Video: ಮೊಬೈಲ್​ ಸ್ವಿಚ್​ ಆಫ್​ ಮಾಡ್ರಿ; ಜೈಲುಪಾಲಾದ ಪುತ್ರನ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾಧ್ಯಮ ಸಿಬ್ಬಂದಿಯನ್ನು ನಿಂದಿಸಿದ ಕೇಂದ್ರ ಸಚಿವ ಅಜಯ್​ ಮಿಶ್ರಾ !

| Updated By: Lakshmi Hegde

Updated on: Dec 15, 2021 | 4:36 PM

ಅಜಯ್​ ಮಿಶ್ರ ಉದ್ಘಾಟನೆ ಮಾಡಲಿರುವ ಕಾರ್ಯಕ್ರಮದ ಬಗ್ಗೆ ಕೇಳಿದೆ. ಅದಾದ ಬಳಿಕ ನಿಮ್ಮ ಪುತ್ರನ ಪ್ರಕರಣದ ಡೆವಲೆಪ್​ಮೆಂಟ್ ಏನಿದೆ ಎಂದು ಪ್ರಶ್ನಿಸಿದೆ. ಆಗ ಸಚಿವರು ಬೈದರು ಎಂದು ಪತ್ರಕರ್ತ ಹೇಳಿದ್ದಾರೆ. ಅದನ್ನೊಂದು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.

Video: ಮೊಬೈಲ್​ ಸ್ವಿಚ್​ ಆಫ್​ ಮಾಡ್ರಿ; ಜೈಲುಪಾಲಾದ ಪುತ್ರನ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾಧ್ಯಮ ಸಿಬ್ಬಂದಿಯನ್ನು ನಿಂದಿಸಿದ ಕೇಂದ್ರ ಸಚಿವ ಅಜಯ್​ ಮಿಶ್ರಾ !
ಅಜಯ್​ ಮಿಶ್ರಾ ತೇನಿ
Follow us on

ಲಖಿಂಪುರ ಖೇರಿ ಹಿಂಸಾಚಾರ (Lakhimpur Kheri Violence) ಪ್ರಕರಣದಲ್ಲಿ ಜೈಲು ಸೇರಿರುವ ಪುತ್ರನ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತರನ್ನು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್​ ಮಿಶ್ರಾ ತೇನಿ (Union Minister Ajay Minister) ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋ ಕೂಡ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅಜಯ್​ ಮಿಶ್ರಾ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ, ಸಮಾರಂಭವೊಂದನ್ನು ಉದ್ಘಾಟನೆ ಮಾಡಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸಚಿವರನ್ನು ಕಂಡ ತಕ್ಷಣ ಪತ್ರಕರ್ತರು ತೀರ ಸಹಜವಾಗಿ, ಲಖಿಂಪುರ ಖೇರಿ ಹಿಂಸಾಚಾರ, ಆಶೀಶ್​ ಮಿಶ್ರಾ (Ashish Mishra) ಬಂಧನದ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಉತ್ತರ ಹೇಳದೆ, ಕಿರಿಕಿರಿಗೊಂಡ ಸಚಿವರು ಮಾಧ್ಯಮದವರನ್ನೇ ನಿಂದಿಸಿದ್ದಾರೆ. 

ಪತ್ರಕರ್ತನೊಬ್ಬ ಅಜಯ್​ ಮಿಶ್ರಾ ತೇನಿ ಬಳಿ ಪ್ರಶ್ನೆ ಮಾಡಿದ್ದೇ ತಡ, ‘ನಾಚಿಕೆಯೇನೂ ಇಲ್ಲ, ಆರೋಪಿಯನ್ನು ಜೈಲಿಗೆ ಕಳಿಸಿದ ಮಾಧ್ಯಮದವರೇ ದೊಡ್ಡ ಕಳ್ಳರು. ನಿಮ್ಮ ಮೊಬೈಲ್​ಗಳನ್ನು ಸ್ವಿಚ್​ ಆಫ್​ ಮಾಡಿಕೊಳ್ಳಿ. ಈಗ ನಿಮಗೇನು ಹೇಳಬೇಕು’ ಎಂದು ಸಚಿವರು ಕಿಡಿಕಾರಿದ್ದು ವಿಡಿಯೋದಲ್ಲಿ ಕೇಳಿಸುತ್ತದೆ. ಹಾಗೇ, ಈ ವಿಡಿಯೋ ತುಂಬ ವೈರಲ್ ಆಗುತ್ತಿದೆ. ಅದರೊಂದಿಗೆ ಪ್ರಶ್ನೆ ಕೇಳಿ, ಸಚಿವರ ಬಳಿ ನಿಂದನೆಗೆ ಒಳಗಾದ ಪತ್ರಕರ್ತ ಒಂದು ವಿಡಿಯೋ ಮೆಸೇಜ್​ನ್ನು ವೈರಲ್ ಮಾಡಿದ್ದಾರೆ.  ಅಜಯ್​ ಮಿಶ್ರ ಉದ್ಘಾಟನೆ ಮಾಡಲಿರುವ ಕಾರ್ಯಕ್ರಮದ ಬಗ್ಗೆ ಕೇಳಿದೆ. ಅದಾದ ಬಳಿಕ ನಿಮ್ಮ ಪುತ್ರನ ಪ್ರಕರಣದ ಡೆವಲೆಪ್​ಮೆಂಟ್ ಏನಿದೆ ಎಂದು ಪ್ರಶ್ನಿಸಿದೆ. ಆಗ ಸಚಿವರು ಬೈದರು. ಇದೊಂದು ಮೂರ್ಖತನದ ಪ್ರಶ್ನೆ ಎಂದು ನಮ್ಮೆಲ್ಲರನ್ನೂ ನಿಂದಿಸಿದರು ಎಂದು ಹೇಳಿಕೊಂಡಿದ್ದಾರೆ.

ಅಕ್ಟೋಬರ್​ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮೌನವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶೀಶ್​ ಮಿಶ್ರಾ ಬೆಂಗಾವಲು ವಾಹನ ಹರಿದಿತ್ತು. ಆ ವಾಹನದಲ್ಲಿ ಆಶೀಶ್​ ಮಿಶ್ರಾ ಕೂಡ ಇದ್ದರು ಎಂಬುದನ್ನು ಪ್ರತ್ಯಕ್ಷದರ್ಶಿಗಳು ಹೇಳಿದ್ದರು. ನಂತರ ಅವರನ್ನು ಬಂಧಿಸಲಾಗಿತ್ತು. ಸದ್ಯ ಆಶೀಶ್​ ಮಿಶ್ರಾ ಜೈಲಿನಲ್ಲಿಯೇ ಇದ್ದಾರೆ. ಇದೊಂದು ಪೂರ್ವನಿಯೋಜಿತ ಸಂಚು ಎಂದು ತನಿಖಾಧಿಕಾರಿಗಳೂ ಹೇಳಿದ್ದಾರೆ.  ಆಶೀಶ್​ ಮಿಶ್ರಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರಿಂದ ಅಜಯ್​ ಮಿಶ್ರಾರನ್ನು ವಜಾಗೊಳಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹ ಮಾಡುತ್ತಿವೆ. ಈಗಂತೂ ಇದು ಪಿತೂರಿ ಎಂದು ತನಿಖಾಧಿಕಾರಿಗಳು ಹೇಳಿದ ಮೇಲೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಇದೇ ಆಗ್ರಹವನ್ನು ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ಒಂದೊಂದೇ ರಾಜ್ಯವಾಗಿ ವ್ಯಾಪಿಸುತ್ತಿದೆ ಒಮಿಕ್ರಾನ್​ ವೈರಾಣು; ಪಶ್ಚಿಮ ಬಂಗಾಳದಲ್ಲಿ 7ವರ್ಷದ ಬಾಲಕನಿಗೆ ಸೋಂಕು

Published On - 4:35 pm, Wed, 15 December 21