ರಾಮನಗರ: ಪೊಲೀಸರ ಮೇಲೆ ಆರೋಪ; ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಮಹಿಳೆಯೊಬ್ಬರು ಪೊಲೀಸರ ಮೇಲೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಪಟ್ಟಣ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚನ್ನಪಟ್ಟಣ ನಗರದ ಕೋಟೆ ನಿವಾಸಿ ಮಾಧುರಿ (31)ಎಂಬ ಮಹಿಳೆ ಸಾವು.
ರಾಮನಗರ, ಸೆ.03: ಮಹಿಳೆಯೊಬ್ಬರು ಪೊಲೀಸರ ಮೇಲೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಪಟ್ಟಣ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚನ್ನಪಟ್ಟಣ (channapattana) ನಗರದ ಕೋಟೆ ನಿವಾಸಿ ಮಾಧುರಿ (31)ಎಂಬ ಮಹಿಳೆ ಸಾವು. ಪೊಲೀಸರ ವರ್ತನೆ ಬಗ್ಗೆ ಆರೋಪಿಸಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಗುರುವಾರ ರೈಲ್ವೇ ನಿಲ್ದಾಣ ಬಳಿ ಮೃತ ಮಹಿಳೆ ಮತ್ತೊರ್ವ ಮಹಿಳೆ ಜ್ಯೋತಿ ಎಂಬಾಕೆ ಜೊತೆಗೆ ದುಡ್ಡಿನ ವಿಚಾರಕ್ಕೆ ಕಿತ್ತಾಟ ಮಾಡಿಕೊಂಡು, ಜ್ಯೋತಿ ಮೊಬೈಲ್ ಕಸಿದುಕೊಂಡಿದ್ದಾಗಿ ಆರೋಪಿಸಿದ್ದರು. ಗಲಾಟೆ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಲು ಮೃತ ಮಹಿಳೆ ಬಂದಿದ್ದರು.
ಈ ಹಿಂದೆ ಮೃತ ಮಹಿಳೆ ಮೇಲೆ ಹಲವು ಮೋಸ ಮಾಡಿರುವ ಕೇಸ್ ದಾಖಲು ಆಗಿದೆ. ಫ್ರಾಡ್ ಕೇಸ್ ಇದೆ. ಎಂಬ ಕಾರಣಕ್ಕೆ ಪೊಲೀಸರು ಮಹಿಳೆಯ ದೂರು ಸ್ವೀಕರಿಸಲಿಲ್ಲ. ತನಗೆ ನ್ಯಾಯ ಕೇಳಲು ಹೋದ್ರೆ, ಅವಮಾನ ಮಾಡಿದ್ರು ಎಂದು ಮನನೊಂದು ಮೊಬೈಲ್ ವಿಡಿಯೋ ಮಾಡುತ್ತಾ ನೂರಾರು ಮಾತ್ರೆಗಳನ್ನು ಒಂದೇ ಬಾರಿ ನುಂಗಿದ್ದರು. ಅಸ್ವಸ್ಥ ಮಾಧರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಇದನ್ನೂ ಓದಿ:ಬೆಳಗಾವಿ ಪಾಲಿಕೆ ಪೌರ ಕಾರ್ಮಿಕ ಆತ್ಮಹತ್ಯೆ; ಗುತ್ತಿಗೆದಾರನ ಕಿರುಕುಳವೇ ಕಾರಣವೆಂದು ಕುಟುಂಬಸ್ಥರ ಆರೋಪ
ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಸಾವು
ಆಸ್ಪತ್ರೆ ದಾಖಲಾಗಿದ್ದ ಮಹಿಳೆ ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗಿದೇ ಕೊನೆಯುಸಿರೆಳೆದಿದ್ದಾರೆ. ಇನ್ನು ವಿಡಿಯೋ ಅಲ್ಲಿ ಮಾಧುರಿ, ತಾನೂ ಟ್ಯಾಬ್ಲೆಟ್ ತೆಗದುಕೊಂಡ ಇಂದಲ್ಲ ನಾಳೆ ಸಾಯ್ತೀನಿ. ನನ್ನ ಸಾವಿಗೆ ನ್ಯಾಯ ಕೊಡಿಸುವಂತೆ ರಾಮನಗರ ಎಸ್ಪಿಗೆ ಮನವಿ ಮಾಡಿದ್ದರು. ಚನ್ನಪಟ್ಟಣ ಟೌನ್ ಇನ್ಸ್ ಪೆಕ್ಟರ್ ಶೋಭಾ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಆರೋಪಿಸಿದ್ದಾರೆ. ಈ ಘಟನೆ ಚನ್ನಪಟ್ಟಣ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ