ಪೋಷಕರ ಜಗಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಸಹೋದರಿಯರು

ಪೋಷಕರ ಜಗಳದಿಂದ ಬೇಸತ್ತು ಇಬ್ಬರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್​ನಲ್ಲಿ ನಡೆದಿದೆ. ಪುರನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳೀಯ ಕಾರ್ಪೊರೇಟರ್ ಅಸೀಮ್ ರಜಾ ಅವರ ಪುತ್ರಿಯರಾದ ಕಾಶಿಶ್ (20) ಮತ್ತು ಆಕೆಯ ಸಹೋದರಿ ಮುನ್ನಿ (18) ಭಾನುವಾರ ಸಂಜೆ ವಿಷ ಸೇವಿಸಿದ್ದಾರೆ,.

ಪೋಷಕರ ಜಗಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಸಹೋದರಿಯರು
ಸಾವು
Follow us
ನಯನಾ ರಾಜೀವ್
|

Updated on: Sep 04, 2023 | 8:29 AM

ಪೋಷಕರ ಜಗಳದಿಂದ ಬೇಸತ್ತು ಇಬ್ಬರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್​ನಲ್ಲಿ ನಡೆದಿದೆ. ಪುರನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳೀಯ ಕಾರ್ಪೊರೇಟರ್ ಅಸೀಮ್ ರಜಾ ಅವರ ಪುತ್ರಿಯರಾದ ಕಾಶಿಶ್ (20) ಮತ್ತು ಆಕೆಯ ಸಹೋದರಿ ಮುನ್ನಿ (18) ಭಾನುವಾರ ಸಂಜೆ ವಿಷ ಸೇವಿಸಿದ್ದಾರೆ.

ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ನೀಡುವ ವೇಳೆ ಸಾವನ್ನಪ್ಪಿದ್ದಾರೆ ಎಂದು ವಲಯದ ಅಧಿಕಾರಿ ಅಲೋಕ್ ಸಿಂಗ್ ಹೇಳಿದ್ದಾರೆ.

ಪೊಲೀಸರ ಪ್ರಕಾರ, ಅವರ ಪೋಷಕರು ಆಗಾಗ ಜಗಳವಾಡುತ್ತಿದ್ದರು, ಭಾನುವಾರವೂ ಅವರಿಬ್ಬರ ನಡುವೆ ಇಂತಹದೊಂದು ಜಗಳವಾಗಿತ್ತು. ಇದರಿಂದ ಬೇಸತ್ತ ಅವರ ಪುತ್ರಿಯರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ:Murder: ಅತ್ತೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಕೊಂದ ಸೊಸೆ

ಆರಂಭದಲ್ಲಿ ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಕುಟುಂಬಸ್ಥರು ಪೊಲೀಸರಿಗೆ ಅವಕಾಶ ನೀಡಿರಲಿಲ್ಲ. ಆದಾಗ್ಯೂ, ಹೆಚ್ಚುವರಿ ಪೊಲೀಸ್ ಪಡೆಯನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ ಮತ್ತು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಿಒ ಹೇಳಿದರು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ