ತಮಿಳುನಾಡಿನ ಕಡಲೂರಿನಲ್ಲಿ ಪಳನಿಸ್ವಾಮಿ ಪಕ್ಷದ ಎಐಎಡಿಎಂಕೆ ಕಾರ್ಯಕರ್ತನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪುದುಚೇರಿ ಗಡಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ತಿರುಪಾಪುಲಿಯೂರಿನ ನಿವಾಸಿ ಪದ್ಮನಾಭನ್ ಎಂದು ಗುರುತಿಸಲಾಗಿದ್ದು, ಇವರು ಅಂಗಡಿ ನಡೆಸುತ್ತಿದ್ದರು.
ಅವರು ಬಾಗೂರು ಗ್ರಾಮದ ಕಡೆಗೆ ಪ್ರಯಾಣಿಸುತ್ತಿದ್ದಾಗ ಅಪರಿಚಿತರ ಗುಂಪೊಂದು ಹಿಂಬಾಲಿಸಿ ಅವರನ್ನು ಸುತ್ತುವರೆದಿದೆ. ಕೆಲವೇ ಕ್ಷಣಗಳಲ್ಲಿ ಅವರು ಕೊಲ್ಲಲ್ಪಟ್ಟರು. ಆರಂಭಿಕ ವರದಿಗಳ ಪ್ರಕಾರ ಗ್ಯಾಂಗ್ ತಮ್ಮ ಕಾರನ್ನು ಪದ್ಮನಾಭನ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿತ್ತು. ಆದರೆ ಹತ್ಯೆಗೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.
ಬಳಿಕ ಅವರನ್ನು ಹೊರಗೆಳೆದು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರು ಯುವತಿ ಕೊಲೆ: ಸ್ನೇಹಿತೆಯನ್ನ ಕಾಪಾಡಿ ಜೀವ ಕಳೆದುಕೊಂಡ ಕೃತಿ ಕುಮಾರಿ
ಕೋರಮಂಗಲದ ವಿಆರ್ ಲೇಔಟ್ನ ಪಿಜಿಯೊಂದರಲ್ಲಿ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿದ ಆರೋಪಿ ಅಭಿಷೇಕ್ನ ವಿಕೃತಿಗಳು ಬಯಲಾಗಿವೆ. ಹಾಗೆ ಆರೋಪಿ ಅಭಿಷೇಕ್ ಕೊಲೆ ಮಾಡಲು ಕಾರಣವೇನು ಎಂಬುವುದು ಪೊಲೀಸರ (Police) ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆ ಮಾಡಿದ ಆರೋಪಿ ಅಭಿಷೇಕ್ ಭೋಪಾಲ್ ಮೂಲದವ.
ಅಭಿಷೇಕ್ ಹಾಗೂ ಕೊಲೆಯಾದ ಕೃತಿ ಕುಮಾರಿಯ ಸ್ನೇಹಿತೆ ಪರಸ್ಪರ ಪ್ರೀತಿಸುತ್ತಿದ್ದರು. ಕೃತಿ ಕುಮಾರಿ ಹಾಗೂ ಅಭಿಷೇಕ್ ಪ್ರಿಯತಮೆ ಇಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೃತಿ ಕುಮಾರಿ ಹಾಗೂ ಅಭಿಷೇಕ್ ಪ್ರಿಯತಮೆ ಜೊತೆಗೆ ಒಂದೇ ಪಿಜಿಯಲ್ಲಿ ವಾಸವಾಗಿದ್ದರು. ಈ ಪಿಜಿಗೆ ಅಭಿಷೇಕ್ ಆಗಾಗ ಬಂದು ಹೋಗುತ್ತಿದ್ದನು.
ಮತ್ತಷ್ಟು ಓದಿ: ಮಹಾರಾಷ್ಟ್ರದಲ್ಲಿ ಅಸ್ಸಾಂ ಮೂಲದ ಟ್ಯಾಟೂ ಕಲಾವಿದೆಯ ಹತ್ಯೆ, ಗೆಳೆಯ ನಾಪತ್ತೆ
ಅಭಿಷೇಕ್ ಭೋಪಾಲ್ನಲ್ಲಿ ಯಾವುದೇ ಕೆಲಸ ಕೆಲಸ ಮಾಡುತ್ತಿರಲಿಲ್ಲ. ಆಗಾಗ ಭೋಪಾಲ್ನಿಂದ ಬೆಂಗಳೂರಿಗೆ ಬಂದು ಪ್ರೇಯಸಿ ಜೊತೆ ಸುತ್ತಾಡಿಕೊಂಡು ಹೋಗುತ್ತಿದ್ದನು. ಕೆಲಸಕ್ಕೆ ಸೇರು ಅಂತ ಅಭಿಷೇಕ್ಗೆ ಪ್ರೇಯಸಿ ಹೇಳುತ್ತಿದ್ದಳು. ಬಲವಂತಕ್ಕೆ ಕೆಲಸಕ್ಕೆ ಸೇರಿದ್ದಾಗಿ ಅಭಿಷೇಕ್ ಪ್ರೇಯಸಿಗೆ ಹೇಳಿದ್ದನಂತೆ. ಆದರೆ ಇದು ಸಹ ಸುಳ್ಳು ಎಂದು ಅಭಿಷೇಕ್ನ ಪ್ರೇಯಸಿಗೆ ಗೊತ್ತಾಗಿತ್ತು. ಹೀಗಾಗಿ ಅಭಿಷೇಕ್ನನ್ನು ಅವಾಯ್ಡ್ ಮಾಡಲು ಆರಂಭಿಸಿದ್ದಳು. ಇದರಿಂದ ಕೋಪಗೊಂಡ ಅಭಿಷೇಕ್ ಆಗಾಗ ಬಂದು ಪಿಜಿ ಬಳಿ ಗಲಾಟೆ ಮಾಡುತ್ತಿದ್ದನು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ