ಕೊರೊನಾಗೆ ಹೆದರಿ, ವಿಮಾನಗಳಲ್ಲಿ ಮಧ್ಯೆ ಸೀಟ್ ಖಾಲಿ ಬಿಡೋದು ಬೇಡ -ಸುಪ್ರೀಂಕೋರ್ಟ್​

ದೆಹಲಿ: ಭಾರತದಲ್ಲಿ ಹೆಜ್ಜೆಯೂರಿರೋ ಕ್ರೂರಿ ಕೊರೊನಾ ವೈರಸ್​ ದಿನೇ ದಿನೇ ತನ್ನ ಉಗ್ರರೂಪ ತೋರಿಸ್ತಿದೆ. ಕಂಡ ಕಂಡವರನೆಲ್ಲಾ ತನ್ನ ತೆಕ್ಕೆಗೆ ಬಾಚಿಕೊಳ್ತಿದೆ. ಕ್ಷಣ ಕ್ಷಣಕ್ಕೂ ಸೋಂಕಿನ ಸುನಾಮಿ ಏರ್ತಾನೆ ಇದ್ದು ಇಡೀ ದೇಶವೇ ಕಂಗೆಟ್ಟು ಕೂತಿದೆ. ಏರ್​ಲೈನ್ಸ್​ಗಳಿಗೆ ಸುಪ್ರೀಂ ರಿಲೀಫ್ ಈ ಮಧ್ಯೆ ದೇಶದ ಏರ್​ಲೈನ್ಸ್​ಗಳಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ. ವಿಮಾನಗಳಲ್ಲಿ ಮಧ್ಯೆ ಸೀಟು ಖಾಲಿ‌ ಬಿಡುವ ಅಗತ್ಯವಿಲ್ಲ ಎಂದು ಮಹತ್ವದ ಆದೇಶ ನೀಡಿ, ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಈ ಸಂಬಂಧ […]

ಕೊರೊನಾಗೆ ಹೆದರಿ, ವಿಮಾನಗಳಲ್ಲಿ ಮಧ್ಯೆ ಸೀಟ್ ಖಾಲಿ ಬಿಡೋದು ಬೇಡ -ಸುಪ್ರೀಂಕೋರ್ಟ್​
ಸಾಧು ಶ್ರೀನಾಥ್​

Updated on: Jun 26, 2020 | 5:32 PM

ದೆಹಲಿ: ಭಾರತದಲ್ಲಿ ಹೆಜ್ಜೆಯೂರಿರೋ ಕ್ರೂರಿ ಕೊರೊನಾ ವೈರಸ್​ ದಿನೇ ದಿನೇ ತನ್ನ ಉಗ್ರರೂಪ ತೋರಿಸ್ತಿದೆ. ಕಂಡ ಕಂಡವರನೆಲ್ಲಾ ತನ್ನ ತೆಕ್ಕೆಗೆ ಬಾಚಿಕೊಳ್ತಿದೆ. ಕ್ಷಣ ಕ್ಷಣಕ್ಕೂ ಸೋಂಕಿನ ಸುನಾಮಿ ಏರ್ತಾನೆ ಇದ್ದು ಇಡೀ ದೇಶವೇ ಕಂಗೆಟ್ಟು ಕೂತಿದೆ.

ಏರ್​ಲೈನ್ಸ್​ಗಳಿಗೆ ಸುಪ್ರೀಂ ರಿಲೀಫ್
ಈ ಮಧ್ಯೆ ದೇಶದ ಏರ್​ಲೈನ್ಸ್​ಗಳಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ. ವಿಮಾನಗಳಲ್ಲಿ ಮಧ್ಯೆ ಸೀಟು ಖಾಲಿ‌ ಬಿಡುವ ಅಗತ್ಯವಿಲ್ಲ ಎಂದು ಮಹತ್ವದ ಆದೇಶ ನೀಡಿ, ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

ಈ ಸಂಬಂಧ ಡಿಜಿಸಿಎಯಿಂದ ಸುಪ್ರೀಂಕೋರ್ಟ್​ಗೆ ತಜ್ಞರ ಸಮಿತಿಯ ವರದಿ ಸಲ್ಲಿಕೆ ಮಾಡಲಾಗಿದೆ. ಆದಾಗ್ಯೂ, ವಿಮಾನಗಳಲ್ಲಿ ಸುರಕ್ಷತೆ, ಆರೋಗ್ಯ ಕಾಪಾಡಲು ಮುನ್ನೆಚ್ಚರಿಕೆಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ಶಿಫಾರಸು ಮಾಡಲಾಗಿದೆ.

Published On - 5:18 pm, Fri, 26 June 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us