುಹಿಸಲಾಗಿದೆ. ಒಂದು ವಿಮಾನ ಸಿರಿಯಾಗೆ ಹೋಗಿದೆ.

Published On - 12:39 pm, Thu, 9 February 23

ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್:ಮೈಲಾರಲಿಂಗೇಶ್ವರ ಕಾರ್ಣಿಕ
ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್:ಮೈಲಾರಲಿಂಗೇಶ್ವರ ಕಾರ್ಣಿಕ
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ