ಮಿತಿಮೀರಿದ ಕೊವಿಡ್ 19; ಹಾಂಗ್​ಕಾಂಗ್​​ಗೆ ವಿಮಾನ ಸಂಚಾರ ರದ್ದುಗೊಳಿಸಿದ ಏರ್​ಇಂಡಿಯಾ ವಿಮಾನಯಾನ ಸಂಸ್ಥೆ

ಹಾಂಗ್​ಕಾಂಗ್​​ನಲ್ಲಿ ಕೊರೊನಾ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಅದು ಅಂತಾರಾಷ್ಟ್ರೀಯ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿದೆ. ಏರ್​ ಇಂಡಿಯಾ ವಿಮಾನಗಳ ಹಾರಾಟವನ್ನು ಏಪ್ರಿಲ್​ 24ರವರೆಗೆ ನಿರ್ಬಂಧಿಸಿದ್ದಾಗಿ ಅಲ್ಲಿನ ಸರ್ಕಾರ ಹೇಳಿತ್ತು

ಮಿತಿಮೀರಿದ ಕೊವಿಡ್ 19; ಹಾಂಗ್​ಕಾಂಗ್​​ಗೆ ವಿಮಾನ ಸಂಚಾರ ರದ್ದುಗೊಳಿಸಿದ ಏರ್​ಇಂಡಿಯಾ ವಿಮಾನಯಾನ ಸಂಸ್ಥೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Apr 18, 2022 | 10:57 AM

ಚೀನಾದ ಶಾಂಘೈ, ಹಾಂಗ್​ಕಾಂಗ್​​ಗಳಲ್ಲೆಲ್ಲ ಕೊವಿಡ್​ 19 ಸಿಕ್ಕಾಪಟೆ ಹೆಚ್ಚಿದೆ. ಸ್ಥಳೀಯವಾಗಿ ಕಠಿಣ ನಿರ್ಬಂಧ ಹೇರಲಾಗಿದೆ. ಈ ಮಧ್ಯೆ ಏರ್​ ಇಂಡಿಯಾ ವಿಮಾನ ಯಾನ ಸಂಸ್ಥೆ, ಹಾಂಗ್​​ಕಾಂಗ್​ಗೆ ಸಂಚಾರ ಮಾಡುತ್ತಿದ್ದ ವಿಮಾನಗಳನ್ನು ರದ್ದುಗೊಳಿಸಿದೆ. ಅಂದರೆ ಮುಂದಿನ ನಿರ್ಣಯದವರೆಗೆ ಹಾಂಗ್​​ಕಾಂಗ್​​ಗೆ ಏರ್​ ಇಂಡಿಯಾದ ಯಾವುದೇ ವಿಮಾನಗಳೂ ಸಂಚಾರ ಮಾಡುವುದಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಏರ್​ ಇಂಡಿಯಾ, ಹಾಂಗ್​ಕಾಂಗ್​ನಲ್ಲಿ ಕೊವಿಡ್​ 19 ಪ್ರಕರಣಗಳು ಹೆಚ್ಚಾಗಿರುವ ಕಾರಣ ಅಲ್ಲಿನ ಆಡಳಿತ ಕಠಿಣ ನಿರ್ಬಂಧಗಳನ್ನು ಹೇರಿದೆ.  ಹೀಗಾಗಿ ನಮ್ಮ ವಿಮಾನವೂ ಅಲ್ಲಿಗೆ ಸಂಚಾರ ಮಾಡುವುದಿಲ್ಲ ಎಂದು ಹೇಳಿದೆ.

ಹಾಂಗ್​ಕಾಂಗ್​​ನಲ್ಲಿ ಕೊರೊನಾ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಅದು ಅಂತಾರಾಷ್ಟ್ರೀಯ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿದೆ. ಏರ್​ ಇಂಡಿಯಾ ವಿಮಾನಗಳ ಹಾರಾಟವನ್ನು ಏಪ್ರಿಲ್​ 24ರವರೆಗೆ ನಿರ್ಬಂಧಿಸಿದ್ದಾಗಿ ಅಲ್ಲಿನ ಸರ್ಕಾರ ಹೇಳಿತ್ತು. ಅಷ್ಟೇ ಅಲ್ಲ, ಭಾರತದಿಂದ ಹಾಂಗ್​ಕಾಂಗ್​ಗೆ ಪ್ರವೇಶ ಮಾಡಬೇಕು ಎಂದರೆ 48 ಗಂಟೆಯ ಮೊದಲು ಕೊವಿಡ್​ 19  ತಪಾಸಣೆ ಮಾಡಿಸಬೇಕು. ಅದರ ವರದಿ ನೆಗೆಟಿವ್​ ಬಂದಿರಬೇಕು ಎಂದೂ ಹಾಂಗ್​ಕಾಂಗ್​ ಸರ್ಕಾರ ಹೇಳಿದೆ.

ಏಪ್ರಿಲ್​ 16ರಂದು ದೆಹಲಿಯಿಂದ ಕೋಲ್ಕತ್ತ ಮಾರ್ಗವಾಗಿ ಹಾಂಗ್​ ಕಾಂಗ್​ ತಲುಪಿದ್ದ ಏರ್​ ಇಂಡಿಯಾದ AI316 ವಿಮಾನದಲ್ಲಿ ಪ್ರಯಾಣಿಸಿದ್ದ ಮೂವರಲ್ಲಿ ಕೊರೊನಾ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಹಾಂಗ್​ಕಾಂಗ್ ಏರ್​ ಇಂಡಿಯಾ ಫ್ಲೈಟ್​ಗಳಿಗೆ ನಿರ್ಬಂಧ ವಿಧಿಸಿದೆ. ಜನವರಿಯಲ್ಲೂ ಕೂಡ ಭಾರತ ಸೇರಿ ಒಟ್ಟು 8 ದೇಶಗಳ ವಿಮಾನಗಳು ಹಾಂಗ್​ ಕಾಂಗ್​ ಪ್ರವೇಶ ಮಾಡುವುದನ್ನು ನಿರ್ಬಂಧಿಸಲಾಗಿತ್ತು.

ಇದನ್ನೂ ಓದಿ: ಜನ ತಿರಸ್ಕರಿಸಿದ ಪಕ್ಷಗಳಿಂದ ಇನ್ನೇನು ಮಾಡಲು ಸಾಧ್ಯ: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಜೆಪಿ ನಡ್ಡಾ

Published On - 9:50 am, Mon, 18 April 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ