AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಕರನ ಜೊತೆ ಸೇರಿ ಇಡ್ಲಿಗೆ ದತ್ತೂರಿ ಬೀಜ ಹಾಕಿ ಪತಿಯ ಕೊಲೆಗೆ ಯತ್ನ: ಇಡ್ಲಿ ತಿಂದರೂ ಸಾಯದಿದ್ದಾಗ ಪತ್ನಿ ಮಾಡಿದ್ದೇನು ನೋಡಿ

ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಯೂಟ್ಯೂಬ್ ನೋಡಿ ದತ್ತೂರಿ ಬೀಜದ ಪುಡಿ ಬೆರೆಸಿ ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಪವಿತ್ರ ಹಾಗೂ ಆಕೆಯ ಪ್ರಿಯಕರ ಸುನೀಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇಡ್ಲಿಯಲ್ಲಿ ವಿಷ ಬೆರೆಸಿ, ಬಳಿಕ ಕತ್ತು ಹಿಸುಕಿ ಬರ್ಬರವಾಗಿ ಕೊಲೆಗೈದಿದ್ದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಪ್ರಿಯಕರನ ಜೊತೆ ಸೇರಿ ಇಡ್ಲಿಗೆ ದತ್ತೂರಿ ಬೀಜ ಹಾಕಿ ಪತಿಯ ಕೊಲೆಗೆ ಯತ್ನ: ಇಡ್ಲಿ ತಿಂದರೂ ಸಾಯದಿದ್ದಾಗ ಪತ್ನಿ ಮಾಡಿದ್ದೇನು ನೋಡಿ
ಕೊಲೆಯಾದ ರಾಮಪ್ರಸಾದ್ (35), ಪವಿತ್ರಾ ಮತ್ತು ಸುನಿಲ್
ರಾಮ್​, ಮೈಸೂರು
| Edited By: |

Updated on: Oct 24, 2026 | 11:40 AM

Share

ಮುಖ್ಯಾಂಶಗಳು

  • ಯೂಟ್ಯೂಬ್ ನೋಡಿ ದತ್ತೂರಿ ಬೀಜ ಪುಡಿ ಬೆರೆಸಿ ಪತಿಯ ಕಗ್ಗೊಲೆ.
  • ಪತ್ನಿ ಪವಿತ್ರ ಹಾಗೂ ಪ್ರಿಯಕರ ಸುನೀಲ್‌ನಿಂದ ಬರ್ಬರ ಹತ್ಯೆ.
  • ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಿಂದ ಆರೋಪಿಗಳ ಯಶಸ್ವಿ ಬಂಧನ.

ಮೈಸೂರು, ಅಕ್ಟೋಬರ್ 24: ಜಿಲ್ಲೆಯ ಹುಣಸೂರು ತಾಲೂಕಿನ ವಿನೋಬ ಕಾಲೋನಿಯಲ್ಲಿ ಪ್ರಿಯಕರನೊಂದಿಗೆ ಜೊತೆ ಸೇರಿ ಪತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಗಾರೆ ಕೆಲಸ ಮಾಡುತ್ತಿದ್ದ ರಾಮಪ್ರಸಾದ್ (35) ಕೊಲೆಯಾದ ದುರ್ದೈವಿ. ಮೃತನ ಪತ್ನಿ ಪವಿತ್ರ ಹಾಗೂ ಆಕೆಯ ಪ್ರಿಯಕರ ಸುನೀಲ್ ಎಂಬುವವರನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪತ್ನಿಯ ಅಕ್ರಮ ಸಂಬಂಧ, ಕೌಟುಂಬಿಕ ಕಲಹ

ಕೆಸರೆ ನಿವಾಸಿ ಪವಿತ್ರಳನ್ನು ಮದುವೆಯಾಗಿದ್ದ ರಾಮಪ್ರಸಾದ್ ದಂಪತಿಗೆ 11 ವರ್ಷದ ಗಂಡು ಹಾಗೂ 9 ವರ್ಷದ ಹೆಣ್ಣು ಮಕ್ಕಳಿದ್ದಾರೆ. ಆದರೆ ಅದೇ ಗ್ರಾಮದ ಸುನೀಲ್ ಎಂಬಾತನೊಂದಿಗೆ ಪವಿತ್ರಾ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಹೇಗಾದರೂ ಮಾಡಿ ಪತಿಯನ್ನು ಮುಗಿಸಲೇಬೇಕು ಎಂದು ಪವಿತ್ರ ಸಂಚು ರೂಪಿಸಿದ್ದಳು. ಹಾಗಾಗಿ ಯೂಟ್ಯೂಬ್‌ನಲ್ಲಿ ದತ್ತೂರಿ ಬೀಜದ ಕುರಿತು ಮಾಹಿತಿ ಪಡೆದು ಕೊಲೆಗೆ ಪ್ಲಾನ್ ಮಾಡಿದ್ದಳು.

ಪತಿಯ ಸಾವಿನ ಬಗ್ಗೆ ಸುಳ್ಳು ಕತೆ ಕಟ್ಟಿದ್ದ ಪವಿತ್ರಾ

ತನ್ನ ಪ್ಲಾನ್​ನಂತೆ ಪವಿತ್ರ, ಅಕ್ಟೋಬರ್ 16ರಂದು ರಾತ್ರಿ ಕುಡಿದು ಮನೆಗೆ ಬಂದ ರಾಮಪ್ರಸಾದ್‌ಗೆ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದಾಳೆ. ಆದರೂ ಆತ ಸಾಯದಿದ್ದಾಗ, ಪ್ರಿಯಕರನ ಸಹಾಯದಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ. ನಂತರ ಮೃತನ ಸಹೋದರ ಚಂದ್ರಹಾಸಗೆ ಕರೆ ಮಾಡಿದ ಪವಿತ್ರಾ, ಪತಿ ಮೊಸರು ತಿಂದು ಮಲಗಿ ಎದ್ದೇಳುತ್ತಿಲ್ಲ ಎಂದು ನಾಟಕವಾಡಿದ್ದಾಳೆ. ಆಸ್ಪತ್ರೆಗೆ ಕೊಂಡೊಯ್ದಾಗ ರಾಮಪ್ರಸಾದ್ ಮೃತಪಟ್ಟಿರುವುದು ತಿಳಿದುಬಂದಿತ್ತು. ಆಕೆಯ ಮಾತನ್ನೇ ನಂಬಿದ್ದ ಸಂಬಂಧಿಕರು ಮೃತನ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದರು.

ಆದರೆ ಅದೇ ರಾತ್ರಿ ಆರೋಪಿ ಸುನೀಲ್ ಮನೆಗೆ ಪವಿತ್ರಾ ಹೋಗಿದ್ದರ ಬಗ್ಗೆ ಸ್ಥಳೀಯರು ಚಂದ್ರಹಾಸಗೆ ಮಾಹಿತಿ ನೀಡಿದ್ದಾರೆ. ಸಂಶಯಗೊಂಡು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆಯಲ್ಲಿ ಅಸಲಿ ಸತ್ಯ ಹೊರಬಂದಿದ್ದು, ಪ್ರಿಯಕರ ಸುನಿಲ್ ಹಾಗೂ ಪವಿತ್ರಳನ್ನು ಬಂಧಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More