ದೆಹಲಿ: ಅಹ್ಮದಾಬಾದ್ನಲ್ಲಿ ದೇಶದಲ್ಲಿಯೇ ಅತ್ಯಂತ ಒಳ್ಳೆಯ ಕೈಗೆಟಕುವ ದರದಲ್ಲಿ ನಿವೇಶನಗಳು ಲಭ್ಯವಾಗುತ್ತವೆ..ಹಾಗೇ ಮುಂಬೈನಲ್ಲಿ ಅತಿದುಬಾರಿಯಾಗಿವೆ ಎಂದು ಅಂತಾರಾಷ್ಟ್ರೀಯ ಆಸ್ತಿ ಸಲಹೆಗಾರ ಕಂಪನಿ Knight Frank India ವರದಿ ನೀಡಿದೆ.
ವಸತಿ ಮಾರುಕಟ್ಟೆಗಳ 2020ರ ದರದ ಸೂಚ್ಯಂಕವನ್ನು Knight Frank India ಇಂದು ಬಿಡುಗಡೆ ಮಾಡಿದೆ. ಅದರ ಅನ್ವಯ, ಅಹ್ಮದಾಬಾದ್ನಲ್ಲಿ ವಸತಿಗಳು ಶೇ.24ರ ಅನುಪಾತದಲ್ಲಿ ಸಿಗುತ್ತವೆ.. ಅದಾದ ಬಳಿಕ ಚೆನ್ನೈ ಮತ್ತು ಪುಣೆಗಳಲ್ಲಿ ಶೇ.26ರಷ್ಟಿದೆ. ಶೇ.50ಕ್ಕಿಂತಲೂ ಹೆಚ್ಚು ಅನುಪಾತದ ಪ್ರಮಾಣ ಇದ್ದರೆ, ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳಿಂದ ಗೃಹಸಾಲ ಪಡೆಯುವುದು ಕಷ್ಟವಾಗುತ್ತದೆ. ಈ ಕಾರಣದಿಂದ ಮನೆಗಳನ್ನು ಖರೀದಿಸಲು ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಸಾಲ ಮಾಡುವುದು ತೀರ ಕಷ್ಟವಾಗುತ್ತದೆ. ಹೀಗಾಗಿ ಅದು ದುಬಾರಿಯಾಗಿ ಪರಿಣಮಿಸುತ್ತದೆ ಎಂದು ಕಂಪನಿ ಹೇಳಿದೆ.
ಹಾಗೇ ಮುಂಬೈನಲ್ಲಿ ವಸತಿ ದರದ ಅನುಪಾತ ಶೇ.61ರಷ್ಟಿದ್ದು, ದೇಶದಲ್ಲಿಯೇ ಅತ್ಯಂತ ದುಬಾರಿ ವಸತಿ ಮಾರುಕಟ್ಟೆ ಹೊಂದಿರುವ ನಗರವಾಗಿದೆ. ಮುಂಬೈನಲ್ಲಿ ಈ ಪ್ರಮಾಣ 2010ರಲ್ಲಿ ಶೇ. 93 ಇತ್ತು. ಅದೀಗ ಗಣನೀಯವಾಗಿ ಕಡಿಮೆಯಾಗಿದ್ದರೂ ಇನ್ನೂ ದುಬಾರಿ ಸಿಟಿಯಾಗಿಯೇ ಮುಂದುವರಿಯುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ. ಹಾಗೇ ಬೆಂಗಳೂರಿನಲ್ಲಿ ರೇಷಿಯೋ ಶೇ. 28ರಷ್ಟಿದ್ದು, ದಶಕಗಳ ಹಿಂದೆ ಈ ಪ್ರಮಾಣ ಶೇ.48ರಷ್ಟಿತ್ತು ಎಂದು ಕಂಪನಿಯ ವರದಿ ತಿಳಿಸಿದೆ.
ಕೊವಿಡ್ ಇದ್ದರೂ ಭಾರತದಲ್ಲಿ ಅತ್ಯಧಿಕ ಬುಕ್ಕಿಂಗ್ ಕಂಡ ಒಯೋ; ಹೊಸದಾಗಿ 85 ಲಕ್ಷ ಗ್ರಾಹಕರು ಸೇರ್ಪಡೆ