AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದಲ್ಲಿ ಅಸ್ಸಾಂ ಮೂಲದ ಟ್ಯಾಟೂ ಕಲಾವಿದೆಯ ಹತ್ಯೆ, ಗೆಳೆಯ ನಾಪತ್ತೆ

ಮಹಾರಾಷ್ಟ್ರದಲ್ಲಿ ಅಸ್ಸಾಂ ಮೂಲದ ಟ್ಯಾಟೂ ಕಲಾವಿದೆಯ ಹತ್ಯೆ ನಡೆದಿದೆ. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಮುರ್ತಿಜಾಪುರ್ ಪಟ್ಟಣದಲ್ಲಿ ಅಸ್ಸಾಂ ಮೂಲದ 26 ವರ್ಷದ ಯುವತಿಯ ಶವ ಪತ್ತೆಯಾಗಿದ್ದು ತಲೆಯ ಮೇಲೆ ಹಲವು ಗಾಯಗಳ ಗುರುತು ಕೂಡ ಇವೆ.

ಮಹಾರಾಷ್ಟ್ರದಲ್ಲಿ ಅಸ್ಸಾಂ ಮೂಲದ ಟ್ಯಾಟೂ ಕಲಾವಿದೆಯ ಹತ್ಯೆ, ಗೆಳೆಯ ನಾಪತ್ತೆ
ಟ್ಯಾಟೂImage Credit source: baylor College
ನಯನಾ ರಾಜೀವ್
|

Updated on: Jul 25, 2024 | 3:40 PM

Share

ಮಹಾರಾಷ್ಟ್ರದಲ್ಲಿ ಅಸ್ಸಾಂ ಮೂಲದ ಟ್ಯಾಟೂ ಕಲಾವಿದೆಯ ಹತ್ಯೆ ನಡೆದಿದೆ. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಮುರ್ತಿಜಾಪುರ್ ಪಟ್ಟಣದಲ್ಲಿ ಅಸ್ಸಾಂ ಮೂಲದ 26 ವರ್ಷದ ಯುವತಿಯ ಶವ ಪತ್ತೆಯಾಗಿದ್ದು ತಲೆಯ ಮೇಲೆ ಹಲವು ಗಾಯಗಳ ಗುರುತು ಕೂಡ ಇವೆ.

ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹ ಬೆಳೆಸಿದ್ದ ಆಕೆಯ ಪ್ರಿಯಕರನೇ ಆಕೆಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಆಕೆಯ ಗೆಳೆಯ ಪರಾರಿಯಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸತ್ರಸ್ತೆ ಶಾಂತಿಕ್ರಿಯಾ ಕಶ್ಯಪ್ ಅಲಿಯಾಸ್ ಕೋಯೆಲ್ ಶವ ಜುಲೈ 24 ರಂದು ಮೂರ್ತಿಜಾಪುರದ ಪ್ರತೀಕ್ ನಗರಲ್ಲಿರುವ ಗೆಳೆಯ ಕುನಾಲ್ ಅಲಿಯಾಸ್ ಸನ್ನಿ ಶೃಂಗಾರೆ (30) ವಾಸಿಸುತ್ತಿದ್ದ ಮನೆಯಲ್ಲಿ ಪತ್ತೆಯಾಗಿದೆ. ಚೂಪಾದ ಆಯುಧದಿಂದ ತಲೆಗೆ ತಿವಿದಿರುವ ಅನೇಕ ಗುರುತುಗಳಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೃಂಗಾರೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತ ಪರಾರಿಯಾಗಿದ್ದಾನೆ.

ಅಸ್ಸಾಂ ಮೂಲದ ಕಶ್ಯಪ್, ಕಳೆದ ಆರು ವರ್ಷಗಳಿಂದ ತನ್ನ ತಾಯಿಯೊಂದಿಗೆ ದೆಹಲಿಯಲ್ಲಿ ನೆಲೆಸಿದ್ದರು ಮತ್ತು ಟ್ಯಾಟೂ ಕಲೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಕೆಲವು ತಿಂಗಳುಗಳಿಂದ ಆಕೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಟ್ಯಾಟೂ ಹಾಕಿಸಿಕೊಳ್ಳುತ್ತೀರಾ?; ಈ ವಿಷಯಗಳ ಬಗ್ಗೆ ಎಚ್ಚರವಿರಲಿ

ಕಶ್ಯಪ್ ಮತ್ತು ಶೃಂಗಾರೆ ಸಾಮಾಜಿಕ ಮಾಧ್ಯಮದ ಮೂಲಕ ಸ್ನೇಹಿತರಾಗಿದ್ದರು. ಇತ್ತೀಚೆಗೆ ಅವರು ಕಶ್ಯಪ್ ಅವರನ್ನು ಮೂರ್ತಿಜಾಪುರ ಪಟ್ಟಣಕ್ಕೆ ಕರೆದು ಆಕೆಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಆರೋಪಿಗೆ ಮದ್ಯಪಾನ ಮಾಡುವ ಅಭ್ಯಾಸವಿತ್ತು. ಜುಲೈ 23ರಂದು ರಾತ್ರಿ ಕಶ್ಯಪ್ ಹಾಗೂ ಆತನ ನಡುವೆ ಜಗಳ ನಡೆದು ಕೋಪದ ಭರದಲ್ಲಿ ಹರಿತವಾದ ಆಯುಧದಿಂದ ಆಕೆಯ ತಲೆಗೆ ಹೊಡೆದಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಮರುದಿನ ಬೆಳಗ್ಗೆ ಆತನ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿ ಶೃಂಗಾರೆಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಹತ್ಯೆಯ ನಂತರ ಶೃಂಗಾರೆ ತಲೆಮರೆಸಿಕೊಂಡಿದ್ದು, ಆತನನ್ನು ಹಿಡಿಯುವ ಪ್ರಯತ್ನ ಮುಂದುವರಿದಿದೆ, ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 103 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ