AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಹಮದಾಬಾದ್‌ನಲ್ಲಿ ದರೋಡೆ: 70 ಐಫೋನ್, 36 ಆಪಲ್ ವಾಚ್ ಸೇರಿ 1 ಕೋಟಿಯ ಗ್ಯಾಜೆಟ್ಸ್ ದೋಚಿದ ಕಳ್ಳರು!

ಅಹಮದಾಬಾದ್‌ನ ನವಾಪುರ ಗ್ರಾಮದಲ್ಲಿರುವ 'ಇಂಗ್ರಾಮ್ ಮೈಕ್ರೋ' ಕಂಪನಿಗೆ ಸೇರಿದ ಅಂಗಡಿಯೊಂದರಿಂದ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಬೆಲೆಬಾಳುವ ಎಲೆಕ್ಟ್ರಾನಿಕ್ಸ್ ಸಾಧನಗಳ ಕಳ್ಳತನ ನಡೆದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಮೂವರು ಕಳ್ಳರು ಹಿಂಬಾಗಿಲು ಮುರಿದು ಐಫೋನ್‌ಗಳು, ಲ್ಯಾಪ್‌ಟಾಪ್‌ಗಳನ್ನು ದೋಚಿದ್ದಾರೆ. ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಅಹಮದಾಬಾದ್‌ನಲ್ಲಿ ದರೋಡೆ: 70 ಐಫೋನ್, 36 ಆಪಲ್ ವಾಚ್ ಸೇರಿ 1 ಕೋಟಿಯ ಗ್ಯಾಜೆಟ್ಸ್ ದೋಚಿದ ಕಳ್ಳರು!
ಕೋಟಿ ಮೌಲ್ಯದ ಗ್ಯಾಜೆಟ್‌ಗಳ ಕಳ್ಳತನ!
ಅಕ್ಷತಾ ವರ್ಕಾಡಿ
|

Updated on: Oct 25, 2026 | 11:37 AM

Share

ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ಸನಾಥಲ್ ಸರ್ಕಲ್ ಸಮೀಪದ ನವಾಪುರ ಗ್ರಾಮದಲ್ಲಿದ್ದ ‘ಇಂಗ್ರಾಮ್ ಮೈಕ್ರೋ’ ಕಂಪನಿಯ ಅಂಗಡಿಯಲ್ಲಿ ತಡರಾತ್ರಿ ಭಾರಿ ಕಳ್ಳತನ ನಡೆದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದ ಸುಮಾರು ಮೂವರು ಮುಸುಕುಧಾರಿ ಕಳ್ಳರು, ಅಂಗಡಿಯ ಹಿಂಬಾಗಿಲನ್ನು ಮುರಿದು ಅಂದಾಜು 1 ಕೋಟಿ ರೂಪಾಯಿ ಮೌಲ್ಯದ ಬೆಲೆಬಾಳುವ ಎಲೆಕ್ಟ್ರಾನಿಕ್ ಸಾಧನಗಳನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳತನದ ಸಂಪೂರ್ಣ ದೃಶ್ಯಾವಳಿಗಳು ಅಂಗಡಿಯೊಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಚಾಂಗೋದರ್ ಠಾಣೆ ಪೊಲೀಸರು ಸಿಸಿಟಿವಿ ಫೂಟೇಜ್ ಆಧರಿಸಿ ತನಿಖೆ ತೀವ್ರಗೊಳಿಸಿದ್ದಾರೆ.

ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು:

ಪೋಲೀಸರ ಪ್ರಾಥಮಿಕ ಮಾಹಿತಿಯಂತೆ, ಕಳ್ಳರು ಅಂಗಡಿಯ ಹಿಂಭಾಗದಲ್ಲಿದ್ದ ಹೊಲದ ಕಡೆಯಿಂದ ಬಂದು, ಹಿಂಬಾಗಿಲನ್ನು ಮುರಿದು ಒಳಪ್ರವೇಶಿಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಕಳ್ಳರು ತಮ್ಮ ಗುರುತು ಸಿಗದಂತೆ ತಲೆ ಹಾಗೂ ಮುಖಕ್ಕೆ ಬಟ್ಟೆ ಸುತ್ತಿಕೊಂಡಿರುವುದು ಕಂಡುಬಂದಿದೆ. ಕಳ್ಳತನ ನಡೆಸಿದ ನಂತರ ಆರೋಪಿಗಳು ರಸ್ತೆ ಮಾರ್ಗವಾಗಿ ಪರಾರಿಯಾಗಿದ್ದಾರೆ.

ಸೆಕ್ಯೂರಿಟಿ ಗಾರ್ಡ್‌ನಿಂದ ಕಳ್ಳತನ ಬೆಳಕಿಗೆ:

ಆಕ್ಟೋಬರ್ 21ರ ತಡರಾತ್ರಿ 1:00 ರಿಂದ 2:30 ರ ನಡುವೆ ಅಂಗಡಿಯ ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ಹಿಂಬಾಗಿಲು ಮುರಿದಿರುವುದು ಹಾಗೂ ಒಳಗಿದ್ದ ಪಾರ್ಸಲ್‌ಗಳು ಹಾನಿಗೊಳಗಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಜಗತ್‌ಪುರದ ಗೋದ್ರೇಜ್ ಗಾರ್ಡನ್ ಸಿಟಿಯಲ್ಲಿ ವಾಸಿಸುತ್ತಿರುವ ಅಂಗಡಿಯ ವ್ಯವಸ್ಥಾಪಕರಾದ ಸುಧೀರ್ ನಾಯರ್ ಅವರಿಗೆ ವಿಷಯ ತಿಳಿಸಿದ್ದಾರೆ. ಸುಧೀರ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಕೋಟಿ ಮೌಲ್ಯದ ಗ್ಯಾಜೆಟ್‌ಗಳು ಕಳವಾಗಿರುವುದು ದೃಢಪಟ್ಟಿದೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಇಡ್ಲಿಗೆ ದತ್ತೂರಿ ಬೀಜ ಹಾಕಿ ಪತಿಯ ಕೊಲೆಗೆ ಯತ್ನ: ಇಡ್ಲಿ ತಿಂದರೂ ಸಾಯದಿದ್ದಾಗ ಪತ್ನಿ ಮಾಡಿದ್ದೇನು ನೋಡಿ

ಕಳವಾದ ಬೆಲೆಬಾಳುವ ಗ್ಯಾಜೆಟ್‌ಗಳ ವಿವರ:

ಕಳ್ಳರು ಅತ್ಯಂತ ಬೆಲೆಬಾಳುವ ಆಪಲ್ ಹಾಗೂ ಇತರ ಪ್ರಮುಖ ಕಂಪನಿಗಳ ಗ್ಯಾಜೆಟ್‌ಗಳನ್ನಷ್ಟೇ ಗುರಿಯಾಗಿಸಿಕೊಂಡು ದೋಚಿದ್ದಾರೆ. ಕಳವಾದ ವಸ್ತುಗಳಲ್ಲಿ 40 ಐಫೋನ್ 17 ಸೀರಿಸ್​​, 30 ಐಫೋನ್ 16, 36 ಆಪಲ್ ವಾಚ್‌ಗಳು, 15 ಡೆಲ್ ಲ್ಯಾಪ್‌ಟಾಪ್‌ಗಳು, 11 ಹೆಚ್‌ಪಿ ಲ್ಯಾಪ್‌ಟಾಪ್‌ಗಳು, 20 ಐಪ್ಯಾಡ್ ಕೀಬೋರ್ಡ್‌ಗಳು, ಐಪ್ಯಾಡ್ ಪ್ರೊ ಸಾಧನಗಳು ಹಾಗೂ ಲ್ಯಾಪ್‌ಟಾಪ್ ಬ್ಯಾಗ್‌ಗಳು ಸೇರಿವೆ. ದೋಚಲಾದ ಒಟ್ಟು ಸಾಮಗ್ರಿಗಳ ಒಟ್ಟು ಮೌಲ್ಯ ಅಂದಾಜು 1 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಸ್ಥಳೀಯರ ಕೈವಾಡ ಶಂಕೆ ಹಾಗೂ ಪೋಲೀಸ್ ತನಿಖೆ:

ಘಟನೆಗೆ ಸಂಬಂಧಿಸಿದಂತೆ ಅಹಮದಾಬಾದ್ ಗ್ರಾಮಾಂತರ ಉಪ ಪೊಲೀಸ್ ವರಿಷ್ಠಾಧಿಕಾರಿ (DySP) ನೀಲಂ ಗೋಸ್ವಾಮಿ ಮಾತನಾಡಿ, ಆರೋಪಿಗಳ ಪತ್ತೆಗೆ ಹಲವು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂಗಡಿಯ ಒಳರಚನೆ ಹಾಗೂ ಸೆಕ್ಯೂರಿಟಿ ವ್ಯವಸ್ಥೆಯ ಬಗ್ಗೆ ಮುಂಚಿತವಾಗಿಯೇ ಚೆನ್ನಾಗಿ ತಿಳಿದಿರುವ ಯಾರೋ ಒಬ್ಬರ (Insider) ನೇರ ಕೈವಾಡ ಇರುವ ಸಾಧ್ಯತೆಯನ್ನು ಪೋಲೀಸರು ಬಹಿರಂಗಪಡಿಸಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಳವಾಗಿ ವಿಶ್ಲೇಷಿಸುತ್ತಿದ್ದು, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಳ್ಳರ ಜಾಲವನ್ನು ಮಟ್ಟಹಾಕಲು ಜಾಲ ಬೀಸಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ರಾಜ್ಯದಾದ್ಯಂತ ಹಿಂಗಾರು ಮಳೆ ಆರ್ಭಟ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ
ರಾಜ್ಯದಾದ್ಯಂತ ಹಿಂಗಾರು ಮಳೆ ಆರ್ಭಟ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ
ಕಮ್ಮಗೊಂಡನಹಳ್ಳಿಯ ಅಂಗಡಿಯಲ್ಲಿ ಏಕಕಾಲಕ್ಕೆ 23 ಸಿಲಿಂಡರ್ ಸ್ಫೋಟ
ಕಮ್ಮಗೊಂಡನಹಳ್ಳಿಯ ಅಂಗಡಿಯಲ್ಲಿ ಏಕಕಾಲಕ್ಕೆ 23 ಸಿಲಿಂಡರ್ ಸ್ಫೋಟ
ಇಂದು ಈ ರಾಶಿಯವರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ!
ಇಂದು ಈ ರಾಶಿಯವರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ!
ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರಲ್ಲಿ ಕುಡಿಯುವ ನೀರಿಗಾಗಿ ಪರದಾಟ
ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರಲ್ಲಿ ಕುಡಿಯುವ ನೀರಿಗಾಗಿ ಪರದಾಟ
ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್​​ಗೆ ತಿಳಿಸುತ್ತೇವೆಂದ ವಕೀಲ
ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್​​ಗೆ ತಿಳಿಸುತ್ತೇವೆಂದ ವಕೀಲ