ಭಾರತದ ಮೊದಲ ದೇಶೀಯ ವಿಮಾನ ವಾಹಕ ಯುದ್ಧನೌಕೆ (Indigenous Aircraft Carrier (IAC) ವಿಕ್ರಾಂತ್ (Vikrant) ಐದು ದಿನಗಳ ಪರೀಕ್ಷಾರ್ಥ ಸಂಚಾರ ಮುಗಿಸಿ ಹಿಂದಿರುಗಿದೆ. 40,000 ಟನ್ ಯುದ್ಧನೌಕೆಯ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲು, ಐದು ದಿನಗಳ ಸಮುದ್ರ ಪ್ರಯೋಗ (Sea Trial) ಕಳೆದ ಬುಧವಾರದಿಂದ ಪ್ರಾರಂಭವಾಗಿತ್ತು. ಅಂದಾಜು 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಿಕ್ರಾಂತ್ ಯುದ್ಧನೌಕೆ (Vikrant Aircraft Carrier)ಯನ್ನು ತಯಾರಿಸಲಾಗಿದೆ. ಈ ಸ್ವದೇಶಿ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ ಮುಂದಿನ ವರ್ಷ ಆಗಸ್ಟ್ನಿಂದ ಭಾರತೀಯ ನೌಕಾಪಡೆಯನ್ನು ಸೇರಲಿದೆ.
ಈ ಯುದ್ಧ ನೌಕೆಯೀಗ ಯಶಸ್ವಿಯಾಗಿ ಪರೀಕ್ಷಾರ್ಥ ಸಂಚಾರವನ್ನು ಪೂರ್ಣಗೊಳಿಸಿದೆ. ಇದು ಭಾರತದ ಪಾಲಿಗೆ ಐತಿಹಾಸಿಕ ದಿನ ಎಂದು ಉಪ ನೌಕಾ ಸೇನಾಪತಿ ಎ.ಕೆ.ಚಾವ್ಲಾ ತಿಳಿಸಿದ್ದಾರೆ. ಯುದ್ಧನೌಕೆಯ ಐದು ದಿನಗಳ ಪ್ರಯೋಗದ ನಂತರ ನಾವೀಗ ಕೊಚ್ಚಿಗೆ ವಾಪಸ್ ಆಗುತ್ತಿದ್ದೇವೆ. ನಮಗೀಗ ಸಂಪೂರ್ಣ ತೃಪ್ತಿಯಿದೆ. ಇಡೀ ತಂಡದ ಶ್ರಮದಿಂದ ಇಂಥದ್ದೊಂದು ಮಹತ್ವದ ಕಾರ್ಯ ಸಾಧಿಸಲು ಸಾಧ್ಯವಾಗಿದೆ ಎಂದು ಎ.ಕೆ.ಚಾವ್ಲಾ ತಿಳಿಸಿದ್ದಾರೆ.
ಯುದ್ಧ ನೌಕೆಯ ಸಿಸ್ಟಂ ಪ್ಯಾರಾಮೀಟರ್ಗಳು ತೃಪ್ತಿದಾಯಕವಾಗಿ ಕೆಲಸ ಮಾಡುತ್ತಿವೆ. ನೌಕೆಯ ಒಟ್ಟಾರೆ ಕಾರ್ಯಕ್ಷಮತೆ, ಹಲ್, ವಿದ್ಯುತ್ ಉತ್ಪಾದನೆ, ಪೂರೈಕೆ ಸೇರಿ ಎಲ್ಲ ವಿಭಾಗಗಳನ್ನೂ ಪ್ರಯೋಗ ಹಂತದಲ್ಲಿ ಪರೀಕ್ಷಿಸಲಾಗಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ. ಈ ಯುದ್ಧನೌಕೆ 262 ಮೀಟರ್ ಉದ್ದವಾಗಿದ್ದು, 62 ಮೀಟರ್ ಅಗಲವಾಗಿದೆ. 59 ಮೀಟರ್ ಎತ್ತರವಿದೆ. ಒಟ್ಟಾರೆ 14 ಡೆಕ್ಗಳಿವೆ.
ಇದನ್ನೂ ಓದಿ: ಬಿಗ್ ಬಾಸ್ ಗೆದ್ದ ಮಂಜುಗೆ ವೆಲ್ಕಮ್ ಹೇಗಿತ್ತು? ಇಲ್ಲಿದೆ ವಿಡಿಯೋ
Senior Citizens Fixed Deposits: ಹಿರಿಯ ನಾಗರಿಕರಿಗೆ ಶೇ 7.25ರ ತನಕ ಬಡ್ಡಿ ದರ ನೀಡುವ ಟಾಪ್ 5 ಬ್ಯಾಂಕ್ಗಳಿವು
Published On - 12:54 pm, Mon, 9 August 21