ಗಾಢಗೊಳ್ಳುತ್ತಿರುವ ಭಾರತ-ಫ್ರಾನ್ಸ್ ಮಿಲಿಟರಿ ಸಂಬಂಧ; ನ್ಯೂಕ್ಲಿಯಾರ್ ಅಟ್ಯಾಕ್ ಸಬ್​ಮರೀನ್, ನೀರೊಳಗಿನ ಡ್ರೋನ್ ಇತ್ಯಾದಿ ಶಸ್ತ್ರಾಸ್ತ್ರಗಳ ತಯಾರಿಕೆ ಬಗ್ಗೆ ಸದ್ಯದಲ್ಲೇ ಮಾತುಕತೆ

|

Updated on: Sep 23, 2024 | 12:38 PM

Ajit Doval visit to France next week: ಭಾರತದ ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ಅಜಿತ್ ದೋವಲ್ ಮುಂದಿನ ವಾರ ಫ್ರಾನ್ಸ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅಲ್ಲಿನ ಪ್ರಧಾನಿ ಇಮ್ಯಾನುಯಲ್ ಮ್ಯಾಕ್ರೋನ್, ರಾಜತಾಂತ್ರಿಕ ಸಲಹೆಗಾರ ಇಮ್ಯಾನುಯಲ್ ಬೋನ್ನೆ, ರಕ್ಷಣಾ ಸಚಿವ ಸೆಬಾಸ್ಟಿಯನ್ ಲೀಕೊರ್ಲು ಮೊದಲಾದವರನ್ನು ದೋವಲ್ ಭೇಟಿ ಮಾಡಲಿದ್ದಾರೆ. ಭಾರತ ಮತ್ತು ಫ್ರಾನ್ಸ್ ಮಿಲಿಟರಿ ಸಂಬಂಧ ಒಂದು ಹಂತ ಮೇಲೆ ಹೋಗುವ ಸಾಧ್ಯತೆ ಇದೆ.

ಗಾಢಗೊಳ್ಳುತ್ತಿರುವ ಭಾರತ-ಫ್ರಾನ್ಸ್ ಮಿಲಿಟರಿ ಸಂಬಂಧ; ನ್ಯೂಕ್ಲಿಯಾರ್ ಅಟ್ಯಾಕ್ ಸಬ್​ಮರೀನ್, ನೀರೊಳಗಿನ ಡ್ರೋನ್ ಇತ್ಯಾದಿ ಶಸ್ತ್ರಾಸ್ತ್ರಗಳ ತಯಾರಿಕೆ ಬಗ್ಗೆ ಸದ್ಯದಲ್ಲೇ ಮಾತುಕತೆ
ಅಜಿತ್ ದೋವಲ್
Follow us on

ನವದೆಹಲಿ, ಸೆಪ್ಟೆಂಬರ್ 23: ಭಾರತದ ವಿಶ್ವಾಸಾರ್ಹ ಗೆಳೆತನ ಹೊಂದಿರುವ ದೇಶಗಳಲ್ಲಿ ಫ್ರಾನ್ಸ್ ಒಂದು. ಎರಡು ದೇಶಗಳ ಮಿಲಿಟರಿ ಸಂಬಂಧ ದಿನೇ ದಿನೇ ಗಾಢವಾಗುತ್ತಿದೆ. ಇದೀಗ ಈ ಸಂಬಂಧ ಮತ್ತೊಂದು ಹಂತ ಮೇಲೇರಲು ಎಲ್ಲಾ ಸಿದ್ಧತೆ ನಡೆದಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸೆಪ್ಟೆಂಬರ್ 30ರಿಂದ ಎರಡು ದಿನಗಳ ಕಾಲ ಫ್ರಾನ್ಸ್ ಪ್ರವಾಸ ಮಾಡುತ್ತಿದ್ದಾರೆ. ಈ ವೇಳೆ, ಫ್ರಾನ್ಸ್​ನ ರಾಜತಾಂತ್ರಿಕ ಸಲಹೆಗಾರ ಇಮ್ಯಾನುಯಲ್ ಬೋನ್ನೆ ಅವರೊಂದಿಗೆ ಹಲವು ವಿಚಾರಗಳ ಬಗ್ಗೆ ದೋವಲ್ ಮಾತುಕತೆ ನಡೆಸಲಿದ್ದಾರೆ.

ಪರಮಾಣು ದಾಳಿ ಸಾಮರ್ಥ್ಯದ ಸಬ್​ಮರೀನ್​ಗಳನ್ನು ಭಾರತಕ್ಕೆ ನಿರ್ಮಿಸಿ ಕೊಡಲು ಫ್ರಾನ್ಸ್ ಸಿದ್ಧವಾಗಿದೆ. 110 ಕಿಲೋ ನ್ಯೂಟನ್ ಥ್ರಸ್ಟ್ ಏರ್​ಕ್ರಾಫ್ಟ್ ಎಂಜಿನ್​ಗಳ ಸಂಪೂರ್ಣ ತಂತ್ರಜ್ಞಾನ ರವಾನೆಗೂ (ಟೆಕ್ನಾಲಜಿ ಟ್ರಾನ್ಸ್​ಫರ್) ಫ್ರಾನ್ಸ್ ಸಿದ್ಧ ಇದೆ. ಪೂರ್ಣ ಸಾಮರ್ಥ್ಯದ ಅಂಡರ್​ವಾಟರ್ ಡ್ರೋನ್​ಗಳನ್ನು ಕೂಡ ತಂತ್ರಜ್ಞಾನ ರವಾನೆ ಸಮೇತ ಭಾರತಕ್ಕೆ ತಯಾರಿಸಿಕೊಡಲು ಫ್ರಾನ್ಸ್ ಮನಸು ಮಾಡಿದೆ. ಈ ಎಲ್ಲಾ ವಿಚಾರಗಳು ಅಜಿತ್ ದೋವಲ್ ಮತ್ತು ಇಮ್ಯಾನುಯಲ್ ಬೋನ್ನೆ ಮಾತುಕತೆಯಲ್ಲಿ ಪ್ರಮುಖ ಅಜೆಂಡಾದ ಭಾಗವಾಗಿರಲಿವೆ.

ಇದನ್ನೂ ಓದಿ: ಅಮೆರಿಕದಲ್ಲಿ ಟಾಪ್ ಕಂಪನಿಗಳ ಸಿಇಒಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ; ಭಾರತದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ವಿವರಣೆ

ಭಾರತದ ವಿದೇಶಾಂಗ ನೀತಿಯನ್ನು ಕಾರ್ಯರೂಪಕ್ಕೆ ತರಲು ಅಜಿತ್ ದೋವಲ್ ಬಹಳ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಒಂದು ನೀತಿಯ ಜಾರಿಗೆ ಸರಿಯಾದ ವೇದಿಕೆ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಫ್ರಾನ್ಸ್ ಭೇಟಿ ಸಂದರ್ಭದಲ್ಲಿ ಅಜಿತ್ ದೋವಲ್ ಅವರು ಅಲ್ಲಿನ ಪ್ರಧಾನಿ ಇಮ್ಯಾನುಲ್ ಮ್ಯಾಕ್ರೋನ್ ಅವರನ್ನೂ ಭೇಟಿ ಮಾಡಲಿದ್ದಾರೆ. ಯೂರೋಪ್​ಗೆ ತಲೆನೋವಾಗಿರುವ ರಷ್ಯಾ ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸಲು ಭಾರತ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಮ್ಯಾಕ್ರೋನ್​ಗೆ ಜೊತೆ ದೋವಲ್ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಭಾರತ, ಫ್ರಾನ್ಸ್​ನಿಂದ ಜಂಟಿಯಾಗಿ ಮಿಲಿಟರಿ ಸೆಟಿಲೈಟ್ ಅಭಿವೃದ್ಧಿ

ಫ್ರಾನ್ಸ್ ಪ್ರಧಾನಿ ಇಮ್ಯಾನುಯಲ್ ಮ್ಯಾಕ್ರೋನ್ ಜನವರಿ 26ರಂದು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಫ್ರಾನ್ಸ್​ನ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೀಕೊರ್ನು ಮತ್ತು ಅಜಿತ್ ದೋವಲ್ ಅವರು ಮಿಲಿಟರಿ ಸೆಟಿಲೈಟ್​ಗಳ ತಯಾರಿಕೆಗೆ ಲೆಟರ್ ಆಫ್ ಇಂಟೆಂಟ್ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದದ ಆಶಯ ಸಾಕಾರಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಲಿವೆ.

ಇದನ್ನೂ ಓದಿ: ನರೇಂದ್ರ ಮೋದಿಯನ್ನು ಶ್ಲಾಘಿಸಿದ ಗೂಗಲ್ ಮತ್ತು ನಿವಿಡಿಯಾ ಸಿಇಒಗಳು

ಭಾರತದ ನೌಕಾಪಡೆ ಎರಡು ನ್ಯೂಕ್ಲಿಯಾರ್ ಅಟ್ಯಾಕ್ ಸಬ್​ಮರೀನ್​ಗಳ ಅವಶ್ಯಕತೆ ಇದೆ ಎಂದು ಸರ್ಕಾರಕ್ಕೆ ಬೇಡಿಕೆ ಇಡುತ್ತಿದೆ. ಇದೇ ಹೊತ್ತಲ್ಲಿ ಫ್ರಾನ್ಸ್ ಈ ಸಬ್​ಮರೀನ್​ಗಳನ್ನು ನಿರ್ಮಿಸಲು ಆಸಕ್ತಿ ತೋರಿದೆ. ಗಾಳಿ, ನೆಲ ಮತ್ತು ನೀರೊಳಗೆ ಭಾರತದ ಸರ್ವೇಕ್ಷಣ ಮತ್ತು ಗುಪ್ತಚರ ಸಾಮರ್ಥ್ಯ ಹೆಚ್ಚಿಸುವಂತಹ ಮತ್ತು ಜಲಾಂತರ್ಗಾಮಿ ನೌಕೆಯಂತಹ ಮಹತ್ವದ ಆಸ್ತಿಗಳನ್ನು ರಕ್ಷಿಸುವಂತಹ ಪೂರ್ಣ ಪ್ರಮಾಣದ ಸ್ವಾಯತ್ತವಾದ ವ್ಯವಸ್ಥೆಯನ್ನು ಭಾರತಕ್ಕೆ ನಿರ್ಮಿಸಿಕೊಡಲೂ ಫ್ರಾನ್ಸ್ ಆಸಕ್ತಿ ತೋರಿದೆ.

ಇದೇ ವೇಳೆ, ಎಪ್ಪತ್ತರದ ದಶಕದಲ್ಲಿ ಸ್ಪೇಸ್ ರಾಕೆಟ್ ಎಂಜಿನ್​ಗಳ ತಯಾರಿಕೆಯಲ್ಲಿ ಇಸ್ರೋಗೆ ಸಹಾಯ ಮಾಡಿದ್ದ ಫ್ರಾನ್ಸ್​ನ ಸಫ್ರನ್ ಎಂಜಿನ್ಸ್ ಸಂಸ್ಥೆಈಗ 110 ಕೆ ನ್ಯೂಟನ್ ಥ್ರಸ್ಟ್ ಎಂಜಿನ್​ಗಳನ್ನು ತಯಾರಿಸಲು ಮುಂದೆ ಬಂದಿದೆ. ಇದು ಬಹಳ ಸುಧಾರಿತ ಯುದ್ಧ ವಿಮಾನ ತಯಾರಿಕೆಗೆ ಬಹಳ ಅಗತ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ