AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಬಣಗಳಾಗಿ ಒಡೆದ ಎಐಎಡಿಎಂಕೆ; ಪಳನಿಸ್ವಾಮಿಗೆ 17 ಶಾಸಕರು, ವೇಲುಮಣಿ​ಗೆ 30 ಶಾಸಕರ ಬೆಂಬಲ

ತಮಿಳುನಾಡು ರಾಜಕೀಯದಲ್ಲಿ ಮತ್ತೆ ಹೊಸ ಬಿಕ್ಕಟ್ಟು ಶುರುವಾಗಿದೆ. ಕಳೆದ ವಾರವಿಡೀ ಯಾವ ಪಕ್ಷ ಸರ್ಕಾರ ರಚನೆ ಮಾಡಲಿದೆ ಎಂಬ ಕುತೂಹಲ ಮೂಡಿತ್ತು. ಈಗಾಗಲೇ ಟಿವಿಕೆ ಎಡಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಇದೀಗ ಎಐಎಡಿಎಂಕೆ ಎರಡು ಬಣಗಳಾಗಿ ವಿಭಜನೆಯಾಗಿದೆ ಎಂಬ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ. ಎಐಎಡಿಎಂಕೆ ಪಕ್ಷದಲ್ಲಿ ಎಡಪ್ಪಾಡಿ ಪಳನಿಸ್ವಾಮಿ 17 ಶಾಸಕರ ಬೆಂಬಲ ಹೊಂದಿದ್ದಾರೆ, ಷಣ್ಮುಗಂ 30 ಶಾಸಕರ ಬೆಂಬಲವನ್ನು ಹೊಂದಿದ್ದಾರೆ. ಹೀಗಾಗಿ, ಪಳನಿಸ್ವಾಮಿ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಹೆಚ್ಚಾಗಿದೆ.

2 ಬಣಗಳಾಗಿ ಒಡೆದ ಎಐಎಡಿಎಂಕೆ; ಪಳನಿಸ್ವಾಮಿಗೆ 17 ಶಾಸಕರು, ವೇಲುಮಣಿ​ಗೆ 30 ಶಾಸಕರ ಬೆಂಬಲ
Shanmugam And Palaniswami
ಸುಷ್ಮಾ ಚಕ್ರೆ
|

Updated on:May 11, 2026 | 8:38 PM

Share

ನವದೆಹಲಿ, ಮೇ 11: ಎಐಎಡಿಎಂಕೆ ಪಕ್ಷ ಈಗ ಎರಡು ಬಣಗಳಾಗಿ ವಿಭಜನೆಯಾಗಿದೆ. ಇದು ರಾಜಕೀಯ ವಲಯಗಳಲ್ಲಿ ಕುತೂಹಲ ಸೃಷ್ಟಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ಎಐಎಡಿಎಂಕೆ ಕೇವಲ 47 ಸ್ಥಾನಗಳನ್ನು ಗೆದ್ದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಕಾರಣದಿಂದಾಗಿ ಅನೇಕ ಶಾಸಕರು ಹಾಗೂ ಕಾರ್ಯಕರ್ತರು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರ ಬಗ್ಗೆ ಅತೃಪ್ತರಾಗಿದ್ದಾರೆಂದು ಹೇಳಲಾಗುತ್ತಿದೆ. ಶಾಸಕಾಂಗ ಸಮಿತಿ ನಾಯಕನ ಸ್ಥಾನಕ್ಕೆ ಪಳನಿಸ್ವಾಮಿ ಅವರಿಗೆ ಎಐಎಡಿಎಂಕೆಯ ಕೇವಲ 17 ಶಾಸಕರು ಬೆಂಬಲ ಸೂಚಿಸಿದ್ದಾರೆ.

ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪಕ್ಷದ 30 ಶಾಸಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇಂದು ವಿಧಾನಸಭೆಯ ಮೊದಲ ಅಧಿವೇಶನ ಆರಂಭವಾಗುತ್ತಿದ್ದಂತೆ ಎಐಎಡಿಎಂಕೆ ಶಾಸಕರು 2 ಗುಂಪುಗಳಾಗಿ ವಿಂಗಡಿಸಲ್ಪಟ್ಟು ವಿಧಾನಸಭೆಯೊಳಗೆ ಕುಳಿತಿದ್ದರು.

ಇದನ್ನೂ ಓದಿ: ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯೋ ದಳಪತಿ ವಿಜಯ್ ಈಗಿನ ಸ್ಯಾಲರಿ ಎಷ್ಟು?

ಕಳೆದ ಕೆಲವು ದಿನಗಳಿಂದ ಎಐಎಡಿಎಂಕೆ 2 ಬಣಗಳಾಗಿ ವಿಭಜನೆಯಾಗಿದೆ ಎಂಬ ವರದಿಗಳು ಹೊರಬಿದ್ದಿವೆ. ಅಂದರೆ, 30 ಶಾಸಕರು ಸಿ.ವಿ. ಷಣ್ಮುಗಂ ನೇತೃತ್ವದ ಬಣದಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದರೆ, ಉಳಿದ ಶಾಸಕರು ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಸಿ.ವಿ. ಷಣ್ಮುಗಂ ನೇತೃತ್ವದಲ್ಲಿ 30 ಶಾಸಕರು ಎಡಪ್ಪಾಡಿ ಪಳನಿಸ್ವಾಮಿ ಅವರು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಇಂದು ಮಧ್ಯಾಹ್ನ ಓ.ಎಸ್. ಮಣಿಯನ್ ನೇತೃತ್ವದಲ್ಲಿ ಕೇವಲ 17 ಶಾಸಕರು ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಎಐಎಡಿಎಂಕೆ ಶಾಸಕಾಂಗ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸ್ಪೀಕರ್ ಕರುಪ್ಪಯ್ಯ ಅವರಿಗೆ ಬೆಂಬಲ ಪತ್ರವನ್ನು ಸಲ್ಲಿಸಿದರು. ಉಳಿದ 30 ಶಾಸಕರು ಅವರನ್ನು ಬೆಂಬಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಸಮಯದ ಹಿಂದೆ, ಸಿ.ವಿ. ಷಣ್ಮುಗಂ ನೇತೃತ್ವದ 30 ಶಾಸಕರು ಎಸ್.ಪಿ. ವೇಲುಮಣಿ ಅವರನ್ನು ಬೆಂಬಲಿಸಿ ಸ್ಪೀಕರ್‌ಗೆ ಬೆಂಬಲ ಪತ್ರವನ್ನು ಸಲ್ಲಿಸಿದರು. ಈ ಪತ್ರದಲ್ಲಿ ವೇಲುಮಣಿ ಅವರನ್ನು ಶಾಸಕಾಂಗ ಸಮಿತಿಯ ಅಧ್ಯಕ್ಷರನ್ನಾಗಿ ಮತ್ತು ಸಿ. ವಿಜಯಭಾಸ್ಕರ್ ಅವರನ್ನು ಪಕ್ಷದ ಸಚೇತಕರನ್ನಾಗಿ ಮಾಡಬೇಕೆಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಭಾರೀ ಕುತೂಹಲ ಮೂಡಿಸಿದ ತಮಿಳುನಾಡು ಸಿಎಂ ವಿಜಯ್-ಮಾಜಿ ಮುಖ್ಯಮಂತ್ರಿ ಸ್ಟಾಲಿನ್ ಭೇಟಿ

ಇದಲ್ಲದೆ, ಸಿ.ವಿ. ಷಣ್ಮುಗಂ ನೇತೃತ್ವದ 30 ಎಐಎಡಿಎಂಕೆ ಶಾಸಕರು ತಮಿಳುನಾಡು ವೆಟ್ರಿ ಕಳಗಂ ನಾಯಕ ಮತ್ತು ಮುಖ್ಯಮಂತ್ರಿ ವಿಜಯ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರನ್ನು ಭೇಟಿ ಮಾಡಲು ಅವರು ಸಮಯ ಕೋರಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Mon, 11 May 26

Follow Us
ಮರಳಿ ಶಾಸಕ ಸ್ಥಾನ ಸಿಕ್ಕಿದಕ್ಕೆ ಕಾಂಗ್ರೆಸ್​​ನ ರಾಜೇಗೌಡ ಫುಲ್ ಖುಷ್
ಮರಳಿ ಶಾಸಕ ಸ್ಥಾನ ಸಿಕ್ಕಿದಕ್ಕೆ ಕಾಂಗ್ರೆಸ್​​ನ ರಾಜೇಗೌಡ ಫುಲ್ ಖುಷ್
PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು
PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು
ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​: ತಮಿಳುನಾಡು ಲಿಂಕ್​?
ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​: ತಮಿಳುನಾಡು ಲಿಂಕ್​?
ಅಡುಗೆ ಎಣ್ಣೆ ಬೆಲೆ 3 ರೂ. ಏರಿಕೆ
ಅಡುಗೆ ಎಣ್ಣೆ ಬೆಲೆ 3 ರೂ. ಏರಿಕೆ
ಕಾನೂನು ಉಲಂಘಿಸಿ ರಸ್ತೆಯಲ್ಲಿ ಸಂಚಾರ ಮಾಡ್ತಿದ್ದ ಶಾಲಾ ವಾಹನಗಳು RTO ವಶಕ್ಕೆ
ಕಾನೂನು ಉಲಂಘಿಸಿ ರಸ್ತೆಯಲ್ಲಿ ಸಂಚಾರ ಮಾಡ್ತಿದ್ದ ಶಾಲಾ ವಾಹನಗಳು RTO ವಶಕ್ಕೆ
ಮುಂಬೈ ಇಂಡಿಯನ್ಸ್​ ಸೋಲಿಗೆ ಕಾರಣವಾಯ್ತು ಈ ಒಂದು 'ಎಡವಟ್ಟು'
ಮುಂಬೈ ಇಂಡಿಯನ್ಸ್​ ಸೋಲಿಗೆ ಕಾರಣವಾಯ್ತು ಈ ಒಂದು 'ಎಡವಟ್ಟು'
ಇತಿಹಾಸ ನಿರ್ಮಿಸಿದ ದಳಪತಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಅಭಿನಂದನೆ!
ಇತಿಹಾಸ ನಿರ್ಮಿಸಿದ ದಳಪತಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಅಭಿನಂದನೆ!
ತಿಂಗಳಾನುಗಟ್ಟಲೆ ಪೇಮೆಂಟ್ ಇಲ್ಲದೆ ಇಂದಿರಾ ಕ್ಯಾಂಟಿನ್ ಸಿಬ್ಬಂದಿ ಪರದಾಟ!
ತಿಂಗಳಾನುಗಟ್ಟಲೆ ಪೇಮೆಂಟ್ ಇಲ್ಲದೆ ಇಂದಿರಾ ಕ್ಯಾಂಟಿನ್ ಸಿಬ್ಬಂದಿ ಪರದಾಟ!
ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್ ಬೆಳೆದು ಸೈ ಎನಿಸಿಕೊಂಡ ರೈತ!
ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್ ಬೆಳೆದು ಸೈ ಎನಿಸಿಕೊಂಡ ರೈತ!
ದೇಶದ ಹಿತಕ್ಕಾಗಿ ಒಂದು ವರ್ಷ ಚಿನ್ನ ಖರೀದಿಸಬೇಡಿ: ಪ್ರಧಾನಿ ಮೋದಿ ಕರೆ
ದೇಶದ ಹಿತಕ್ಕಾಗಿ ಒಂದು ವರ್ಷ ಚಿನ್ನ ಖರೀದಿಸಬೇಡಿ: ಪ್ರಧಾನಿ ಮೋದಿ ಕರೆ