Senior Citizens Fixed Deposits: ಹಿರಿಯ ನಾಗರಿಕರಿಗೆ ಶೇ 7.25ರ ತನಕ ಬಡ್ಡಿ ದರ ನೀಡುವ ಟಾಪ್ 5 ಬ್ಯಾಂಕ್​ಗಳಿವು

ಹಿರಿಯ ನಾಗರಿಕರಿಗೆ ಶೇ 7.25ರ ತನಕ ಬಡ್ಡಿ ದರವನ್ನು ಒದಗಿಸುವ ಟಾಪ್ 5 ಸಣ್ಣ ಖಾಸಗಿ ಬ್ಯಾಂಕ್​ಗಳು, ಸಣ್ಣ ಹಣಕಾಸು ಬ್ಯಾಂಕ್​ಗಳ ವಿವರ ಇಲ್ಲಿದೆ.

Senior Citizens Fixed Deposits: ಹಿರಿಯ ನಾಗರಿಕರಿಗೆ ಶೇ 7.25ರ ತನಕ ಬಡ್ಡಿ ದರ ನೀಡುವ ಟಾಪ್ 5 ಬ್ಯಾಂಕ್​ಗಳಿವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 09, 2021 | 12:16 PM

ಹಿರಿಯ ನಾಗರಿಕರಿಗೆ ತಮ್ಮ ಹೂಡಿಕೆಗೆ ನಿಶ್ಚಿತ ಆದಾಯ ಬರಬೇಕು ಎಂಬ ನಿರೀಕ್ಷೆ ಇರುತ್ತದೆ. ಅದರ ಜತೆಗೇ ಏನೋ ತುರ್ತು ಅಗತ್ಯ ಅಂದರೆ ಅದಕ್ಕೆ ತಕ್ಷಣವೇ ಹಣ (ನಗದು) ಸಿಗುವಂತಿರಬೇಕು ಎಂದಿರುತ್ತದೆ. ಈ ಎರಡೂ ಕಾರಣಗಳಿಂದಲೋ ಏನೋ ಫಿಕ್ಸೆಡ್​ ಡೆಪಾಸಿಟ್​ಗಳ ಬಡ್ಡಿ ದರವು ಬೀಳುತ್ತಾ ಇದ್ದರೂ ಸಣ್ಣ ಖಾಸಗಿ ಹಾಗೂ ಸಣ್ಣ ಹಣಕಾಸು ಬ್ಯಾಂಕ್​ಗಳು ಮೂರು ವರ್ಷದ ಅವಧಿಯ ಎಫ್​.ಡಿ.ಗೆ ಹಿರಿಯ ನಾಗರಿಕರಿಗೆ ಶೇ 7.25ರ ತನಕ ಬಡ್ಡಿ ದರವನ್ನು ನೀಡುತ್ತಾ ಬಂದಿವೆ. ಈ ಬಡ್ಡಿ ದರಗಳ ಲೆಕ್ಕಾಚಾರದ ಮಾಹಿತಿಯನ್ನು ಬ್ಯಾಂಕ್​ಬಜಾರ್​ನಿಂದ ಒಟ್ಟು ಮಾಡಿದ್ದು, ಉತ್ತಮ ಬಡ್ಡಿ ದರ ನೀಡುವ ಟಾಪ್ 5 ಬ್ಯಾಂಕ್​ಗಳ ವಿವರ ಇಲ್ಲಿದೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವರ್ಷದ ಅವಧಿಗೆ ಹಿರಿಯ ನಾಗರಿಕರಿಗೆ ಈ ಬ್ಯಾಂಕ್​ನಿಂದ ವಾರ್ಷಿಕ ಶೇ 7.25ರ ಬಡ್ಡಿ ದರ ದೊರೆಯುತ್ತದೆ. ಸಣ್ಣ ಹಣಕಾಸು ಬ್ಯಾಂಕ್​ಗಳಲ್ಲಿಯೇ ಈ ಬ್ಯಾಂಕ್ ಅತ್ಯುತ್ತಮ ಬಡ್ಡಿ ದರವನ್ನು ಆಫರ್ ಮಾಡುತ್ತದೆ. 1 ಲಕ್ಷ ರೂಪಾಯಿ ಇಟ್ಟಲ್ಲಿ ಮೂರು ವರ್ಷಕ್ಕೆ 1.24 ಲಕ್ಷ ರೂಪಾಯಿ ಆಗುತ್ತದೆ. ಕನಿಷ್ಠ ಹೂಡಿಕೆ 1000 ರೂಪಾಯಿ.

ಡಿಸಿಬಿ ಬ್ಯಾಂಕ್ ಮತ್ತು ಯೆಸ್​ ಬ್ಯಾಂಕ್ ಈ ಎರಡೂ ಬ್ಯಾಂಕ್​ನಿಂದ ಹಿರಿಯ ನಾಗರಿಕರಿಗೆ ಮೂರು ವರ್ಷದ ಅವಧಿಗೆ ಶೇ 7ರಷ್ಟು ಬಡ್ಡಿ ದೊರೆಯುತ್ತದೆ. ರೂ. 1 ಲಕ್ಷ ಹೂಡಿಕೆ ಮಾಡಿದಲ್ಲಿ ಮೂರು ವರ್ಷದ ನಂತರ 1.23 ಲಕ್ಷ ರೂಪಾಯಿ ಸಿಗುತ್ತದೆ. ಕನಿಷ್ಠ ಹೂಡಿಕೆ 10,000 ರೂಪಾಯಿ.

ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 3 ವರ್ಷದ ಅವಧಿಗೆ ಶೇ 6.85ರಷ್ಟು ಬಡ್ಡಿ ದರ ನೀಡುತ್ತದೆ. ಇದರಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದಲ್ಲಿ ಮೂರು ವರ್ಷದ ನಂತರ ರೂ. 1.22 ಲಕ್ಷ ಸಿಗುತ್ತದೆ.

ಆರ್​ಬಿಎಲ್​ ಬ್ಯಾಂಕ್ ಆರ್​ಬಿಎಲ್​ ಬ್ಯಾಂಕ್​ನಿಂದ ಶೇ 6.80 ನೀಡಲಾಗುತ್ತದೆ. ಹಿರಿಯ ನಾಗರಿಕರು ಇದರಲ್ಲಿ 1 ಲಕ್ಷ ರೂಪಾಯಿ ಹೂಡಿದಲ್ಲಿ ಮೂರು ವರ್ಷದಲ್ಲಿ ರೂ. 1.22 ಲಕ್ಷ ಆಗುತ್ತದೆ.

ಸಣ್ಣ ಖಾಸಗಿ ಬ್ಯಾಂಕ್​ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್​ಗಳು ಹೊಸದಾಗಿ ಠೇವಣಿದಾರರನ್ನು ಸೆಳೆಯಲು ಹೆಚ್ಚಿನ ಬಡ್ಡಿದರ ಆಫರ್ ಮಾಡಲಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಗ ಸಂಸ್ಥೆಯಾದ ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) 5 ಲಕ್ಷ ರೂಪಾಯಿ ತನಕದ ಫಿಕ್ಸೆಡ್​ ಡೆಪಾಸಿಟ್ಸ್​ಗೆ ಗ್ಯಾರಂಟಿ ಒದಗಿಸುತ್ತದೆ.

ಇದನ್ನೂ ಓದಿ: Fixed Deposit Benefits: 3ರಿಂದ 5 ವರ್ಷದ ಅವಧಿಯ ಎಫ್​ಡಿ ಮೇಲೆ ಉತ್ತಮ ಬಡ್ಡಿ ನೀಡುವ ಟಾಪ್ 10 ಬ್ಯಾಂಕ್​ಗಳಿವು

(Top 5 Banks Which Are Providing Up to 7.25 Percent Interest On Fixed Deposits For Senior Citizens)