Air India Express ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಸುಟ್ಟ ವಾಸನೆ; ದುಬೈಗೆ ಹೊರಟಿದ್ದ ವಿಮಾನ ಮಸ್ಕತ್ನಲ್ಲಿ ಸುರಕ್ಷಿತ ಲ್ಯಾಂಡಿಂಗ್
ವಿಮಾನದ ಕಿಟಕಿ ಭಾಗದಿಂದ ಈ ಸುಟ್ಟ ವಾಸನೆ ಬಂದಿದ್ದು, ಪೈಲಟ್ ತಕ್ಷಣವೇ ವಿಮಾನವನ್ನು ಮಸ್ಕತ್ಗೆ ಡೈವರ್ಟ್ ಮಾಡಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.
ಕ್ಯಾಲಿಕಟ್ನಿಂದ ದುಬೈಗೆ ಹೊರಟಿದ್ದ ಏರ್ಇಂಡಿಯಾ ಎಕ್ಸ್ಪ್ರೆಸ್ ( Air India Express) ವಿಮಾನದಲ್ಲಿ ಸುಟ್ಟ ವಾಸನೆ ಬಂದಿದ್ದು ಆ ವಿಮಾನ ಮಾರ್ಗ ಬದಲಿಸಿ ಮಸ್ಕತ್ಗೆ ಪಯಣ ಬೆಳೆಸಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ. ವಿಮಾನದ ಕಿಟಕಿ ಭಾಗದಿಂದ ಈ ಸುಟ್ಟ ವಾಸನೆ ಬಂದಿದ್ದು, ಪೈಲಟ್ ತಕ್ಷಣವೇ ವಿಮಾನವನ್ನು ಮಸ್ಕತ್ಗೆ ಡೈವರ್ಟ್ ಮಾಡಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ. ಪೈಲಟ್ ಕಡೆಗಿರುವ ಕಿಟಕಿಯೊಂದರಿಂದ ಸುಟ್ಟ ವಾಸನೆ ಬರುತ್ತಿತ್ತು. ತಕ್ಷಣವೇ ಪೈಲಟ್ ವಿಮಾನವನ್ನು ಮಸ್ಕತ್ ಗೆ ತಿರುಗಿಸಿ ಅಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಭಾನುವಾರ ಹೇಳಿದೆ. ಈ ಬಗ್ಗೆ ಡಿಜಿಸಿಎ ತನಿಖೆ ನಡೆಸುತ್ತಿದೆ.
Air India Express aircraft VT-AXX operating flight IX-355 (Calicut-Dubai) diverted to Muscat as during Cruise, a burning smell emitted from one of the vents in the forward galley: DGCA
— ANI (@ANI) July 17, 2022
ಇನ್ನೊಂದು ಘಟನೆಯಲ್ಲಿ ಇಂಡಿಗೊದ ಶಾರ್ಜಾ- ಹೈದರಾಬಾದ್ ವಿಮಾನದಲ್ಲಿನ ಎಂಜಿನ್ನಲ್ಲಿ ತಾಂತ್ರಿಕ ದೋಷವೊಂದು ಕಂಡುಬಂದ ಹಿನ್ನಲೆಯಲ್ಲಿ ಆ ವಿಮಾನವನ್ನು ಕರಾಚಿಗೆ ಡೈವರ್ಟ್ ಮಾಡಲಾಗಿದೆ. ಈ ಬಗ್ಗೆಯೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತನಿಖೆ ನಡೆಸಲಿದೆ. ಶಾರ್ಜಾದಿಂದ ಹೈದರಾಬಾದ್ ಗೆ ಬರುತ್ತಿದ್ದ ಇಂಡಿಗೊ ವಿಮಾನ 6E-1406ವನ್ನು ಕರಾಚಿಗೆ ಡೈವರ್ಟ್ ಮಾಡಲಾಗಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದದ್ದು ಪೈಲಟ್ ಗಮನಕ್ಕೆ ಬಂದಿತ್ತು ಎಂದು ಇಂಡಿಗೊ ಹೇಳಿಕೆ ತಿಳಿಸಿದೆ. ತಕ್ಷಣವೇ ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ಕರಾಚಿಗೆ ತಿರುಗಿಸಲಾಯಿತು ಎಂದು ಅದು ಹೇಳಿದೆ.
Published On - 3:01 pm, Sun, 17 July 22