ಸತ್ತರಷ್ಟೇ ಗೌರವಾನಾ, ಬದುಕಿ ಬಂದರೇ ಗೌರವ ಯಾಕಿಲ್ಲ? ನಿವೃತ್ತ ಸೈನಿಕನ ಮನದಾಳದ ಮಾತು; ಇಲ್ಲಿದೆ ನೋಡಿ
26 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ, ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ, ನಿವೃತ್ತರಾಗಿ ಗ್ರಾಮಕ್ಕೆ ಮರಳಿರುವ ಕುಮಾರ್ ಕುಂಬಾಪುರ ಅವರನ್ನು ಸ್ವಾಗತಿಸಲು ಜನರೇ ಸೇರಿರಲಿಲ್ಲ. ಸೈನಿಕನನ್ನು ಟಾಟಾ ಏಸ್ ವಾಹನದಲ್ಲಿ ಮೆರವಣಿಗೆ ಮಾಡಿದರೂ ಜನ ಪ್ರತಿಕ್ರಿಯಿಸಿಲ್ಲ.
ರಾಮನಗರ: ಯೋಧರು (Soldier) ಹಗಲು ರಾತ್ರಿ ಎನ್ನದೇ ದೇಶ ಕಾಯುತ್ತಾರೆ. ತಮ್ಮ ಜೀವ ಮತ್ತು ಜೀವನವನ್ನು ಪಣಕ್ಕಿಟ್ಟು ದೇಶ ಕಾಯುತ್ತಾರೆ. ಈ ಯೋದರಿಗೆ ಅದೆಷ್ಟು ಸಲಾಂ ಹೇಳಿದರೂ ಸಾಲದು. ಗಡಿಯಲ್ಲಿ ಶತೃಗಳಿಗೆ ಗುಂಡಿನ ರುಚಿ ತೋರಿಸಿ ಪರಾಕ್ರಮ ಮೆರೆಯುತ್ತಾರೆ. ಇಂತಹ ಯೋಧ ನಿವೃತ್ತಿ ಹೊಂದಿ ಮರಳಿ ಗೂಡಿಗೆ ಬಂದರೇ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿ, ಗೌರವಿಸುವುದು ನಮ್ಮ ಕರ್ತವ್ಯ. ಕರ್ತವ್ಯ ಆದರೆ ಇಲ್ಲಿ ಬೇರೆಯದ್ದೇ ಆಗಿದೆ. 26 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ, ಕಾರ್ಗಿಲ್ (Kargil) ಯುದ್ಧದಲ್ಲಿ ಭಾಗಿಯಾಗಿ, ನಿವೃತ್ತರಾಗಿ ಗ್ರಾಮಕ್ಕೆ ಮರಳಿರುವ ಕುಮಾರ್ ಕುಂಬಾಪುರ ಅವರನ್ನು ಸ್ವಾಗತಿಸಲು ಜನರೇ ಸೇರಿರಲಿಲ್ಲ. ಸೈನಿಕನನ್ನು ಟಾಟಾ ಏಸ್ ವಾಹನದಲ್ಲಿ ಮೆರವಣಿಗೆ ಮಾಡಿದರೂ ಜನ ಪ್ರತಿಕ್ರಿಯಿಸಿಲ್ಲ. ಜನರ ಪ್ರತಿಕ್ರಿಯೆಗೆ ಸೈನಿಕ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಸೈನಿಕ ಸತ್ತರಷ್ಟೇ ಗೌರವಾನಾ..! ಬದುಕಿ ಬಂದರೇ ಗೌರವ ಯಾಕಿಲ್ಲ..! ಅಷ್ಟಾಗಿ ಜನ ಸೇರಲಿಲ್ಲ, ತುಂಬಾ ನೋವಿದೆ ಎಂದು ನಿವೃತ್ತ ಯೋಧ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಕುಮಾರ್ ಅವರಿಗೆ ಸ್ನೇಹಿತರು ರಾಮನಗರ ಪಟ್ಟಣದಲ್ಲಿ ಮೆರವಣಿಗೆ ಮಾಡಿ ನಂತರ ಅವರ ಗ್ರಾಮಕ್ಕೆ ಕಳುಹಿಸಿದ್ದಾರೆ.
Published On - 2:13 pm, Sun, 3 September 23