ಪ್ರಯಾಣಿಕರೊಬ್ಬರ ಕಾಲ ಮೇಲೆ ಬಿಸಿ ನೀರು ಚೆಲ್ಲಿ ಚರ್ಮ ಕಿತ್ತು ಬಂದರೂ ಹಿಂದಿರುಗಿ ನೋಡದ ಏರ್ ಇಂಡಿಯಾ ಸಿಬ್ಬಂದಿ
ಪ್ರಯಾಣಿಕರೊಬ್ಬರ ಕಾಲಿನ ಮೇಲೆ ಬಿಸಿ ನೀರು ಚೆಲ್ಲಿ, ಚರ್ಮ ಕಿತ್ತು ಬಂದರೂ ಏರ್ ಇಂಡಿಯಾ(Air India) ಸಿಬ್ಬಂದಿ ಹಿಂದಿರುಗಿ ನೋಡಲಿಲ್ಲ. ದೆಹಲಿಯಿಂದ ಸ್ಯಾನ್ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಪ್ರಯಾಣಿಕರೊಬ್ಬರ ಕಾಲ ಮೇಲೆ ಸಿಬ್ಬಂದಿ ಬಿಸಿ ನೀರು ಚೆಲ್ಲಿದ್ದಾರೆ, ಉರಿ ಉರಿ ಎಂದು ಕೂಗುತ್ತಿದ್ದರೂ ಮಹಿಳಾ ಪ್ರಯಾಣಿಕರನ್ನು ಸರಿಯಾಗಿ ಉಪಚರಿಸದೇ ಇದ್ದಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಸಿ ನೀರು ಚೆಲ್ಲಿದ್ದ ಕಾರಣ ಚರ್ಮ ಕಿತ್ತು ಬಂದಿತ್ತು, ಎಕ್ಸ್ನಲ್ಲಿ ಈ ಕುರಿತು ಚಾರು ತೋಮರ್ ಎಂಬುವವರು ಮಾಹಿತಿ ಹಂಚಿಕೊಂಡಿದ್ದಾರೆ, ಸಿಬ್ಬಂದಿಗೆ ತರಬೇತಿ ಕೊರತೆ ಇರಬಹುದು ಎಂದು ಹೇಳಿದ್ದಾರೆ. ಮಹಿಳೆಯು 4 ವರ್ಷದ ಮಗ ಹಾಗೂ 83 ವರ್ಷದ ಅತ್ತೆ ಜತೆ ಪ್ರಯಾಣಿಸುತ್ತಿದ್ದರು, ಅಟೆಂಡೆಂಟ್ ಕಾಳಿನ ಮೇಲೆ ಬಿಸಿ ನೀರು ಚೆಲ್ಲಿದ ಕಾರಣ ಸುಟ್ಟ ಗಾಯಗಳಾಗಿತ್ತು. ಏರ್ ಈ ಕುರಿತು ಪ್ರಯಾಣಿಕರ ಬಳಿ ಕ್ಷಮೆಯಾಚಿಸಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದೆ.
ನೋವು ಕಡಿಮೆ ಮಾಡಲು ಏನಾದರೂ ನೀಡಿ ಎಂದು ಎಷ್ಟೇ ಮನವಿ ಮಾಡಿಕೊಂಡರೂ ಸಿಬ್ಬಂದಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ವಿಮಾನದಲ್ಲಿದ್ದ ವೈದ್ಯರು ಆಕೆಗೆ ಸಹಾಯ ಮಾಡಿದರು, ವಿಮಾನದಲ್ಲಿ ಅಗತ್ಯ ವೈದ್ಯಕೀಯ ಸಾಮಗ್ರಿಗಳ ಕೊರತೆಯನ್ನು ಹೊಂದಿತ್ತು. ಪ್ರಥಮ ಚಿಕಿತ್ಸಾ ಕಿಟ್ ಕೂಡ ಲಭ್ಯವಿರಲಿಲ್ಲ. ಎರಡು ಗಂಟೆಗಳ ಕಾಲ ತೀವ್ರ ನೋವು ಅನುಭವಿಸಿದೆ ಎಂದು ಹೇಳಿಕೊಂಡಿದ್ದಾರೆ.
ಮತ್ತಷ್ಟು ಓದಿ: Air India: ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೆಲವೇ ಗಂಟೆಗಳಲ್ಲಿ ಕೇರಳಕ್ಕೆ ವಾಪಸ್
ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಲ್ಯಾಂಡ್ ಆದ ನಂತರವೂ ಎರ್ ಇಂಡಿಯಾ ವಿಮಾನ ಸಿಬ್ಬಂದಿ ಯಾವುದೇ ಸಹಾಯ ಮಾಡಲಿಲ್ಲ, ಅವರಿಗೆ ನನ್ನನ್ನು ಉಪಚರಿಸುವುದಕ್ಕಿಂತ ಲ್ಯಾಂಡಿಂಗ್ಗೆ ಸಿದ್ಧತೆ ಮಾಡಿಕೊಳ್ಳುವುದೇ ಹೆಚ್ಚಾಗಿತ್ತು ಎಂದಿದ್ದಾರೆ. ಇಷ್ಟೆಲ್ಲಾ ನಡೆದರೂ ಸಿಬ್ಬಂದಿ ಆರೈಕೆ ಮಾಡುವ ಬದಲು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು ಎಂದು ಮಹಿಳೆ ದೂರಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:48 am, Fri, 29 September 23