ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಮೂರು ಅಂತಸ್ಥಿನ ಕಟ್ಟಡ ಕುಸಿದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ, 12 ಮಂದಿಯನ್ನು ರಕ್ಷಿಸಲಾಗಿದೆ. ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಮೂರು ಅಂತಸ್ತಿನ ಕಟ್ಟಡ ಕುಸಿದು ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 12 ಮಂದಿಯನ್ನು ರಕ್ಷಿಸಲಾಗಿದೆ . ಕಟ್ಟಡದ ಅವಶೇಷಗಳಡಿ ಇನ್ನೂ ನಾಲ್ವರು ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾರಾಬಂಕಿಯ ಫತೇಪುರ್‌ನಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಎಸ್‌ಡಿಆರ್‌ಎಫ್‌ನಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಬಾರಾಬಂಕಿಯಲ್ಲಿ ಕಟ್ಟಡ ಕುಸಿತದ ಬಗ್ಗೆ ಇಂದು ಮುಂಜಾನೆ 3.10 ಕ್ಕೆ ನಮಗೆ ಮಾಹಿತಿ ಬಂದಿತ್ತು. ಕಟ್ಟಡದಲ್ಲಿದ್ದ 16 ಜನರ ಪೈಕಿ 12 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮೂರ್ನಾಲ್ಕು ಮಂದಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. 12 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಎಸ್‌ಡಿಆರ್‌ಎಫ್ ತಂಡ ಸ್ಥಳದಲ್ಲಿದ್ದು, ಎನ್‌ಡಿಆರ್‌ಎಫ್ ತಂಡ ಶೀಘ್ರದಲ್ಲೇ ಆಗಮಿಸಲಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
#WATCH | UP: “Around 3 am in the morning, we received information about a building collapse in Barabanki…We have rescued 12 people…we have got information that 3-4 people are likely still trapped under the debris. SDRF team is also at the spot, NDRF will arrive soon…among… pic.twitter.com/76lhQUJoIR
— ANI UP/Uttarakhand (@ANINewsUP) September 4, 2023
ಇಲ್ಲಿನ ಫತೇಪುರ್ ಪಟ್ಟಣದಲ್ಲಿ ನಿರ್ಮಿಸಲಾಗಿದ್ದ ಹಮೀಶ್ ಹೆಸರಿನ ಕಟ್ಟಡ ಮಧ್ಯರಾತ್ರಿ ಕುಸಿದು ಬಿದ್ದಿದೆ. ಅಪಘಾತದ ವೇಳೆ ಈ ಮನೆಯಲ್ಲಿ ಸುಮಾರು 19 ಮಂದಿ ರಾತ್ರಿ ಮಲಗಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳೀಯ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದೆ.
ಮತ್ತಷ್ಟು ಓದಿ: ಮಹಾರಾಷ್ಟ್ರ: ಎರಡು ಅಂತಸ್ತಿನ ಕಟ್ಟಡ ಕುಸಿತ, ನವಜಾತ ಶಿಶು ಸೇರಿ ಇಬ್ಬರು ಸಾವು
ಬಾರಾಬಂಕಿಯ ಫತೇಪುರ್ ಪಟ್ಟಣದ ಹಾಶಿಮ್ ಬಿಲ್ಡಿಂಗ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಕಟ್ಟಡವು ರಾತ್ರಿ 3 ಗಂಟೆಯ ಸುಮಾರಿಗೆ ಹಠಾತ್ತನೆ ಕುಸಿದಿದ್ದು, ಆ ಸಮಯದಲ್ಲಿ ಸುಮಾರು 16 ಜನರು ಅದರಲ್ಲಿದ್ದರು ಎನ್ನಲಾಗಿದೆ. ಘಟನೆಯ ನಂತರ ಇಡೀ ಪ್ರದೇಶದಲ್ಲಿ ಕೋಲಾಹಲ ಉಂಟಾಯಿತು.
ಬಾರಾಬಂಕಿ ಆಡಳಿತವು ಅಪಘಾತದಲ್ಲಿ ಗಾಯಗೊಂಡ ಮತ್ತು ಸತ್ತವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊಹಮ್ಮದ್ ಹಾಶಿಮ್ ಅವರ ಪುತ್ರಿ ರೋಶ್ನಿ ಬಾನೋ (22) ಮತ್ತು ಇಸ್ಲಾಮುದ್ದೀನ್ ಅವರ ಪುತ್ರ 28 ವರ್ಷದ ಹಕೀಮುದ್ದೀನ್ ಮೃತಪಟ್ಟಿದ್ದಾರೆ.
ಗಾಯಾಳುಗಳ ಪೈಕಿ ಮೆಹಕ್ ಪ್ರಾಯ 12 ವರ್ಷ , ಶಕೀಲಾ ಪ್ರಾಯ 50 ವರ್ಷ , ಪತ್ನಿ ಮಹಮ್ಮದ್ ಹಾಶಿಮ್ , ಸಲ್ಮಾನ್ ಮಗ ಮೊಹಮ್ಮದ್ ಹಾಶಿಮ್ ಪ್ರಾಯ 26 ವರ್ಷ , ಸುಲ್ತಾನ್ ಮಗ ಮೊಹಮ್ಮದ್ ಹಾಶಿಮ್ ಪ್ರಾಯ 24 ವರ್ಷ , ಜೈನಾಬ್ ಫಾತಿಮಾ ಮಗಳು ಇಸ್ಲಾಮುದ್ದೀನ್ ಪ್ರಾಯ 8 ವರ್ಷ , ಕುಲ್ಸೂಮ್ ಪತ್ನಿ ಇಸ್ಲಾಮುದ್ದೀನ್ ಪ್ರಾಯ 47 ವರ್ಷ , ಜಫರುಲ್ ಹಸನ್ . ಮಗ ಇಸ್ಲಾಮುದ್ದೀನ್ ಪ್ರಾಯ 20 ವರ್ಷ, ಸಮೀರ್ ಮಗ ಮೊಹಮ್ಮದ್ ಹಾಶಿಮ್ ಪ್ರಾಯ 16 ವರ್ಷ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ